ಜನರೇ ಒತ್ತಾಯ ಮಾಡಿ ನಿಮ್ಮನ್ನು ಕಣಕ್ಕಿಳಿಸಿದ್ದರೇ, ನಿಮ್ಮ ಮಗ ಮೂರು ಬಾರಿ ಏಕೆ ಸೋತ? ಸಿದ್ದರಾಮಯ್ಯ

ಬಡವರು ಮತ್ತು ನಿರ್ಗತಿಕರ ಮೇಲೆತ್ತುವ ಗುರಿಯನ್ನು ಹೊಂದಿರುವ ಖಾತರಿ ಯೋಜನೆಗಳನ್ನು ಬಿಜೆಪಿ ನಿರಂತರವಾಗಿ ಗುರಿಯಾಗಿಸುತ್ತಿದೆ ಆದರೆ ಫಲಾನುಭವಿಗಳು ಅವುಗಳನ್ನು ಮೆಚ್ಚಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ದಾವಣಗೆರೆ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ದೇವೇಗೌಡ ಹಾಗೂ ಛಲವಾದಿ ನಾರಾಯಣ ಸ್ವಾಮಿ ಅವರುಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ಹಿಂದೆ ತಾವು ನೀಡಿರುವ ಹೇಳಿಕೆಗಳನ್ನು ಮತ್ತೊಮ್ಮೆ ಕೇಳಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈಗ ತಮ್ಮ ಅಸ್ತಿತ್ವಕ್ಕಾಗಿ ಬಿಜೆಪಿಗೆ ಸೇರಿರುವ ಈ ಜನರು ಹಿಂದೆ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಮೋದಿ ಬಗ್ಗೆ ಏನು ಹೇಳಿದರು ಎಂದು ನಿಮಗೆ ತಿಳಿದಿಲ್ಲವೇ? ನಮ್ಮನ್ನು ಟೀಕಿಸಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

ಬಡವರು ಮತ್ತು ನಿರ್ಗತಿಕರ ಮೇಲೆತ್ತುವ ಗುರಿಯನ್ನು ಹೊಂದಿರುವ ಖಾತರಿ ಯೋಜನೆಗಳನ್ನು ಬಿಜೆಪಿ ನಿರಂತರವಾಗಿ ಗುರಿಯಾಗಿಸುತ್ತಿದೆ ಆದರೆ ಫಲಾನುಭವಿಗಳು ಅವುಗಳನ್ನು ಮೆಚ್ಚಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಬಡವರ ವಿರೋಧಿ ಮತ್ತು ಸಂವಿಧಾನ ವಿರೋಧಿ ಬಿಜೆಪಿಯನ್ನು ಬೆಂಬಲಿಸಲು ಜನರಿಗೆ ಯಾವುದೇ ಕಾರಣ ಸಿಗುತ್ತಿಲ್ಲ ಎಂದು ಅವರು ಹೇಳಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜನರೇ ಅವರನ್ನು ತಂದು ಚುನಾವಣೆಗೆ ಕಣಕ್ಕಿಳಿಸಿದ್ದಾರೆ ಎಂಬ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹಾಗಾದರೆ ಅವರ ಮಗ ಚನ್ನಪಟ್ಟಣದಲ್ಲಿ ಏಕೆ ಸೋತನು? ಜನರು ಬಯಸಿದಾಗ ಚುನಾವಣೆಯಲ್ಲಿ ಸ್ಪರ್ಧಿಸುವುದು ತಪ್ಪಲ್ಲ. ಆದರೆ, ಅವರು ತಿರಸ್ಕರಿಸಿದಾಗ, ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

CM Siddaramaiah
ಅಭಿವೃದ್ಧಿ-ಜನಪರ ಆಡಳಿತದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು: ಸಿಎಂ ಸಿದ್ದರಾಮಯ್ಯ ವಿಶ್ವಾಸ

ನಿಖಿಲ್ ಅವರನ್ನು ಜನರು ಮೂರು ಬಾರಿ ತಿರಸ್ಕರಿಸಿದರು, ನಾನು ಜೆಡಿಎಸ್ ಅಧ್ಯಕ್ಷರಾಗಿದ್ದಾಗ ಪಕ್ಷ 59 ​​ಸ್ಥಾನಗಳನ್ನು ಗೆದ್ದಿತ್ತು, ಈಗ ಸಂಖ್ಯೆ 19 ಆಗಿದೆ ಎಂದು ಹೇಳಿದರು. ಸಚಿವ ಜಮೀರ್ ಅಹ್ಮದ್ ಖಾನ್ ದಾವಣಗೆರೆ ದಕ್ಷಿಣದಲ್ಲಿ ಹೆಚ್ಚು ಪ್ರಚಾರ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ಜಮೀರ್ ಕೇರಳ, ಬಾಗಲಕೋಟೆ ಮತ್ತು ದಾವಣಗೆರೆ ಸೇರಿದಂತೆ ಎಲ್ಲೆಡೆ ಕೆಲಸ ಮಾಡಿದ್ದಾರೆ. ಜಮೀರ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ಸಿದ್ದರಾಮಯ್ಯ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com