
ಮೈಸೂರು: ಮುಸ್ಲಿಮರ ವಿರುದ್ಧ ಮಾತನಾಡುವ ಮೂಲಕ ರಾಜಕೀಯದಲ್ಲಿ ಬದುಕುಳಿದಿದ್ದಾರೆ. ಅವರ ಬಗ್ಗೆ ಮಾತನಾಡದೆ ಹೋದರೆ ಅವರಿದೆ ದೇಹದಲ್ಲಿ ರಕ್ತವೇ ಹರಿಯುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ, ಶೇ. 14 ರಷ್ಟು ಜನರು ಮುಸ್ಲಿಮರು, ಕ್ರಿಶ್ಚಿಯನ್ನರು, ಜೈನರು, ಸಿಖ್ಖರು, ಬೌದ್ಧಗಳಿದ್ದಾರೆ. ಜನಸಂಖ್ಯೆಯ ಆಧಾರದ ಮೇಲೆ ಹಣವನ್ನು ಹಂಚಿಕೆ ಮಾಡಬೇಕು. ಆದ್ದರಿಂದ ಮಾರ್ಗಸೂಚಿಗಳ ಪ್ರಕಾರ, ಶೇ. 14 ರಷ್ಟು ಅಲ್ಪಸಂಖ್ಯಾತ ಜನಸಂಖ್ಯೆಗೆ ಸರ್ಕಾರ ರೂ.65,000 ಕೋಟಿ ಹಂಚಿಕೆ ಮಾಡಬೇಕು. ಆದರೆ ಸರ್ಕಾರ ಅಲ್ಪಸಂಖ್ಯಾತರಿಗೆ ಕೇವಲ 4,300 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ, ಇದು ಒಟ್ಟು ಬಜೆಟ್ ಗಾತ್ರದ 4.09 ಲಕ್ಷ ಕೋಟಿ ರೂಪಾಯಿಗಳಲ್ಲಿ ಕೇವಲ ಶೇ.1 ಮಾತ್ರ ಆಗಿದೆ. ಉಳಿದ ಶೇ.99 ರಷ್ಟು ಹಣವನ್ನು ಹಿಂದೂಗಳಿಗೆ ಮೀಸಲಿಡಲಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರಿಗೆ ಬಜೆಟ್ ಹಂಚಿಕೆಗಳ ಬಗ್ಗೆ ಯಾವುದೇ ಜ್ಞಾನವಿಲ್ಲ. ಅವರಿಗೆ ಸಾಮಾನ್ಯ ಜ್ಞಾನವೂ ಇಲ್ಲ. ಆರ್. ಅಶೋಕ, ಛಲವಾದಿ ನಾರಾಯಣ ಮತ್ತು ಸಿ.ಟಿ. ರವಿ ಅವರಂತಹ ಬಿಜೆಪಿ ನಾಯಕರು ಮುಸ್ಲಿಮರು, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ವಿರುದ್ಧ ಮಾತನಾಡುವ ಮೂಲಕ ರಾಜಕೀಯದಲ್ಲಿ ಬದುಕುಳಿದಿದ್ದಾರೆಂದು ಕಿಡಿಕಾರಿದರು.
Advertisement