

ಬೆಂಗಳೂರು: ಅಕ್ಕ ಸಮ್ಮೇಳನಕ್ಕೆ ಹೋಗುತ್ತಿದ್ದೇನೆಅಲ್ಲಿಂದ ಬಂದ ಮೇಲೆ ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುವ ವಿಷಯ ಹೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಜನರ ಮುಂದೆ ಹಲವು ದಾಖಲೆ ಇಡುತ್ತೇನೆ. ನಿಮಗೆ ದಿನಕ್ಕೊಂದು ಸುದ್ದಿ ಕೊಡುತ್ತೇನೆ. ಆಗ ಹೆಚ್.ಡಿ.ಕುಮಾರಸ್ವಾಮಿ ಏನು ಎಂದು ಗೊತ್ತಾಗುತ್ತೆ ಎಂದು ಅವರು ಹೇಳಿದರು.
ಐಎಎಸ್ ಅಧಿಕಾರಿಯನ್ನು ದಿಲ್ಲಿಗೆ ಕಳಿಸಿದ್ದು ಯಾರು?. ಅವರಿಗೆ ಅನುಮತಿ ನೀಡಿದ್ದು ಯಾರು?. ಅವರನ್ನು ದಿಲ್ಲಿಗೆ ಕಳುಹಿಸಿ ಅಲ್ಲಿ ಏನೋ ಅನಾಹುತ ಆಯ್ತು ಅಂತ ಬಳಿಕ ಸ್ನೇಹಿತರು ಜ್ಞಾನೇಂದ್ರ ಕುಮಾರ್ ಅವರನ್ನು ಇನ್ಯಾವುದೋ ರಾಜ್ಯಕ್ಕೆ ಕರೆದುಕೊಂಡು ಹೋದರು. ಇಲ್ಲಿ ಇಡಿಯವರು ರೇಡ್ ಮಾಡಿ ತನಿಖೆ ಆರಂಭಿಸಿದ ಬಳಿಕ ಅಧಿಕಾರಿಯನ್ನು ಆ ರಾಜ್ಯದಿಂದ ದೇವನಹಳ್ಳಿಗೆ ಕರೆಸಿ ರೆಸಾರ್ಟ್ನಲ್ಲಿ ಮೂರು ದಿನ ಇರಿಸಿದ್ದೀರಲ್ಲ. ಅವರನ್ನು ರೆಸಾರ್ಟ್ನಲ್ಲಿ ಯಾರು ಇರಿಸಿದ್ದು. ಇದರ ಬಗ್ಗೆ ಮಾಹಿತಿ ಇಲ್ಲವಾ ನಿಮಗೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಪ್ರಶ್ನಿಸಿದರು.
ಇದೇ ವೇಳೆ ಸದನದಲ್ಲಿ KPSC ಅಕ್ರಮದ ಬಗ್ಗೆ ಸಿಎಂ ಉತ್ತರಿಸಿದ್ದ ದಾಖಲೆ ಬಿಡುಗಡೆ ಮಾಡಿದ ಹೆಚ್ಡಿಕೆ, ಆರ್ಡರ್ ಕಾಪಿ ಕೊಡಬೇಡಿ ಅಂತಲೇ KPSC ಸೆಕ್ರೆಟರಿ ಹೇಳಿದ್ದರು. ಆದರೂ ಇದರ ಬಗ್ಗೆ ಸರ್ಕಾರ ಯಾವುದೇ ಅಪೀಲು ಮಾಡಿಲ್ಲ. ನೀವು ಯಾರನ್ನು ಕಾಪಾಡಲು ಮುಂದಾಗಿದ್ದೀರಿ? OMR ತಿದ್ದಿ ಪರೀಕ್ಷೆ ಪಾಸ್ ಆಗಿರುವವರಿಗೆ ರಕ್ಷಣೆ ಕೊಡ್ತಿದ್ದೀರಾ? ಇದಕ್ಕೆ ಉತ್ತರಿಸಿ, ಆಮೇಲೆ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಿ. ಕೆಪಿಎಸ್ಸಿ ಸಂಸ್ಥೆ ಈಗ ಬೀದಿಯಲ್ಲಿ ಹರಾಜಿಗೆ ಬಂದಿದೆ. ಈ ಸಂಸ್ಥೆಯನ್ನು ಪರಿಶುದ್ಧ ಮಾಡಲು ಹೋಗಿ ಅಧ್ಯಕ್ಷರನ್ನು ತಂದರು. ನಾನು ಕಡಿಮೆ ಅವಧಿಯ ಸಿಎಂ ಆಗಿರಬಹುದು. ಆದರೆ ಕಾನೂನುಬಾಹಿರವಾಗಿ ಯಾವುದೇ ಸೂಚನೆ ಯಾರಿಗೂ ಕೊಟ್ಟಿಲ್ಲ. ಕಾನೂನು ಮೀರಿ ರಕ್ಷಣೆ ಕೊಡಿ ಅಂತ ಹೇಳಿಲ್ಲ. ನಾನು ಸಿಎಂ ಆಗಿದ್ದಾಗ ದಲಿತರನ್ನು ಕೆಪಿಎಸ್ಸಿ ಅಧ್ಯಕ್ಷರಾಗಿ ಮಾಡಿದ್ದೆ. ನನ್ನ ಸಂಬಂಧಿಕರನ್ನಾಗಲಿ, ಆಪ್ತರಿಗಾಗಲಿ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ ಎಂದು ಹೇಳಿದರು.
ರೆಸಾರ್ಟ್ನಲ್ಲಿ ಪರೀಕ್ಷೆಗೆ ತರಬೇತಿ, ರೆಸಾರ್ಟ್ನಲ್ಲಿ ಕೂರಿಸಿ ಪರೀಕ್ಷೆ ಬರೆಸುವುದು, ಕೆಪಿಎಸ್ಸಿ ಕಾರ್ಯದರ್ಶಿ ಜ್ಞಾನೇಂದ್ರ ಕುಮಾರ್ ಏತಕ್ಕಾಗಿ ದಿಲ್ಲಿಗೆ ಹೋಗಿದ್ದು? ನಾನೇ ಅವರಿಗೆ ದಿಲ್ಲಿಗೆ ಹೋಗಲು ಅನುಮತಿ ಕೊಟ್ಟಿದ್ದೆ, ಅವರ ತಂದೆಗೆ ಹುಷಾರಿಲ್ಲ ಅಂತ ಹೇಳಿದ್ದೀರಿ. ಇಡಿಯವರು ತನಿಖೆ ಆರಂಭ ಮಾಡಿದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಅಲ್ಲಿವರೆಗೆ ನೀವು ಎಲ್ಲಿದ್ದೀರಪ್ಪ? ಇದರ ಬಗ್ಗೆ ಚರ್ಚೆ ಮಾಡಿದ್ದೀರಾ ಎಂದು ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.