ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಶಾಸಕರು, ಸಂಸದರೊಂದಿಗೆ ಚರ್ಚಿಸಿಲ್ಲ: ರಣದೀಪ್ ಸಿಂಗ್ ಸುರ್ಜೇವಾಲಾ; Video

ಶಾಸಕರು ಮತ್ತು ಸಂಸದರ ಸ್ವಂತ ಕ್ಷೇತ್ರಗಳಲ್ಲಿ ಆಗಿರುವ ಕೆಲಸಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಭೇಟಿಯಾಗುತ್ತಿದ್ದೇನೆ ಎಂದು ಸುರ್ಜೇವಾಲಾ ವಿವರಿಸಿದರು.
Randeep Singh Surjewala
ರಣದೀಪ್ ಸಿಂಗ್ ಸುರ್ಜೇವಾಲಾ
Updated on

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ಯಾವುದೇ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಂಗಳವಾರ ತಳ್ಳಿಹಾಕಿದ್ದಾರೆ.

ಶಾಸಕರು ಮತ್ತು ಸಂಸದರ ಸ್ವಂತ ಕ್ಷೇತ್ರಗಳಲ್ಲಿ ಆಗಿರುವ ಕೆಲಸಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಭೇಟಿಯಾಗುತ್ತಿದ್ದೇನೆ ಎಂದು ಸುರ್ಜೇವಾಲಾ ವಿವರಿಸಿದರು.

'ಕೆಲವರು ನಾಯಕತ್ವ ಬದಲಾವಣೆಯ ಬಗ್ಗೆ ಶಾಸಕರು ಮತ್ತು ಸಂಸದರ ಅಭಿಪ್ರಾಯ ಸಂಗ್ರಹಿಸುತ್ತಿದ್ದೀರಾ ಎಂದು ನನ್ನನ್ನು ಕೇಳಿದರು. ನಿನ್ನೆಯೂ ನಾನು ನೀಡಿದ್ದ ಉತ್ತರವನ್ನೇ ಇಂದು ಮತ್ತೆ ಹೇಳುತ್ತಿದ್ದೇನೆ. ಒಂದೇ ಪದದಲ್ಲಿ ಹೇಳುವುದಾದರೆ ಸ್ಪಷ್ಟವಾಗಿ 'ಇಲ್ಲ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆಗಿದ್ದ ಸುರ್ಜೇವಾಲಾ, 'ಪಕ್ಷದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.

ಮುಂದಿನ ಏಳೆಂಟು ದಿನಗಳಲ್ಲಿ ಎಲ್ಲ ಶಾಸಕರನ್ನು ಭೇಟಿ ಮಾಡುವುದಾಗಿಯೂ ಅವರು ಹೇಳಿದರು.

'ನಾವು ಶಾಸಕರು ಮತ್ತು ಸಂಸದರನ್ನು ಭೇಟಿಯಾಗುತ್ತಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಅವರು ತಮ್ಮ ಕ್ಷೇತ್ರಗಳಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು ಮುಖ್ಯ' ಎಂದು ಹೇಳಿದರು.

'ನಾನು ಶಾಸಕನಾಗಿದ್ದರೆ, ಜನರಿಗೆ ನನ್ನ ಹೊಣೆಗಾರಿಕೆ ಮತ್ತು ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳನ್ನು ನನ್ನ ಕ್ಷೇತ್ರದಲ್ಲಿ ಈಡೇರಿಸಲು ನಾನು ಬದ್ಧನಾಗಿರುತ್ತೇನೆ. ಆದ್ದರಿಂದ, ಶಾಸಕರು ತಮ್ಮ ರಿಪೋರ್ಟ್ ಕಾರ್ಡ್‌ಗಳನ್ನು ನೀಡುವಂತೆ ಕೇಳುತ್ತಿದ್ದೇನೆ. ಐದು ಖಾತರಿಗಳ ಅನುಷ್ಠಾನದ ಸ್ಥಿತಿಯನ್ನು ನೋಡುವುದು ಅಗತ್ಯವಾಗಿದೆ' ಎಂದು ಅವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ, ವಿಧಾನಸಭೆ ಕಾಂಗ್ರೆಸ್ ಸಮಿತಿಯ ಸ್ಥಿತಿಗತಿ ಮತ್ತು ಅವರು ಕಾಲಕಾಲಕ್ಕೆ ನಡೆಸಿದ ಪಕ್ಷದ ಸಭೆಗಳ ಸಂಖ್ಯೆಯ ಬಗ್ಗೆಯೂ ಶಾಸಕರನ್ನು ಕೇಳಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

'ನಾವು ಅವರನ್ನು (ಶಾಸಕರನ್ನು) ಕೇಳುತ್ತಿದ್ದೇವೆ, ಅವರಿಗೆ ಏನಾದರೂ ತೊಂದರೆ ಅಥವಾ ಆಕಾಂಕ್ಷೆ ಇದ್ದರೆ ಹೇಳಬಹುದು. ಪ್ರತಿಯೊಬ್ಬ ಶಾಸಕರಿಗೂ ಕೆಲವು ಆಕಾಂಕ್ಷೆಗಳು ಅಥವಾ ಕ್ಷೇತ್ರದಲ್ಲಿ ಇನ್ನೂ ಕೆಲವು ಕೆಲಸಗಳು ಇರುತ್ತವೆ. ಅವರ ಆಕಾಂಕ್ಷೆಗಳನ್ನು ಸರ್ಕಾರಕ್ಕೆ ತಿಳಿಸಲಾಗುವುದು ಮತ್ತು ಆದ್ಯತೆಯ ಆಧಾರದ ಮೇಲೆ ಉತ್ತಮವಾಗಿ ಮಾಡಬಹುದಾದದ್ದನ್ನು ಕೈಗೆತ್ತಿಕೊಳ್ಳಲಾಗುವುದು' ಎಂದು ಅವರು ವಿವರಿಸಿದರು.

Randeep Singh Surjewala
ಡಿಕೆಶಿಗೆ 100 ಶಾಸಕರ ಬೆಂಬಲ; ಈಗ ಸಿಎಂ ಬದಲಾಯಿಸದಿದ್ರೆ ಮುಂದೆ ಕಷ್ಟ: ಪಕ್ಷಕ್ಕೆ ಶಾಸಕ ಇಕ್ಬಾಲ್ ಹುಸೇನ್ ಎಚ್ಚರಿಕೆ!

ಶಾಸಕರ ನಂತರ, ತಮ್ಮ ಕ್ಷೇತ್ರಗಳಲ್ಲಿ ಸಚಿವರು ಏನು ಮಾಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರನ್ನು ಭೇಟಿ ಮಾಡಲಾಗುವುದು. ಎನ್‌ಎಸ್‌ಯುಐ, ಮಹಿಳಾ ಕಾಂಗ್ರೆಸ್, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ, ಅಲ್ಪಸಂಖ್ಯಾತ, ಕಿಸಾನ್ ಇಲಾಖೆಗಳು ಮತ್ತು ಯುವ ಕಾಂಗ್ರೆಸ್‌ನಂತಹ ಸಂಘಟನೆಗಳ ಪಾತ್ರವನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ ಎನ್ನುವುದು ಕರ್ನಾಟಕದಲ್ಲಿ ಬಿಜೆಪಿ ಹರಡಿದ ಸುಳ್ಳು. ಅವರು ಖಾತರಿಗಳನ್ನು ಸ್ಥಗಿತಗೊಳಿಸಬೇಕೆಂದು ಬಯಸುತ್ತಾರೆ. ಆರ್. ಅಶೋಕ ಅವರಿಂದ ವಿಜಯೇಂದ್ರವರೆಗಿನ ಬಿಜೆಪಿ ನಾಯಕರು ಐದು ಖಾತರಿಗಳನ್ನು ನಿಲ್ಲಿಸಬೇಕೆಂದು ಬಯಸುತ್ತಿದ್ದಾರೆ ಎಂದು ನಾನು ಪುನರುಚ್ಚರಿಸುತ್ತೇನೆ. ಕನ್ನಡಿಗರ ಖಾತೆಗಳಿಗೆ ಪಾರದರ್ಶಕ ರೀತಿಯಲ್ಲಿ 58,000 ಕೋಟಿ ರೂ. ಹೋಗಬಾರದು ಎಂದು ಅವರು ಬಯಸುತ್ತಾರೆ' ಎಂದು ಅವರು ಆರೋಪಿಸಿದರು.

ಐದು ಖಾತರಿಗಳನ್ನು ಎಂದಿಗೂ ನಿಲ್ಲಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದರು.

ತಮ್ಮ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಕೆಲವು ಕಾಂಗ್ರೆಸ್ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಸರ್ಕಾರದ ಬಳಿ ಸಾಕಷ್ಟು ಹಣವಿದೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಶಾಸಕರ ಬಗ್ಗೆ ಮಾತನಾಡಿದ ಅವರು, 'ಪಕ್ಷದಲ್ಲಿ ಏನೇ ಆದರೂ ಅಧು ಪಕ್ಷದೊಳಗೆ ಉಳಿಯಬೇಕು. ಶಾಸಕರಿಗೂ ನಾನು ಸಲಹೆ ನೀಡಿದ್ದೇನೆ. ಅವರಿಗೆ ಏನಾದರೂ ಸಮಸ್ಯೆ ಇದ್ದರೆ, ಆ ಸಮಸ್ಯೆಯನ್ನು ಬಹಿರಂಗವಾಗಿ ಹೇಳುವ ಬದಲು ಸಂಬಂಧಪಟ್ಟವರೊಂದಿಗೆ ಚರ್ಚಿಸಲು ಸೂಚಿಸಿದ್ದೇನೆ. ಪಿಸಿಸಿಯಲ್ಲಿ ಶಿವಕುಮಾರ್ ಇದ್ದಾರೆ ಮತ್ತು ಸರ್ಕಾರದಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದರು.

Randeep Singh Surjewala
ಒನ್ ಟು ಒನ್ ಸಭೆ ಮುಂದುವರೆಸಿದ ರಣದೀಪ್ ಸುರ್ಜೇವಾಲಾ: ಶಾಸಕರ ಸಾಧನೆಗಳ ಬಗ್ಗೆ ಫುಲ್ ಕ್ಲಾಸ್!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com