ಶಾಲಿನಿ ರಜನೀಶ್‌ ವಿರುದ್ಧ ಅಸಭ್ಯ ಹೇಳಿಕೆ: BJP, ಮನುಸ್ಮೃತಿ ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಅಶ್ಲೀಲವಾಗಿ ಮಾತನಾಡುವವರು ಹುಚ್ಚಾಸ್ಪತ್ರೆಯಲ್ಲಿರಬೇಕು. ಆದರೆ, ಅಂತಹವರನ್ನು ಬಿಜೆಪಿ ಮೇಲ್ಮನೆಯಲ್ಲಿ ಕೂರಿಸಿದೆ.
Minister Priyank Kharge
ಸಚಿವ ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಎಂಎಸ್'ಸಿ ರವಿಕುಮಾರ್ ಅವರು ನೀಡಿರುವ ಅಸಭ್ಯ ಹೇಳಿಕೆ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆಯವರು ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಭ್ಯ, ಅಶ್ಲೀಲವಾಗಿ ಮಾತನಾಡುವವರು ಹುಚ್ಚಾಸ್ಪತ್ರೆಯಲ್ಲಿರಬೇಕು. ಆದರೆ, ಅಂತಹವರನ್ನು ಬಿಜೆಪಿ ಮೇಲ್ಮನೆಯಲ್ಲಿ ಕೂರಿಸಿದೆ. ಮೇಲ್ಮನೆಯಲ್ಲಿ ಯಾರಿದ್ದಾರೆ ನೀವೇ ನೋಡಿ ಸ್ವಾಮಿ, ಎಂಎಲ್‌ಸಿ ರವಿಕುಮಾರ್ ಮೂಲತಃ ಬಿಜೆಪಿಯವರಲ್ಲ. ಆರ್‌ಸ್ಸೆಸ್ ಶಾಖೆಯಿಂದ ಬಂದವರು, ಅವರು ಮನುಸ್ಮೃತಿ ಹಿನ್ನಲೆಯಿಂದ ಬಂದವರು. ಮನುಸ್ಮೃತಿಯಲ್ಲಿ ಮಹಿಳೆಯರ ಬಗ್ಗೆ ಎನು ಗೌರವ ಇದೆ ಅಂತ ಎಲ್ಲರಿಗೂ ಗೊತ್ತು. ಕೊಳಕು ಬುದ್ಧಿ ರವಿಕುಮಾರ್‌ನಲ್ಲಿದೆ, ರವಿಕುಮಾರ್ ನಿಮ್ಹಾನ್ಸ್ ನಲ್ಲಿರಬೇಕು ಎಂದು ವಾಗ್ದಾಳಿ ನಡೆಸಿದರು.

ತಾವು ಹಾಗೇ ಮಾತೇ ಆಡಿಲ್ಲ, ಅಶ್ಲೀಲ ಮತನಾಡಿದ್ದರೆ ನೇಣು ಹಾಕಿಕೊಳ್ಳುತ್ತೇನೆಂಬ ರವಿಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಹಾಗಿದ್ದರೆ ನೇಣು ಹಾಕಿಕೊಳ್ಳಲು ಹಗ್ಗ ಕೊಡಿ ಅವರಿಗೆ, ಇವರಿಗೆ ಇದಕ್ಕಿಂದ ಸಾಕ್ಷಿ ಬೇಕಾ ವಿಡಿಯೋದಲ್ಲೆ ಎಲ್ಲಾ ಇದೆ, ರವಿಕುಮಾರ್‌ಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ರವಿಕುಮಾರ್ ಅವರಿಗೆ ಮಾನಸಿಕ‌‌ ಚಿಕಿತ್ಸೆ ಅಗತ್ಯವಿದೆ, ಬಿಜೆಪಿಯವರು ಕೇಳುವ ಕ್ಷಮೆಯು ಪಶ್ಚಾತಾಪದ ಕ್ಷಮೆಯಲ್ಲ, ಪಲಾಯನವಾದದ ಕ್ಷಮೆ, ಮಹಿಳಾ ಅಧಿಕಾರಿಗಳನ್ನು ನಿಂದಿಸುವುದು ರವಿಕುಮಾರ್ ಗೆ ಚಟವಾದ ಹಿನ್ನೆಲೆ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದರು.

ಮಾಡಿದ ತಪ್ಪನ್ನೇ ಪದೇ ಪದೇ ಮಾಡುವುದು, ಮತ್ತೆ ಮತ್ತೆ ಕ್ಷಮೆ ಕೇಳುವುದು ಬಿಜೆಪಿಯವರಿಗೆ ಸಾವರ್ಕರ್ ರಿಂದ ಬಂದ ರಕ್ತಗತ ಗುಣ ಇರಬಹುದು, ಮಹಿಳಾ ಅಧಿಕಾರಿಗಳನ್ನೇ ಈ ಪರಿ ನಿಂದಿಸಿದರೆ, ಸಾಮಾನ್ಯ ಮಹಿಳೆಯರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳಬಹುದು? ಇದನ್ನು ಜನರೇ ತೀರ್ಮಾನಿಸಬೇಕು ಎಂದು ಹೇಳಿದರು.

Minister Priyank Kharge
ಶಾಲಿನಿ ರಜನೀಶ್‌ ವಿರುದ್ಧ ಅಸಭ್ಯ ಹೇಳಿಕೆ: ದೂರು ಬೆನ್ನಲ್ಲೇ MLC ರವಿಕುಮಾರ್ ಸ್ಪಷ್ಟನೆ ಕೋರಿದ ಸಭಾಪತಿ ಹೊರಟ್ಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com