
ಬೆಂಗಳೂರು: ಒಂದು ಹೆಣ್ಣಿಗೋಸ್ಕರ ಮತ್ತು ಆ ಹೆಣ್ಣನ್ನು ಎಂಎಲ್‌ಎ ಮಾಡಬೇಕೆಂಬ ಜಿದ್ದಿಗೆ ಬಿದ್ದು ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಹಿಂದೆ ತಳ್ಳಿ ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿ ಕುಸುಮಾ ಕರೆದುಕೊಂಡು ಶಿವಕುಮಾರ್ ಪಾದಯಾತ್ರೆ ಮಾಡಿ ಸಾರ್ವಜನಿಕ ಕುಂದು ಕೊರತೆ ಸ್ವೀಕರಿಸುತ್ತಾರೆ ಎಂದರೆ ಏನು ಹೇಳಬೇಕು. ಒಂದು ಹೆಣ್ಣಿಗೋಸ್ಕರ ಈ ಹೋಗುವುದಾ ಎಂದು ಪ್ರಶ್ನಿಸಿದರು.
ಇಷ್ಟೊಂದು ಜಿದ್ದಿಗೆ ಬಿದ್ದಿರುವುದಕ್ಕೆ ಎರಡೇ ಕಾರಣಗಳಿವೆ. ಒಂದು, ಈ ಕುಸುಮಾ ಅವರನ್ನು ಶಾಸಕಿ ಮಾಡಬೇಕು. ಇನ್ನೊಂದು ಡಿ.ಕೆ.ಸುರೇಶ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕು. ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನ ನೀಡಲಾಗಿದೆ ಎಂದು ಕುಸುಮಾ ಹೇಳಿದ್ದಾರೆ. ಸರ್ಕಾರಿ ಆಹ್ವಾನದ ಬಗ್ಗೆ ಹೇಳುವುದಕ್ಕೆ ಇವರು ಯಾರೆಂದು ಪ್ರಶ್ನಿಸಿದರು.
ಡಿ.ಕೆ. ರವಿ ಬದುಕಿದ್ದಿದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ. ಈ ಪರಿಸ್ಥಿತಿಯೂ ಎದುರಾಗುತ್ತಿರಲಿಲ್ಲ. ಕುಸುಮಾ ಅವರಿಗೆ ಶಾಸಕರಾಗುವ ಹುಚ್ಚು ಹಿಡಿದಿದೆ. ಹೀಗಾಗಿ, ಡಿ. ಕೆ.ಶಿವಕುಮಾರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮೊಟ್ಟೆ ಹೊಡಿಸಿ, ರೇಪ್ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ರಾಜಣ್ಣ, ರೇವಣ್ಣರಿಗೆ ಹನಿ ಟ್ರ್ಯಾಪ್ ಮಾಡಿಸಿದ್ದಾರೆ. ಎಷ್ಟು ಮನೆ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ 100ನೇ ವರ್ಷದ ಕಾರ್ಯಕ್ರಮ ಮುಗಿಸಿಕೊಂಡು ಬಂದರೆ, ಶಾಸಕರನ್ನು ಏಯ್ ಕರಿ ಟೋಪಿ ಎಂದು ಉಪ ಮುಖ್ಯಮಂತ್ರಿ ಕರೆಯುತ್ತಾರೆ. ಇದು ಆರ್‌ಆರ್ ನಗರ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನವಾಗಿದೆ. ಕನಕಪುರದ ದೌಜನ್ಯವನ್ನು ಬೆಂಗಳೂರಿನಲ್ಲೂ ಮಾಡುತ್ತಿದ್ದಾರೆ ಎಂದು ದೂರಿದರು.
Advertisement