ನಿಗಮ-ಮಂಡಳಿ ನೇಮಕಾತಿ: ಬೆಂಬಲಿಗರಿಗಾಗಿ ಸಿಎಂ ಸಿದ್ದರಾಮಯ್ಯ-ಶಿವಕುಮಾರ್ ನಡುವೆ ಜಟಾಪಟಿ!

ಬೆಂಗಳೂರು ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿರುವ ಹಿರಿಯ ನಾಯಕ ಮತ್ತು ಎರಡು ಬಾರಿ ಕಾರ್ಪೊರೇಟರ್ ಆಗಿರುವ ಆರ್‌ಎಸ್ ಸತ್ಯನಾರಾಯಣ ಅವರಿಗೆ ಯಾವುದೇ ಚಿಂತೆಯಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಅವರು ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ
Siddaramaiah And Dk shivakumar
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ರಾಜ್ಯದ ವಿವಿಧ ಮಂಡಳಿಗಳು ಮತ್ತು ನಿಗಮಗಳಿಗೆ ಅಧ್ಯಕ್ಷರು ಉಪಾಧ್ಯಕ್ಷರ ನೇಮಕಾತಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ 39 ನಾಮನಿರ್ದೇಶಿತರ ಪಟ್ಟಿಯಿಂದ ಸಿದ್ದರಾಮಯ್ಯ ಅವರು 7 ಮಂದಿಯನ್ನು ಕೈಬಿಟ್ಟಿದ್ದಾರೆ. ನೀಲಕಂಠ ಮುಲ್ಗೆ (ಕೆಕೆಆರ್‌ಟಿಸಿ), ಆರ್‌ಎಸ್ ಸತ್ಯನಾರಾಯಣ (ತಾಪಮಾನ ಮಂಡಳಿ), ಸೈಯದ್ ಮೆಹಮೂದ್ ಚಿಸ್ಟಿ (ದ್ವಿದಳ ಧಾನ್ಯಗಳ ಅಭಿವೃದ್ಧಿ ನಿಗಮ), ಅನಿಲ್‌ಕುಮಾರ್ ಜಮಾದಾರ್ (ತೊಗರಿ ಅಭಿವೃದ್ಧಿ ನಿಗಮ), ಬಿ.ಎಸ್. ಕವಲಗಿ (ಸುಣ್ಣ ಅಭಿವೃದ್ಧಿ ಮಂಡಳಿ), ಅಂಜನಪ್ಪ (ಬೀಜ ಅಭಿವೃದ್ಧಿ ನಿಗಮ) ಮತ್ತು ಶರಣಪ್ಪ ಸಲಾದ್‌ಪುರ (ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಮಂಡಳಿ) ಅವರನ್ನು ಕೈ ಬಿಟ್ಟಿದ್ದಾರೆ.

ಬೆಂಗಳೂರು ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತಿರುವ ಹಿರಿಯ ನಾಯಕ ಮತ್ತು ಎರಡು ಬಾರಿ ಕಾರ್ಪೊರೇಟರ್ ಆಗಿರುವ ಆರ್‌ಎಸ್ ಸತ್ಯನಾರಾಯಣ ಅವರಿಗೆ ಯಾವುದೇ ಚಿಂತೆಯಿಲ್ಲ. ಪಕ್ಷ ಅಧಿಕಾರಕ್ಕೆ ಬಂದರೆ ಅವರು ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಕೆಲವು ನಿಷ್ಠಾವಂತರು ಹೈಕಮಾಂಡ್ ಪಟ್ಟಿಯಿಂದ ಹೊರಗುಳಿದಿದ್ದರಿಂದ, ಸಿಎಂ ಸಿದ್ದರಾಮಯ್ಯ ಬೇರೆ ದಾರಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿಕೇತರಾಜ್ ಮೌರ್ಯ ಅವರನ್ನು ಬಿಎಂಟಿಸಿ ಅಧ್ಯಕ್ಷರನ್ನಾಗಿ ಮತ್ತು ಎಚ್‌ಡಿ ಗಣೇಶ್ ಅವರನ್ನು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್‌ನ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

Siddaramaiah And Dk shivakumar
ಸಿಎಂ-ಡಿಸಿಎಂ ಜೊತೆ ಸುರ್ಜೆವಾಲಾ ಮೀಟಿಂಗ್: GBA ಚುನಾವಣೆ, ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಚರ್ಚೆ

ಎಂಎಲ್‌ಸಿ ಹುದ್ದೆ ಸ್ಪರ್ಧೆಯಲ್ಲಿದ್ದ ಕೆಪಿಸಿಸಿ ವಕ್ತಾರ ನಟರಾಜ್ ಗೌಡ, ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಮತ್ತೊಮ್ಮೆ ಅವಕಾಶ ತಪ್ಪಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಸಿಎಂ ನಟರಾಜ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.

ಆದರೆ ಡಿಸಿಎಂ ಮಾಜಿ ಶಾಸಕ ಎಸ್‌ಜಿ ನಂಜಯ್ಯ ಮಠ ಅವರನ್ನು ಆಯ್ಕೆ ಮಾಡಿದ್ದಾರೆ, ಅವರು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರ ನಿಷ್ಠಾವಂತರು ಎಂದು ಮೂಲಗಳು ತಿಳಿಸಿವೆ.

ನಟರಾಜಗೌಡ ಕರ್ನಾಟಕ ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಯನ್ನು ಬಯಸುತ್ತಿದ್ದರು ಆದರೆ ಡಿಸಿಎಂ ಅದನ್ನು ಮಂಡ್ಯದ ಮಾಜಿ ಸಚಿವ ಎಂಎಸ್ ಆತ್ಮಾನಂದ ಅವರಿಗೆ ನೀಡಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಕುಮಾರ್ ಅವರು ತಮ್ಮ ನಿಷ್ಠಾವಂತ ಮತ್ತು ರಾಜ್ಯಸಭಾ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಅವರನ್ನು ರಾಷ್ಟ್ರೀಯ ಮಿಲಿಟರಿ ಸ್ಮಾರಕ ನಿರ್ವಹಣಾ ಟ್ರಸ್ಟ್‌ನ ಉಪಾಧ್ಯಕ್ಷರನ್ನಾಗಿ ನೇಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಮನಿರ್ದೇಶಿತರಲ್ಲಿ ಶೇ. 70 ಕ್ಕೂ ಹೆಚ್ಚು ಜನರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆ ಶಿವಕುಮಾರ್ ಕ್ಯಾಂಪ್ ನಿಂದ ಬಂದವರಾಗಿದ್ದಾರೆ.

Siddaramaiah And Dk shivakumar
ದೆಹಲಿಯಲ್ಲಿ ನಡೆವ ಹಿಂದುಳಿದ ವರ್ಗಗಳ ಸಮ್ಮೇಳನಕ್ಕೆ CM ಸಿದ್ದರಾಮಯ್ಯ ಮುಂದಾಳತ್ವ: ನಿಗಮ- ಮಂಡಳಿ ಅಧ್ಯಕ್ಷರ ಆಯ್ಕೆ ಫೈನಲ್; ಶೀಘ್ರವೇ ಪಟ್ಟಿ ರಿಲೀಸ್

NWKRTC ಅಧ್ಯಕ್ಷರಾಗಿ ನೇಮಕಗೊಂಡ ಅಫ್ಜಲ್‌ಪುರ ಶಾಸಕ ಎಂವೈ ಪಾಟೀಲ್ ಅವರ ಪುತ್ರ ಅರುಣ್ ಪಾಟೀಲ್ ಅವರಿಗೆ KKRTC ಹುದ್ದೆ ನೀಡಲಾಗಿದೆ. ಸಿದ್ದರಾಮಯ್ಯ ಅವರ ನಿಷ್ಠಾವಂತ ಹಿರಿಯ ಶಾಸಕ ರಾಜು ಕಾಗೆ ಅವರು NWKRTC ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಸಿದ್ದರಾಮಯ್ಯ ಅವರು 10 ನಾಯಕರನ್ನು ವಿವಿಧ ಮಂಡಳಿಗಳು ಮತ್ತು ನಿಗಮಗಳ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಸುನೀಲ್ ಹನುಮಣ್ಣನವರ್ (ಎನ್‌ಡಬ್ಲ್ಯುಕೆಆರ್‌ಟಿಸಿ), ಎಸ್‌ವಿ ತಂಬಿದೊರೈ (ಅರಣ್ಯ ಕೈಗಾರಿಕೆಗಳ ನಿಗಮ), ವಿಎಸ್ ಆರಾಧ್ಯ (ಬಿಎಂಟಿಸಿ), ಐಶ್ವರ್ಯ ಮಹದೇವ್ (ಕೆಆರ್‌ಡಿಸಿಎಲ್), ಅರುಣ್ ಮಾಚಯ್ಯ (ಕ್ರೀಡಾ ಪ್ರಾಧಿಕಾರ) ಇದಕ್ಕೆ ಸಿಎಂ ಅಧ್ಯಕ್ಷರು, ಎಚ್ ಲಕ್ಷ್ಮಣ್ (ಖನಿಜ ನಿಗಮ), ವಿಶ್ವ ಸಂದತಿ (ಕೆಎಸ್‌ಎಸ್‌ಐಡಿಸಿ ಶಾಸಕರು), ವಿಜಯಲಕ್ಷ್ಮಿ ರೇಣುಕಾ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ), ಆರ್‌ಎಸ್‌ ಸದಸ್ಯ ಜಿ.ಸಿ.ಚಂದ್ರಶೇಖರ್‌ (ನ್ಯಾಷನಲ್‌ ಮಿಲಿಟರಿ ಮೆಮೋರಿಯಲ್‌ ಮ್ಯಾನೇಜ್‌ಮೆಂಟ್‌ ಟ್ರಸ್ಟ್‌) ಅವರನ್ನು ನೇಮಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com