

ಬೆಂಗಳೂರು: ಕೇಂದ್ರ ಸರ್ಕಾರ ಎಂಜಿಎನ್‌ಆರ್‌ಇಜಿಎ ಬದಲಿಗೆ ಜಾರಿಗೆ ತರುತ್ತಿರುವ ವಿಕಸಿತ್ ಭಾರತ್ - ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ, 2025(ವಿಬಿ–ಜಿ ರಾಮ್ ಜಿ ಮಸೂದೆ) ಕುರಿತು ಚರ್ಚಿಸಲು ಎರಡು ದಿನಗಳ ವಿಶೇಷ ಅಧಿವೇಶನ ಕರೆದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಶನಿವಾರ ಸ್ವಾಗತಿಸಿವೆ.
ಇಂದು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ವಿಬಿ–ಜಿ ರಾಮ್ ಜಿ ಮಸೂದೆ ಬಗ್ಗೆ ಕಾಂಗ್ರೆಸ್ "ತಪ್ಪು ಮಾಹಿತಿಯನ್ನು ಹರಡುತ್ತಿದೆ" ಎಂದು ಆರೋಪಿಸಿದರು.
"ವಿಬಿ-ಜಿ ರಾಮ್ ಜಿ ಕುರಿತು ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ವಿಶೇಷ ಅಧಿವೇಶನವನ್ನು ಕರೆಯಲು ಬಯಸಿದ್ದಾರೆ ಮತ್ತು ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ" ಎಂದು ವಿಜಯೇಂದ್ರ ಹೇಳಿದರು.
"ಯುಪಿಎ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ಎಂಜಿಎನ್‌ಆರ್‌ಇಜಿಎ ಮೂಲಕ ದೇಶಕ್ಕೆ ಏನು ಮಾಡಿದೆ ಮತ್ತು ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಏನು ಮಾಡಿದೆ ಎಂಬುದನ್ನು ನಾವು ಸದನದಲ್ಲಿ ಚರ್ಚಿಸುತ್ತೇವೆ" ಎಂದು ಅವರು ತಿಳಿಸಿದರು.
ಕೆಲಸದ ದಿನಗಳ ಸಂಖ್ಯೆಯನ್ನು 100 ರಿಂದ 120 ದಿನಗಳಿಗೆ ಹೆಚ್ಚಿಸಿದಾಗ, ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಇರಬೇಕು ಮತ್ತು ಹಣ ವ್ಯರ್ಥವಾಗಬಾರದು ಎಂದು ವಿಜಯೇಂದ್ರ ಹೇಳಿದರು.
"ಎಂಜಿಎನ್‌ಆರ್‌ಇಜಿಎಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದರೂ, ಪ್ರಧಾನಿ, ಬಿಜೆಪಿ ಅಥವಾ ಎನ್‌ಡಿಎ ಸರ್ಕಾರವು ಯಾವುದೇ ಕಳ್ಳತನ ಅಥವಾ ಹಣ ಸೋರಿಕೆಯಾಗದಂತೆ ನೋಡಿಕೊಳ್ಳುವುದು ತಪ್ಪೇ" ಎಂದು ಬಿಜೆಪಿ ರಾಜ್ಯಾದ್ಯಕ್ಷ ಪ್ರಶ್ನಿಸಿದರು.
ಎನ್‌ಡಿಎ ಅವಧಿಯಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಗೆ 7 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ "ಎಂದಿಗೂ ಯೋಜನೆಗಳಲ್ಲಿ ನಂಬಿಕೆ ಇಡಲಿಲ್ಲ, ಆದರೆ ಹಗರಣಗಳಲ್ಲಿ ನಂಬಿಕೆ ಇಟ್ಟಿತ್ತು" ಮತ್ತು ಅಂತಹ ಹಗರಣಗಳಿಂದಾಗಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ಕುಮಾರಸ್ವಾಮಿ ಮಾತನಾಡಿ, ಕೇಂದ್ರವು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸಲು ಮತ್ತು ಮೂಲಸೌಕರ್ಯವನ್ನು ಸುಧಾರಿಸಲು MGNREGA ಅನ್ನು ಪರಿಷ್ಕರಿಸಿದೆ. ಆದರೆ ವಿರೋಧ ಪಕ್ಷ ಕಾಂಗ್ರೆಸ್ "ಸುಧಾರಣಾ-ಚಾಲಿತ ಕಲ್ಯಾಣ ಮಿಷನ್ ವಿರುದ್ಧ ಅಪಪ್ರಚಾರ" ಮಾಡುತ್ತಿದೆ ಎಂದರು.
ಪಾರದರ್ಶಕತೆ, ದಕ್ಷತೆ ಮತ್ತು ದೀರ್ಘಕಾಲೀನ ಪರಿಣಾಮವನ್ನು ತರಲು MGNREGA ಅನ್ನು VB-G RAM G ಎಂದು ಮರುನಾಮಕರಣ ಮಾಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
Advertisement