
ಮೈಸೂರು: ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. ಬರೀ ಬುರುಡೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ. ತಮ್ಮ ರಕ್ಷಣೆಗಾಗಿ ಅಹಿಂದ ಕಾರ್ಡ್, ಜಾತಿಗಣತಿ ಕಾರ್ಡ್ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಅವರದ್ದು ಬರೀ ಉತ್ತರನ ಪೌರುಷ ಅಷ್ಟೇ ಎಂದು ಎಂಎಲ್‌ಸಿ ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡದೇ, ಇಟ್ಟುಕೊಂಡಿದ್ದೀರಾ, ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಥರ. ಕ್ಯಾಬಿನೆಟ್ ಅಲ್ಲಿ ತೀರ್ಮಾನ ಅಂದ್ರು ಏನಾಯ್ತು? ಸಿದ್ದರಾಮಯ್ಯ ಅವರೇ ಮೊದಲು ಜಾತಿಗಣತಿ ವರದಿ ಬಿಡುಗಡೆ ಮಾಡಿ. ಕರ್ನಾಟಕಕ್ಕೆ ನೀವೇ ಹೈಕಮಾಂಡ್, ನಿಮಗೆ ಹೈಕಮಾಂಡ್ ಹೆದರುತ್ತೆ. ಅಹಿಂದ, ಅಹಿಂದ ಅಂತೀರಾ ಜಾತಿಗಣತಿ ವರದಿ ಬಿಡುಗಡೆ ಮಾಡಿ.
ನೀವು ಜಾತಿಗಣತಿ ವರದಿಯನ್ನು ನಿಮ್ಮ ರಕ್ಷಣೆಗೆ ಇಟ್ಟುಕೊಂಡಿದ್ದೀರಾ. 10 ವರ್ಷದಿಂದ ಏಕೆ ಇಟ್ಟುಕೊಂಡಿದ್ದೀರಾ? ಅದನ್ನು ಸಾರ್ವಜನಿಕ ಚರ್ಚೆಗೆ ಬಿಡಿ. ಅದನ್ನು ಬಿಟ್ಟು ಸುಮ್ಮನೇ ಏಕೆ ಮಾತನಾಡುತ್ತೀರಾ? ವರದಿಯನ್ನು ಬಹಿರಂಗ ಮಾಡಿ ಅಧಿಕಾರದ ಕೊನೆಯಲ್ಲಿ ಇದ್ದೀರಿ, ಬಿಡುಗಡೆ ಮಾಡಿ ಎಂದು ಹೇಳಿದರು.
ಇನ್ನು ಕಾರ್ಯಕ್ರಮವೊಂದರಲ್ಲಿ ಜಿಲ್ಲಾಧಿಕಾರಿಯನ್ನು ಏಕ ವಚನದಲ್ಲಿ ಬೈಯ್ದು ಅವಮಾನ ಮಾಡಿದ್ದಾರೆ. ಒಬ್ಬ ಸಿಎಂ ಗೆ ಇರಬೇಕಾದ ಯೋಗ್ಯತೆ ಅಲ್ಲ ಇದು. ಎಲ್ಲರನ್ನೂ ಏಕವಚನದಲ್ಲಿ ಮಾತಾಡಿಸೋದು ಸಿದ್ದರಾಮಯ್ಯಗೆ ಚಟ. ಅಧಿಕಾರದಿಂದ ಸಿದ್ದರಾಮಯ್ಯ ಕೆಳಗಿಳಿದ ಮೇಲೆ ಅವರ ಪರಿಸ್ಥಿತಿ ಏನಾಗುತ್ತದೆ ಎಂದು ನೆನಪಿಸಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ದೇವರಾಜ ಅರಸುಗಿಂತಾ ದೊಡ್ಡ ಲೀಡರ್ ಏನೂ ಅಲ್ಲ.ದೇವರಾಜ ಅರಸು ಅವರೇ ಯಾವತ್ತೂ ಅಹಂಕಾರ ತೋರಲಿಲ್ಲ ಎಂದರು. ಅಲ್ಲದೆ ಮೂಡಾದಲ್ಲಿ ಭ್ರಷ್ಟಾಚಾರ ಮಾಡಿದ ಇಬ್ಬರು ಆಯುಕ್ತರನ್ನು ಮುಟ್ಟುವ ಯೋಗ್ಯತೆ ಇಲ್ಲ. ನೀವು ಒಬ್ಬ ಡಿಸಿ ಮೇಲೆ ದರ್ಪ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ವಿಚಾರಕ್ಕೆ ಎಚ್ ವಿಶ್ವನಾಥ್ ಖಂಡನೆ ವ್ಯಕ್ತಪಡಿಸಿದ್ದು, ಗೋಮಾತೆಯನ್ನು ಪೂಜಿಸುತ್ತೇವೆ. ಗೋಮಾತೆಯ ಕೆಚ್ಚಲು ಕುಯ್ಯುವ ಸ್ಥಿತಿಗೆ ಈ ರಾಜ್ಯವನ್ನು ಸಿದ್ದರಾಮಯ್ಯ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
Advertisement