'ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ; ನಮ್ಮ ಮನೆಯ ಮುಂದೆ ಕಸ ಸುರಿದರೂ ಪರವಾಗಿಲ್ಲ; ನಾವು ಪಾಪರ್‌ ಆಗಿದ್ದೇವೆ ಎಂದು ಘೋಷಿಸಿಕೊಳ್ಳಿ'

ಕಸ ವಿಲೇವಾರಿ ಮಾಡಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ. ನಮ ಮನೆ ಮುಂದೆ ಕಸ ಹಾಕಿದರೂ ತೊಂದರೆಯಿಲ್ಲ. ಹಣ ಬಿಡುಗಡೆ ಮಾಡಲು ಹಣ ಇಲ್ಲ. ಜನರೇ ನಿಮಗೆ ಛೀಮಾರಿ ಹಾಕುತ್ತಾರೆಎಂದು ವಾಗ್ದಾಳಿ ನಡೆಸಿದರು.
DK Shivkumar and R.Ashok
ಡಿ.ಕೆ ಶಿವಕುಮಾರ್ ಮತ್ತು ಆರ್.ಅಶೋಕ್
Updated on

ಬೆಂಗಳೂರು: ನಮ್ಮ ಮನೆಯ ಮುಂದೆ ಕಸ ಸುರಿದರೂ ಪರವಾಗಿಲ್ಲ, ಸರ್ಕಾರ ತನ್ನ ಬಳಿ ಹಣವಿಲ್ಲ, ನಾವು ಪಾಪರ್‌ ಆಗಿದ್ದೇವೆ ಎಂದು ಘೋಷಿಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಬಹಿರಂಗ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ ವಿಲೇವಾರಿ ಮಾಡಲು ಅಡ್ಡಿಪಡಿಸಿದರೆ ಬಿಜೆಪಿ ಕಚೇರಿ ಹಾಗೂ ಅವರ ಪಕ್ಷದ ನಾಯಕರ ಮನೆ ಮುಂದೆ ಕಸ ಸುರಿಯುವುದಾಗಿ ನಗರ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು.

ಕಸ ವಿಲೇವಾರಿ ಮಾಡಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ. ನಮ ಮನೆ ಮುಂದೆ ಕಸ ಹಾಕಿದರೂ ತೊಂದರೆಯಿಲ್ಲ. ಹಣ ಬಿಡುಗಡೆ ಮಾಡಲು ಹಣ ಇಲ್ಲ. ಜನರೇ ನಿಮಗೆ ಛೀಮಾರಿ ಹಾಕುತ್ತಾರೆಎಂದು ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್‌ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಸಮಸ್ಯೆ ಬಗೆಹರಿಸಲು ಹಣ ಬಿಡುಗಡೆ ಮಾಡಿ. ಕಸ ತಂದು ನಮ ಮನೆ ಮುಂದೆ, ಬಿಜೆಪಿ ಕಚೇರಿ ಮುಂದೆ ಹಾಕುತ್ತೇನೆ ಎಂದರೆ ಅದು ನಿಮ ದೌರ್ಬಲ್ಯ ಎಂದು ಕಿಡಿಕಾರಿದರು.

DK Shivkumar and R.Ashok
ವಿರೋಧ ಮಾಡುವವರ ಕ್ಷೇತ್ರದಲ್ಲಿ ಕಸವನ್ನೇ ತೆಗೆಸಲ್ಲ; BJP ಶಾಸಕರೇ ಕಸ ಇಟ್ಟುಕೊಳ್ಳಲಿ, ಜನರಿಂದ ಉಗಿಸಿಕೊಳ್ಳಲಿ: ಡಿ.ಕೆ ಶಿವಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com