ಸಿದ್ಧಾಂತಗಳು ಬದಲಾಗಿವೆ, ಹಳೆಯ ಸಿದ್ದರಾಮಯ್ಯ ಈಗಿಲ್ಲ: ಕೇಂದ್ರ ಸಚಿವ ವಿ. ಸೋಮಣ್ಣ

ಹಳೆಯ ಸಿದ್ದರಾಮಯ್ಯ ಹಾಗೂ ಅವರ ತತ್ವಗಳು ಈಗ ಕಾಣಿಸುತ್ತಿಲ್ಲ. ಈಗಿನ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ.
Union Minister V.Somanna
ಕೇಂದ್ರ ಸಚಿವ ವಿ. ಸೋಮಣ್ಣ
Updated on

ಮೈಸೂರು: ಹಳೆಯ ಸಿದ್ದರಾಮಯ್ಯ ಈಗ ಕಾಣುತ್ತಿಲ್ಲ, ಅವರ ಸಿದ್ಧಾಂತಗಳು ಬದಲಾಗಿವೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗುರುವಾರ ಹೇಳಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಳೆಯ ಸಿದ್ದರಾಮಯ್ಯ ಹಾಗೂ ಅವರ ತತ್ವಗಳು ಈಗ ಕಾಣಿಸುತ್ತಿಲ್ಲ. ಈಗಿನ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.

ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ಕೆಲಸ ಮಾಡಿದವರು. ಅವರನ್ನು ಹತ್ತಿರದಿಂದ ಬಲ್ಲೆ. ಅವರಿಗೆ ನಿಜವಾದ ಕಾಳಜಿ ಇದ್ದರೆ ಮಹಿಳಾ ಮೀಸಲು ಬಗ್ಗೆ ತಮ್ಮ ನಾಯಕರಿಗೆ ತಿಳಿಹೇಳಬೇಕು ಎಂದು ಹೇಳಿದರು.

ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನೀಡಿರುವ ಹೇಳಿಕೆಗಳನ್ನು ಸೋಮಣ್ಣ ಅವರು ತೀವ್ರವಾಗಿ ಟೀಕಿಸಿದರು.

Union Minister V.Somanna
'ದೇಶದಲ್ಲಿ ಆದ ತಾಂತ್ರಿಕ ಬದಲಾವಣೆ ಸಿದ್ದರಾಮಯ್ಯಗೆ ಅರ್ಥವಾಗುತ್ತಿಲ್ಲ, ಅವರು ನಿದ್ರೆ ಮಾಡುತ್ತಿದ್ದಾರೆ': ವಿ ಸೋಮಣ್ಣ

ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಸಾರ್ವಜನಿಕ ವೇದಿಕೆಯಲ್ಲಿ ಗೌರವ ಕಾಪಾಡಬೇಕು. ಪ್ರಧಾನಮಂತ್ರಿಗಳ ವಿರುದ್ಧ ಅವಹೇಳನಕಾರಿ ಭಾಷೆ ಬಳಕೆ ಸರಿಯಲ್ಲ, ಕೂಡಲೇ ತಮ್ಮ ಹೇಳಿಕೆ ಕುರಿತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವುದನ್ನೂ ಸೋಮಣ್ಣ ಅವರು ತೀವ್ರವಾಗಿ ಖಂಡಿಸಿದರು.

ಈ ಮೂಲಕ ಅವರು ತಮ್ಮ ರಾಜಕೀಯ ಭವಿಷ್ಯಕ್ಕೆ ತಾವೇ ಹಾನಿ ಮಾಡಿಕೊಳ್ಳುತ್ತಿದ್ದಾರೆ. ದೇಶದ ಮಹಿಳೆಯರು ಅವರಿಗೆ ಸೂಕ್ತ ಪಾಠ ಕಲಿಸುವರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com