

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಆಪ್ತರನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಿದ್ದು ಸೈಲೆಂಟ್ ಆಗಿದ್ದಾರೆ ಎಂಬ ಹೇಳಿಕೆ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಸಿದ್ದರಾಮಯ್ಯ ಈಗ ಸೈಲೆಂಟ್ ಆಗಿರಬಹುದು, ಆದರೆ ಸಮಯ ಬಂದಾಗ ಮಾತಾಡುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಮುಸ್ಲಿಂ ಮುಖಂಡರ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಮೀರ್, ಪತ್ರ ಬರೆದಿದ್ದನ್ನ ನಾನೂ ಕೂಡ ಮಾಧ್ಯಮದಲ್ಲಿ ನೋಡಿದ್ದೇನೆ. ಪತ್ರದ ಬಗ್ಗೆ ಅವರನ್ನೇ ಕೇಳಿ. ಪ್ರೊಸೀಜರ್ ಪ್ರಕಾರ ಕ್ರಮ ಆಗಬೇಕಿತ್ತು ಎಂದು ಸತೀಶ್ ಹೇಳಿದ್ದಾರೆ. ನೋಟಿಸ್ ನೀಡಿ ಅಭಿಪ್ರಾಯ ಪಡೆದು ಕ್ರಮ ಆಗಬೇಕಿತ್ತು ಇದು ಎಲ್ಲರ ಅಭಿಪ್ರಾಯ ಎಂದರು.
ಮುಸ್ಲಿಂ ಧರ್ಮಗುರುಗಳು ಅಸಮಾಧಾನಗೊಂಡಿರುವುದು ನಿಜ. ನಾವು ಅವರ ಜೊತೆ ಮಾತನಾಡುತ್ತೇವೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ದಾಖಲೆ ಕೊಡಬೇಕಲ್ವಾ ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಹೇಳಬೇಕು ಅಲ್ವಾ ಎಂದು ಪ್ರಶ್ನಿಸಿದರು. ಜೆಡಿಎಸ್ ಸೇರುತ್ತೇನೆ ಎಂಬುದು ಊಹಾಪೋಹ ಸುದ್ದಿ. ಕಾಂಗ್ರೆಸ್ ನನಗೇನು ಕಡಿಮೆ ಮಾಡಿದೆ. ಹೆಚ್ ಡಿಕೆ ಜೊತೆ ನಾನ್ಯಾಕೆ ಮಾತನಾಡಲಿ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಮಂಗಳವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು ಅಯ್ಯಪ್ಪಸ್ವಾಮಿಯ ದರ್ಶನ ಪಡೆದರು. ಇದೇ ವೇಳೆ ಅವರು ಹಣೆಗೆ ವಿಭೂತಿ ಧರಿಸಿದ ದೃಶ್ಯ ಗಮನ ಸೆಳೆಯಿತು.
Advertisement