

ಬೆಂಗಳೂರು: ಯಾವ ಪ್ರತಿನಿಧಿಯಾಗಿಯೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲ. ನಾಯಕತ್ವ ಗೊಂದಲ, ಬಂಡಾಯವೇ ಇಲ್ಲ ಎಂದ ಮೇಲೆ ಶಮನ ಎಲ್ಲಿ ಬರುತ್ತದೆ ಎಂದು ಇಂಧನ ಸಚಿವ ಕೆಜೆ.ಜಾರ್ಜ್ ಅವರು ಸೋಮವಾರ ಹೇಳಿದ್ದಾರೆ.
ಡಿಕೆ.ಶಿವಕುಮಾರ್ ಭೇಟಿಯ ವೇಳೆ ಬಂಡಾಯ ಶಮನಕ್ಕೆ ಪ್ರಯತ್ನಿಸಲಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆ.ಶಿವಕುಮಾರ್ ಡಿಸಿಎಂ ಆಗಿದ್ದು, ಇದನ್ನು ನಾಯಕತ್ವ ಬದಲಾವಣೆ ಚರ್ಚೆ ಎಂಬ ಗೊಂದಲ ಸೃಷ್ಠಿ ಸರಿಯಲ್ಲ. ಬಿಜೆಪಿಯವರ ಮಾತು ಕೇಳಿ ಬಂಡಾಯ ಎಂಬ ಗೊಂದಲದ ಪ್ರಶ್ನೆಗಳನ್ನು ಕೇಳಿಬೇಡಿ ಎಂದು ಸ್ಪಷ್ಟಪಡಿಸಿದರು.
ಡಿಕೆ.ಶಿವಕುಮಾರ್ ಭೇಟಿ ವೇಳೆ ಬೆಂಗಳೂರು ನಗರ ಪಾಲಿಕೆ ಚುನಾವಣೆ ವಿಚಾರವಾಗಿ ಮಾತುಕತೆ ನಡೆಸಿದೆ. ಎಐಸಿಸಿ ತಮಗೆ ಯಾವುದೇ ವಿಚಾರ ಒಪ್ಪಿಸಿಲ್ಲ. ಅದರ ಜವಾಬ್ದಾರಿಯೂ ನನಗಿಲ್ಲ. ಡಿಕೆ.ಶಿವಕುಮಾರ್ ನಾನು 40 ವರ್ಷಗಳಿಂದ ಪರಿಚಯವಿದ್ದು, ಆತ್ಮೀಯತೆ ಇದೆ. ಹಾಗಾಗಿ ನಾವು ಅವರ ಮನೆಗೆ, ಅವರು ನಮ್ಮ ಮನೆಗೆ ಬರುತ್ತಾರೆ. ಶಿವಕುಮಾರ್ ಅವರನ್ನು ಭೇಟಿಯಾಗುವುದರಲ್ಲಿ ಯಾವುದೇ ವಿಶೇಷತೆಯಿಲ್ಲ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಅಳವಡಿಸಿಕೊಳ್ಳಬೇಕಾದ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
Advertisement