
ಬೆಂಗಳೂರು: ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಿನ್ನಮತೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಅಧ್ಯಕ್ಷರನ್ನು ಬದಲಿಸುವ, ರಾಜ್ಯದ ಮುಂದಿನ ಅಧ್ಯಕ್ಷರನ್ನು ನೇಮಿಸಲು 'ಪಾರದರ್ಶಕ' ಚುನಾವಣಾ ಪ್ರಕ್ರಿಯೆಯ ಅಗತ್ಯವಿದೆ. ಕೇಸರಿ ಪಕ್ಷದಲ್ಲಿ ಹೆಚ್ಚುತ್ತಿರುವ ಭಿನ್ನಮತದ ಹಿನ್ನೆಲೆಯಲ್ಲಿ, ಕೂಲಂಕುಷ ಪರೀಕ್ಷೆಯ ಅಗತ್ಯವನ್ನು ಗೌಡರು ಒತ್ತಿ ಹೇಳಿದರು.
ಜನರು ಇಷ್ಟಪಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು. ಅದರಿಂದ ಪಕ್ಷಕ್ಕೆ ಪ್ರಯೋಜನವಾಗಬೇಕು ಎಂದರು. ಕೋರ್ ಕಮಿಟಿ ಸದಸ್ಯರನ್ನು ಬದಲಾಯಿಸುವುದು ಪರಿಹಾರವಲ್ಲ, ಏಕೆಂದರೆ ಅದು ಸಂಭಾವಿತರ ಸದಸ್ಯತ್ವವನ್ನು ಖಚಿತಪಡಿಸುವುದಿಲ್ಲ ಎಂದು ಗೌಡರು ಅಭಿಪ್ರಾಯಪಟ್ಟರು.
ಬಿಜೆಪಿ ರಾಜ್ಯಾಧ್ಯಕ್ಷರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯ ಮೂಲಕ ಅಧಿಕೃತ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ, ರಾಜ್ಯಾಧ್ಯಕ್ಷರು ಭಿನ್ನಮತೀಯ ಗುಂಪುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಮ್ಮ ವೈಫಲ್ಯಗಳು ಇಂದು ಮಾಧ್ಯಮಗಳಿಗೆ ಆಹಾರವಾಗಿವೆ ಎಂದು ಗೌಡರು ಹೇಳಿದರು.
ಪಾರದರ್ಶಕ ಅಧ್ಯಕ್ಷರ ಆಯ್ಕೆ ಮಾತ್ರ ಪಕ್ಷಕ್ಕೆ ಬಲ ನೀಡುತ್ತದೆ. ಗುಂಪುಗಾರಿಕೆ ತಳಮಟ್ಟದಲ್ಲಿ ಬೇರು ಬಿಟ್ಟಿದೆ. ಅದನ್ನು ಮೊದಲು ಪರಿಗಣಿಸಬೇಕು. ನಂತರ ಇತರ ವಿಷಯಗಳು ಮುಖ್ಯವಾಗುತ್ತವೆ ಎಂದರು. ಇನ್ನು ಸದಾನಂದ ಗೌಡರ ಹೇಳಿಕೆಯು ವಿಜಯೇಂದ್ರಗೆ ಮತ್ತೊಂದು ಹೊಡೆತ ನೀಡಿದೆ. ಕಾರಣ ಈಗಾಗಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮತ್ತು ಇತರರನ್ನು ಒಳಗೊಂಡ ಭಿನ್ನಮತೀಯರಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ.
Advertisement