ವೋಟ್ ಚೋರಿ ಬಗ್ಗೆ CID ಚುನಾವಣಾ ಆಯೋಗಕ್ಕೆ 18 ಪತ್ರ ಬರೆದಿದೆ, ಯಾವುದಕ್ಕೂ ಉತ್ತರ ಇಲ್ಲ: ಖರ್ಗೆ
ಬೆಂಗಳೂರು: ಆಳಂದ್ ಕ್ಷೇತ್ರದಲ್ಲಿ "ಸಾಮೂಹಿಕ ಮತದಾರರ ಅಳಿಸುವಿಕೆಯನ್ನು ಬಹಿರಂಗಪಡಿಸಿದ" ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಶ್ಲಾಘಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನಿಜವಾದ ಮತದಾರರನ್ನು ಡಿಲೀಟ್ ಮಾಡಲು ಪ್ರಯತ್ನಿಸುತ್ತಿರುವವರನ್ನು ಚುನಾವಣಾ ಆಯೋಗ "ರಕ್ಷಿಸುತ್ತಿದೆ" ಎಂದು ಆರೋಪಿಸಿದ್ದಾರೆ.
"ಆಳಂದ್ ಮತದಾರರ ಅಳಿಸುವಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಕಳೆದ 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಬರೆದಿದೆ. ಆದರೆ ಅಪರಾಧಿಗಳನ್ನು ಪತ್ತೆಹಚ್ಚಲು ಅಗತ್ಯವಾದ ನಿರ್ಣಾಯಕ ಮಾಹಿತಿಯನ್ನು ಇಸಿಐ ಇದುವರೆಗೂ ನೀಡಿಲ್ಲ. ಚುನಾವಣಾ ಆಯೋಗ ಕಲ್ಲಿನ ಗೋಡೆಯಂತೆ ನಿಂತು ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೂಕ್ತ ಪುರಾವೆಗಳೊಂದಿಗೆ ಶಸ್ತ್ರಸಜ್ಜಿತವಾದ ರಾಹುಲ್ ಗಾಂಧಿ ಅವರು ಕರ್ನಾಟಕದ ಆಳಂದ್ ವಿಧಾನಸಭೆಯಲ್ಲಿ ಸಾಮೂಹಿಕ ಮತ ಅಳಿಸುವಿಕೆಯನ್ನು ಬಹಿರಂಗಪಡಿಸಿದ್ದಾರೆ" ಎಂದು ಖರ್ಗೆ ಎಕ್ಸ್‌ನಲ್ಲಿ ಹೇಳಿದ್ದಾರೆ.
ಮೂರು ಪ್ರಶ್ನೆಗಳನ್ನು ಎತ್ತಿರುವ ಖರ್ಗೆ, ಚುನಾವಣಾ ಆಯೋಗ ಯಾರನ್ನು ರಕ್ಷಿಸುತ್ತಿದೆ? ನಮ್ಮ ಪ್ರಜಾಪ್ರಭುತ್ವವನ್ನುರಕ್ಷಿಸಲು ನೇಮಕಗೊಂಡಿರುವ ಸಂಸ್ಥೆಗಳನ್ನೇ ಬಿಜೆಪಿ ನಾಶಪಡಿಸುತ್ತಿದೆಯೇ? "ವೋಟ್ ಚೋರಿ ಫ್ಯಾಕ್ಟರಿ" ಚುನಾವಣಾ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವಾಗ ನಾವು ಪ್ರಜಾಪ್ರಭುತ್ವನ್ನು ಉಳಿಸಲು ಸಾಧ್ಯವೇ? ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ.
ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರು, ನಕಲಿ ಲಾಗಿನ್ ರಚಿಸಿ 12 ಜನರೊಂದಿಗೆ ತನ್ನ ಹೆಸರನ್ನು ಡಿಲೀಟ್ ಮಾಡಿದ ಗೋದಾಬಾಯಿಯ ಉದಾಹರಣೆಯನ್ನು ಸಹ ನೀಡಿದ್ದಾರೆ.
"ಗೋದಾಬಾಯಿ ಎಂಬ ಮಹಿಳೆ ಹೆಸರಿನಲ್ಲಿ ಯಾರೋ ನಕಲಿ ಲಾಗಿನ್ ಸೃಷ್ಟಿಸಿ, 12 ಮತದಾರರನ್ನು ಡಿಲೀಟ್ ಮಾಡಿದ್ದರು. ಇನ್ನೂ ಹೆಚ್ಚಿನವರ ಹೆಸರನ್ನು ಅಳಿಸಲು ಪ್ರಯತ್ನಿಸಲಾಯಿತು. ಆದರೆ ಈ ಪ್ರಯತ್ನವನ್ನು ನಿಲ್ಲಿಸಲಾಯಿತು. ಗೋದಾಬಾಯಿ, ಸ್ವಾಭಾವಿಕವಾಗಿ, ಇದರ ಬಗ್ಗೆ ಯಾವುದೇ ಜ್ಞಾನವನ್ನು ಹೊಂದಿಲ್ಲ" ಎಂದು ಗೆಹ್ಲೋಟ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ