
ಬೆಂಗಳೂರು: ಆರ್'ಎಸ್ಎಸ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟೀಕೆ ವಿಧಾನಸಭೆಯಲ್ಲಿ ಸೋಮವಾರ ತೀವ್ರ ಗದ್ದಲಕ್ಕೆ ಕಾರಣವಾಯಿತು.
ಮೊದಲಿಗೆ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ. ಬಿಜೆಪಿಯವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂಬ ರಾಜ್ಯಪಾಲರ ಮಾತು ಸರಿಯಿದೆ. ಕಳೆದ ಸರ್ಕಾರದ ಅವಧಿಗಿಂತ ಕೊಲೆ, ಕೊಲೆ ಯತ್ನ, ದರೋಡೆ, ಕಳ್ಳತನ, ಅತ್ಯಾಚಾರ ಎಲ್ಲಾ ಪ್ರಕರಣಗಳೂ ನಮ್ಮ ಸರ್ಕಾರದ ಅವಧಿಯಲ್ಲಿ ಕಡಿಮೆಯಾಗಿವೆ ಎಂದು 2022 ಹಾಗೂ 2024 ನೇ ಸಾಲಿನ ಅಪರಾಧ ಪ್ರಕರಣಗಳನ್ನು ಅಂಕಿ-ಅಂಶಗಳ ಸಹಿತ ಬಿಚ್ಚಿಟ್ಟರು.
ಅಲ್ಲದೆ, ಮಂಗಳೂರಿನಲ್ಲಿ 75 ಕೋಟಿ ರು. ಡ್ರಗ್ಸ್ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದೇವೆ. ನೀವೇ ನಮ್ಮ ಪೊಲೀಸರಿಗೆ ಅಭಿನಂದನೆ ಹೇಳಿದ್ದೀರಿ. ನಾವು ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳನ್ನು ಎಷ್ಟು ತಗ್ಗಿಸಲು ಸಾಧ್ಯವೋ ಅಷ್ಟು ಮಾಡಿದ್ದೇವೆ. ಹಾಗಂತ ನಮಗಿನ್ನೂ ತೃಪ್ತಿಯಾಗಿಲ್ಲ. ಇನ್ನೂ ಇಳಿಕೆ ಮಾಡುವ ಉದ್ದೇಶವಿದೆ. ಆದರೆ, ಅಪರಾಧಗಳನ್ನು ಮಾಡುವುದೇ ನೀವು. ನಿಮ್ಮ ಆರ್‌ಎಸ್ಎಸ್‌ನಿಂದ ಅಪರಾಧ ಹೆಚ್ಚಾಗುತ್ತಿವೆ ಎಂದು ಹೇಳಿದರು.
ಇದಕ್ಕೆ ಬಿಜೆಪಿ ಸದಸ್ಯರು, 'ನೀವು ಗಡಿ ದಾಟಿ ಮಾತನಾಡುತ್ತಿದ್ದೀರಿ. ನಿಮಗೆ ಮೆಮೋರಿ ಲಾಸ್ ಆದಂತಿದೆ. ಇದು ಸರಿಯಲ್ಲ ಹೇಳಿಕೆ ಹಿಂಪಡೆಯಿರಿ' ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಾತನಾಡಿ, 'ನಾನೂ ಕೂಡ ಆರ್‌ಎಸ್‌ಎಸ್‌ನವನೇ. ನಮ್ಮ ಪ್ರಧಾನಿ ಮತ್ತು ಗೃಹ ಸಚಿವರು ಕೂಡ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರು. ಆರ್‌ಎಸ್ಎಸ್ ದೇಶ ಕಟ್ಟಿದರೆ, ನೀವು ದೇಶ ಒಡೆದಿದ್ದೀರಿ. ನಿನ್ನೆ ಮೊನ್ನೆ ಬಂದವರೆಲ್ಲಾ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ಹೇಗೆ?' ಸಿಎಂ ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು ಮತ್ತು ಸ್ಪೀಕರ್ ಅವರನ್ನು ಪದಚ್ಯುತಗೊಳಿಸಬೇಕು ಎಂದರು.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, 'ಹೇ ಅಶೋಕ ನೀನು ಎಲ್ಲಿ ಆರ್‌ಎಸ್‌ಎಸ್‌ಗೆ ಹೋಗಿದೀಯ. ಕಬಡ್ಡಿ ಆಡಿಕೊಂಡು ಇದ್ದೆ. ನೀನು ಯಾವ ಆರ್‌ಎಸ್‌ಎಸ್ ಸಭೆಗೂ ಹೋಗಿಲ್ಲ ಕುಳಿತುಕೋ. ನಾನು ನಿನ್ನೆ ಮೊನ್ನೆ ಬಂದವನಲ್ಲ ನಿನಗಿಂತ ಮೊದಲೇ ವಿಧಾನಸಭೆಗೆ ಬಂದವನು, ನಿಮಗೆ ಎದ್ದು ನಿಂತು ಗಲಾಟೆ ಮಾಡಲು ಹೇಳಿಕೊಟ್ಟಿದ್ದು ಯಾರು ಎಂಬುದು ಕೂಡ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಏತನ್ಮಧ್ಯೆ, ಬಿಜೆಪಿ ಶಾಸಕರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಹೆಸರು ಪ್ರಸ್ತಾಪಿಸಿ ಘೋಷಣೆಗಳನ್ನು ಕೂಗಿದರು. ಅಧ್ಯಕ್ಷತೆ ವಹಿಸಿದ್ದ ಬಿಜೆಪಿಯ ಕೆ.ಎಂ. ಶಿವಲಿಂಗೇಗೌಡ ಅವರು ಸದನವನ್ನು ಎರಡು ಬಾರಿ ಮುಂದೂಡಿದರು.
ಸದನ ಮತ್ತೆ ಕಲಾಪ ಆರಂಭಿಸಿದಾಗ, ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ವಿರುದ್ಧ ಯಾವುದೇ ಅಸಂಸದೀಯ ಭಾಷೆಯನ್ನು ಬಳಸಿಲ್ಲ ಎಂದು ಸಮರ್ಥಿಸಿಕೊಂಡರು,
ರಾಜ್ಯದಲ್ಲಿ ತೊಂದರೆ ಉಂಟುಮಾಡಬಾರದು ಎಂದು ಹೇಳಿದರು. ಬಳಿಕ ಖಾದರ್ ಅವರು ಮುಖ್ಯಮಂತ್ರಿಗಳ ಹೇಳಿಕೆಯನ್ನು ಕಡತದಿಂದ ತೆಗೆಯುವಂತೆ ಸೂಚಿಸಿದರು. ಬಳಿಕ ಸಮಾಧಾನಗೊಂಡ ಪ್ರತಿಪಕ್ಷಗಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದವು.
ಎಸ್‌ಡಿಪಿಐ ಮತ್ತು ಪಿಎಫ್‌ಐನ ಕೆಲವು ಸದಸ್ಯರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಸರ್ಕಾರ ಅವುಗಳ ಏಜೆಂಟ್‌ನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದರು. ಆದರೆ ಸರ್ಕಾರ ಅದನ್ನು ಸ್ಪಷ್ಟವಾಗಿ ನಿರಾಕರಿಸಿತು.ಯ
ಗೃಹ ಇಲಾಖೆಯು ಅಪರಾಧ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮಂಗಳೂರು ಪೊಲೀಸರು ಭಾನುವಾರ ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ, ಇದನ್ನು ನೀವು (ಬಿಜೆಪಿ) ಕೂಡ ಮೆಚ್ಚಿದ್ದೀರಿ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 2022-23ರಲ್ಲಿ (ಬಿಜೆಪಿ ಅಧಿಕಾರದಲ್ಲಿದ್ದಾಗ) 6,406 ರಿಂದ ಫೆಬ್ರವರಿ 2025 ರವರೆಗೆ 4,188 ಕ್ಕೆ ಇಳಿದಿದೆ ಎಂದು ಹೇಳಿದರು.
ಅಂಕಿ ಅಂಶಗಳನ್ನು ಪ್ರಸ್ತುತಪಡಿಸುತ್ತಾ, ಕೊಲೆ ಪ್ರಕರಣಗಳ ಸಂಖ್ಯೆ ಈಗ 1,365 ರಿಂದ 1,209 ಕ್ಕೆ ಇಳಿದಿದೆ, ಕೊಲೆ ಯತ್ನ 2,828 ರಿಂದ 2,809, ಡಕಾಯಿತಿ 215 ರಿಂದ 154, ದರೋಡೆ 1066 ರಿಂದ 991, ಗಲಭೆ 3,930 ರಿಂದ 3,450, ಸರ ಗಳ್ಳತನ 669 ರಿಂದ 617, ಮತ್ತು ಎಸ್‌ಸಿ ಮತ್ತು ಎಸ್‌ಟಿಗಳ ಮೇಲಿನ ದೌರ್ಜನ್ಯ 2,138 ರಿಂದ 2,113ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದರು.
ಅವರ ಹೇಳಿಕೆ ಕಡತದಿಂದ ತೆಗೆಯಬೇಕು' ಎಂದು ಒತ್ತಾಯಿಸಿದರು. ಇದೇ ವೇಳೆ 'ಕಾಂಗ್ರೆಸ್ ಪಾಕಿ ಸ್ತಾನ ಏಜೆಂಟ್, ಜೈ ಶ್ರೀರಾಮ್, ಆರ್‌ಎಸ್‌ಎಸ್ ಜಿಂದಾಬಾದ್' ಎಂದು ಘೋಷಣೆ ಕೂಗಿದರು.
ಇದರಿಂದ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ತಾರಕಕ್ಕೇರಿ ಕಲಾಪವನ್ನು 10 ನಿಮಿಷ ಕಾಲ ಮುಂದೂಡಲಾಯಿತು. ಬಳಿಕವೂ ಜಗ್ಗದ ಸಿದ್ದರಾಮಯ್ಯ 'ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್ ಕುರಿತ ಹೇಳಿಕೆ ಹಿಂಪಡೆಯುವು ದಿಲ್ಲ. ನಾನು ಇರುವುದನ್ನೇ ಹೇಳಿದ್ದೇನೆ' ಎಂದು ಪಟ್ಟು ಹಿಡಿದ ಕಾರಣ ಮತ್ತೊಮ್ಮೆ ಕಲಾಪ ಮುಂದೂಡಿ ಸಂಧಾನಸಭೆ ನಡೆಸಲಾಯಿತು.
ನಂತರ ಸ್ಪೀಕರ್ ಖಾದರ್, ಸಿದ್ದರಾಮಯ್ಯರ ಆರ್‌ಎಸ್‌ಎಸ್ ಹೇಳಿಕೆ ಹಾಗೂ ಕಾಂಗ್ರೆಸ್ ಪಾಕಿ ಸ್ತಾನ್ ಏಜೆಂಟ್ ಎಂಬ ಪದಗಳನ್ನು ಕಡತದಿಂದ ತೆಗೆಯುವುದಾಗಿ ಹೇಳಿ ಕಲಾಪ ಸುಗಮವಾಗಿ ನಡೆಸಲು ಸಹಕರಿಸುವಂತೆ ಕೋರಿದರು. ಇದರಿಂದ ವಿವಾದ ತಣ್ಣಗಾಯಿತು.
ಏತನ್ಮಧ್ಯೆ, ಕೆಲ ಕಾಂಗ್ರೆಸ್ ಶಾಸಕರು ರಾಷ್ಟ್ರಧ್ವಜವನ್ನು ಪ್ರದರ್ಶಿಸಿದ್ದನ್ನು ಬಿಜೆಪಿ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು, ಇದು ತ್ರಿವರ್ಣ ಧ್ವಜಕ್ಕೆ ಅವಮಾನ ಎಂದು ಕಿಡಿಕಾರಿದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಕಾಂಗ್ರೆಸ್ ಶಾಸಕರೊಬ್ಬರು ಬಿಜೆಪಿ ಶಾಸಕರನ್ನು ಏಕವಚನದಲ್ಲಿ ಸಂಬೋಧಿಸಿದ್ದಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದರು.
ಇದೇ ವೇಳೆ ಕೆಲವು ಬಿಜೆಪಿ ಶಾಸಕರು ಸದನದೊಳಗೆ ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಆರೋಪಿಸಿದರು.
ವೀಡಿಯೊಗಳನ್ನು ಚಿತ್ರೀಕರಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕಾನೂನು ಸಚಿವ ಎಚ್‌ಕೆ ಪಾಟೀಲ್ ಅವರು ಒತ್ತಾಯಿಸಿದರು. ಬಳಿಕ ಸದನದೊಳಗೆ ವೀಡಿಯೊಗಳನ್ನು ಚಿತ್ರೀಕರಿಸದಂತೆ ಸದಸ್ಯರಿಗೆ ಎಚ್ಚರಿಕೆ ನೀಡಲಾಯಿತು.
Advertisement