ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಉಚ್ಚಾಟನೆ ಹೊಸತೇನಲ್ಲ: 'ಜಿಹ್ವಾ ಚಾಪಲ್ಯ'ಕ್ಕೆ ಮೂರನೇ ಬಾರಿ ಪೆಟ್ಟು!

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಇತರ ಪ್ರಮುಖ ನಾಯಕರ ವಿರುದ್ಧ ದಂಗೆ ಎದ್ದಿದ್ದಕ್ಕಾಗಿ ಅವರನ್ನು ಈ ಹಿಂದೆ 2 ಬಾರಿ ಹೊರಹಾಕಲಾಯಿತು.
BJP MLA Basanagouda Patil Yatnal
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್online desk
Updated on

ವಿಜಯಪುರ: ಪಕ್ಷದ ಶಿಸ್ತು ನಿಯಮಗಳನ್ನು ಉಲ್ಲಂಘಿಸಿರುವ ಕಾರಣ ಬಿಜೆಪಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಪಕ್ಷದಿಂದ ಉಚ್ಛಾಟನೆಗೊಳ್ಳುವುದು ಯತ್ನಾಳ್ ಗೆ ಹೊಸದೇನಲ್ಲ, ಈ ಹಿಂದೆಯೂ ಅವರು ಬಾರಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಇತರ ಪ್ರಮುಖ ನಾಯಕರ ವಿರುದ್ಧ ದಂಗೆ ಎದ್ದಿದ್ದಕ್ಕಾಗಿ ಅವರನ್ನು ಈ ಹಿಂದೆ 2 ಬಾರಿ ಹೊರಹಾಕಲಾಯಿತು. 2009 ರಲ್ಲಿ ಯಡಿಯೂರಪ್ಪ ಮತ್ತು ಪ್ರಸ್ತುತ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಆರೋಪ ಮಾಡಿದ್ದಕ್ಕಾಗಿ ಯತ್ನಾಳ್ ಅವರನ್ನು ಉಚ್ಛಾಟಿಸಲಾಗಿತ್ತು.

ಮತ್ತೆ ಅವರು ಪಕ್ಷಕ್ಕೆ ಸೇರಿದರೂ, 2016 ರಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಜಿಎಸ್ ನ್ಯಾಮಗೌಡ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರನ್ನು ಮತ್ತೊಮ್ಮೆ ಹೊರಹಾಕಲಾಯಿತು. ಕುತೂಹಲಕಾರಿಯಾಗಿ, ಅವರು ಪಕ್ಷದ ವಿರುದ್ಧ ಹೋರಾಡಿದರೂ ಚುನಾವಣೆಯಲ್ಲಿ ಗೆದ್ದರು. ಎರಡನೇ ಬಾರಿಗೆ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಲಾಯಿತು.

2018 ರಲ್ಲಿ ಯತ್ನಾಳ್ ಅವರನ್ನು ಪಕ್ಷಕ್ಕೆ ಮರಳಿ ಕರೆತಂದಿದ್ದು ಮತ್ತು ಟಿಕೆಟ್ ನೀಡಿದ್ದು ಯಡಿಯೂರಪ್ಪ. ಹಲವಾರು ಸ್ಥಳೀಯ ನಾಯಕರ ಇಚ್ಛೆಗೆ ವಿರುದ್ಧವಾಗಿಯೂ ಯತ್ನಾಳ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಯತ್ನಾಳ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ, ಏಕೆಂದರೆ ಅವರು ಹಿಂದೂ ಮತಗಳನ್ನು ಕ್ರೋಢೀಕರಿಸಲು ಸಹಾಯ ಮಾಡುತ್ತಾರೆ ಎಂದು ಕೆಲ ನಾಯಕರು ಮನವೊಲಿಸಿದ್ದರಿಂದ ಯಡಿಯೂರಪ್ಪ ಯತ್ನಾಳ್ ಗೆ ಟಿಕೆಟ್ ನೀಡಿದರು" ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

BJP MLA Basanagouda Patil Yatnal
ಯತ್ನಾಳ್ ಉಚ್ಛಾಟನೆ: ಅಶಿಸ್ತಿನ ವಿರುದ್ಧ BJP ವರಿಷ್ಠರು ಕೈಗೊಂಡ ನಿರ್ಧಾರವನ್ನು ಸಂಭ್ರಮಿಸದಿರಿ; ಕಾರ್ಯಕರ್ತರಿಗೆ ವಿಜಯೇಂದ್ರ ಮನವಿ

ಈಗ, 2025 ರಲ್ಲಿ, ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷರಾಗಿರುವ ಅವರ ಮಗ ಬಿ.ವೈ. ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿದ್ದಕ್ಕಾಗಿ ಪಕ್ಷವು ಅವರನ್ನು ಮತ್ತೆ ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಿದೆ.

ಪಕ್ಷದ ನಾಯಕರ ವಿರುದ್ಧ ಯತ್ನಾಳ್ ಅವರ ಅನಿಯಂತ್ರಿತ ಹೇಳಿಕೆಗಳು ಪಕ್ಷವನ್ನು ಹಲವಾರು ಸಂದರ್ಭಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಿಜುಗರದ ಪರಿಸ್ಥಿತಿಯಲ್ಲಿ ಸಿಲುಕಿಸಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ತಮ್ಮ ನಾಲಗೆ ಮೇಲೆ ಹಿಡಿತವಿಟ್ಟುಕೊಳ್ಳುವಂತೆ ಯತ್ನಾಳ್ ಅವರಿಗೆ ಪಕ್ಷ ಎಚ್ಚರಿಕೆ ನೀಡಿತ್ತು, ಆದರೆ ಅವರು ಅದನ್ನು ಎಂದಿಗೂ ಲೆಕ್ಕಿಸಲಿಲ್ಲ ತಮಗೆ ಅನ್ನಿಸಿದ್ದನ್ನು ಮಾಡುತ್ತಲೇ ಹೋದರು.

ಪದೇ ಪದೇ ರಾಜ್ಯಾಧ್ಯಕ್ಷ ವಿರುದ್ಧ ಬಹಿರಂಗ ಹೇಳಿಕೆ ಕೊಡುತ್ತಿರುವುದರಿಂದ ಬಿಜೆಪಿ ಕೇಂದ್ರದ ಶಿಸ್ತು ಸಮಿತಿ ಹಲವು ಬಾರಿ‌ ನೊಟೀಸ್ ನೀಡಿತ್ತು. ಆದರೂ ತಲೆ ಕೆಡಿಸಿಕೊಳ್ಳದ ಯತ್ನಾಳ್, ನೋಟಿಸ್ ಬಂದಾಗ ಉತ್ತರ ನೀಡಿ ಬಳಿಕ ತಮ್ಮ ಮಾತಿನ ಸಮರ ಮುಂದುವರಿಸುತ್ತಿದ್ದರು. ಎರಡು ಬಾರಿ ಶೋಕಾಸ್​ ನೋಟಿಸ್​ ನೀಡಿದ್ದಾಗಲೂ ಸಹ ಯತ್ನಾಳ್​ ಉತ್ತರ ಕೊಟ್ಟು ನಂತರ ಅದೇ ಪ್ರಕಾರ ವಿಜಯೇಂದ್ರ ವಿರುದ್ಧ ಟೀಕೆಗಳನ್ನು ಮಾಡುತ್ತಲೇ ಇದ್ದರು.

ಕೆಲವು ದಿನಗಳ ಹಿಂದೆ, ಯತ್ನಾಳ್ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ ಎಂಬ ವರದಿಗಳನ್ನು ಬಂದಿದ್ದವು, ಆದರೆ ಯತ್ನಾಳ್ ಅದನ್ನು ತಳ್ಳಿಹಾಕಿದ್ದರು. ಯತ್ನಾಳ್ ಪಕ್ಷದಲ್ಲಿಯೇ ಉಳಿಯುತ್ತೇನೆ ಎಂದಿದ್ದರು. ಕೆಲವು ವಿಷಯಗಳನ್ನು ಸರಿಪಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಇಂದು, ಪಕ್ಷ ಅವರನ್ನು ಹೊರಹಾಕಿದೆ.

ಯತ್ನಾಳ್ ಅವರನ್ನು ಹೊರಹಾಕುವ ನಿರ್ಧಾರವನ್ನು ಹಲವಾರು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. "ಈ ನಿರ್ಧಾರವನ್ನು ಬಹಳ ಹಿಂದೆಯೇ ತೆಗೆದುಕೊಳ್ಳಬೇಕಾಗಿತ್ತು, ಈ ಹಿಂದೆಯೇ ಉಚ್ಚಾಟಿಸಿದ್ದರೇ ಪಕ್ಷವು ಹೆಚ್ಚಿನ ಮುಜುಗರ ಅನುಭವಿಸುವುದನ್ನು ತಡೆಯಬಹುದಿತ್ತು. ಈ ನಿರ್ಧಾರವು ಪಕ್ಷದ ವಿರುದ್ಧ ದಂಗೆ ಏಳುತ್ತಿರುವ ಇತರರಿಗೆ ಸಂದೇಶವನ್ನು ಕಳುಹಿಸುತ್ತದೆ ಎಂದು ಪಕ್ಷದ ಮುಖಂಡರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com