

ಬೆಂಗಳೂರು: ಜೆಡಿಎಸ್‌ನಲ್ಲಿದ್ದ ನಮ್ಮನ್ನ ಕಾಂಗ್ರೆಸ್‌ಗೆ ಕರೆತಂದು ಕೊಂಡು ಬಂದರು. ಈಗ ವಾಪಸ್ ಹೋದ್ರೆ ಜೊತಗೆ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಮಾಗಡಿ ಕಾಂಗ್ರೆಸ್ ಶಾಸಕ ಎಚ್‌ಸಿ ಬಾಲಕೃಷ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಜೆಡಿಎಸ್ ಪಕ್ಷಕ್ಕೆ ವಾಪಸ್ ಹೋಗುವುದಾದರೆ ನಮ್ಮನ್ನೂ ಕರೆದುಕೊಂಡೇ ಹೋಗಬೇಕಾಗುತ್ತದೆ. ಆಂತರಿಕವಾಗಿ ಇಂತಹ ಬೆಳವಣಿಗೆ ಆಗಿದೆಯೋ, ಇಲ್ಲವೋ ಎಂಬುದು ಗೊತ್ತಿಲ್ಲ, ನಮ್ಮಜೊತೆ ಚರ್ಚಿಸಿಲ್ಲ ಎಂದರು.
ಜಮೀರ್ ಅವರಿಗೆ ನಾವು ಹೆಚ್ಚು ಆಪ್ತರಾಗಿದ್ದರೂ ಈ ಬಗ್ಗೆ ನಮ್ಮ ಜತೆ ಅವರು ಚರ್ಚಿಸಿಲ್ಲ. ಜೆಡಿಎಸ್‌ನಲ್ಲಿದ್ದಾಗ ಇಲ್ಲಿಏಕೋ ಸರಿ ಬರುತ್ತಿಲ್ಲಎಂದು ನಮ್ಮನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದರು.
ಈಗ ವಾಪಸ್ ಹೋಗುವುದಾದರೆ ಒಬ್ಬರೇ ಹೋಗಲು ಸಾಧ್ಯವಿಲ್ಲ. ವಾಪಸ್ ಜೆಡಿಎಸ್‌ಗೆ ಹೋದರೆ ಡಿಸಿಎಂ ಮಾಡುತ್ತಾರಾ? ಸುಮ್ಮನೆ ಖಾಲಿ ಕೈಯಲ್ಲಿಹೋದರೆ ಪ್ರಯೋಜನವೇನು? ಎಂದು ಪ್ರಶ್ನಿಸಿದರು.
Advertisement