
ಬೆಂಗಳೂರು: ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡುವುದಿಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಗೋವಾ ಸಿಎಂ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಗೋವಾ ಸಿಎಂ ಮಾನಸಿಕ ಸ್ಥಿಮತ ಕಳೆದುಕೊಂಡಿದ್ದಾರೆ. ಗೋವಾ ಸಿಎಂಗೆ ಫೆಡರಲ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ.ಈಗಾಗಲೇ ಮಹದಾಯಿ ಯೋಜನೆ ಬಗ್ಗೆ ಅವಾರ್ಡ್ ತೀರ್ಮಾ ಆಗಿದೆ. ಟೆಂಡರ್ ಕೂಡ ಕರೆಯಲಾಗಿದೆ. ಕೆಲಸ ಶುರು ಮಾಡಬೇಕು. ಇದರ ಮಧ್ಯೆ ಅರಣ್ಯ ಇಲಾಖೆ ಏನೋ ನೊಟೀಸ್ ಕೊಟ್ಟಿದೆ. ನಾವು ಅದಕ್ಕೆ ಎಲ್ಲಾ ಉತ್ತರ ಕೊಡುತ್ತೇವೆ. ಮಹದಾಯಿ ವಿಷಯದಲ್ಲಿ ನಮ್ಮ ಕೆಲಸ ನಾವು ಪ್ರಾರಂಭ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸಂಸದ ಸ್ಥಾನಕ್ಕಾಗಿ ರಾಜ್ಯವನ್ನು ಮಾರಿಕೊಳ್ಳೋದಕ್ಕೆ ಆಗಲ್ಲ: ಸಂಸದರ ವಿರುದ್ಧ ಡಿಸಿಎಂ ಗರಂ
ಇದೇ ವೇಳೆ ಮಹದಾಯಿ ವಿಷಯವಾಗಿಯೂ ಅಸಮಾಧಾನ ವ್ಯಕ್ತಪಡಿಸಿರುವ ಡಿಕೆ ಶಿವಕುಮಾರ್, ಇದು ನಮ್ಮ ರಾಜ್ಯದ ಸಂಸದರ ಸ್ವಾಭಿಮಾನದ ಪ್ರಶ್ನೆ. ಮಹದಾಯಿ ವಿಷಯವಾಗಿ ಈವರೆಗೂ ಸಂಸದರು ಬಾಯಿ ಮುಚ್ಚಿಕೊಂಡಿರೋದೇ ತಪ್ಪು. ಒಂದು MP ಸೀಟಿಗೋಸ್ಕರ ನಾವು ರಾಜ್ಯವನ್ನು ಮಾರಿಕೊಳ್ಳೋಕೆ ಸಾಧ್ಯವಿಲ್ಲ. 28 ಸಂಸದರು, 12 ಜನ ರಾಜ್ಯಸಭೆ ಸದಸ್ಯರು ಈ ಬಗ್ಗೆ ಮಾತಾಡಬೇಕು. ನಾನು ದೆಹಲಿಗೆ ಹೋಗಿ ಸಂಸದರ ಜೊತೆ ಮಾತಾಡುತ್ತೇನೆ. ಪ್ರಧಾನಿ, ಜಲಶಕ್ತಿ ಮಂತ್ರಿಗಳಿಗೂ ಸಮಯ ಕೇಳುತ್ತೇನೆ. ಇದರ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
Advertisement