

ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಸದರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕರ್ನಾಟಕದ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ಶಾಸಕ ಬಿ.ಆರ್. ಪಾಟೀಲ್ ಕಳವಳ ವ್ಯಕ್ತಪಡಿಸಿದರು, ಏಕೆಂದರೆ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಜನಸಂಖ್ಯೆ ಕಡಿಮೆಯಾಗಿದೆ. ಎಲ್ಲಾ ರಾಜ್ಯಗಳು ಒಪ್ಪಿಕೊಳ್ಳುವ ಸೂತ್ರವನ್ನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರವು ಸರ್ವಾನುಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯಗಳು ಮತ್ತು ಕೇಂದ್ರದ ನಡುವಿನ ಅಂತರವನ್ನು ಹೆಚ್ಚಿಸುತ್ತಿದೆ. ತನ್ನ ಇಚ್ಛೆಗೆ ಅನುಗುಣವಾಗಿ ನೀತಿಯನ್ನು ರೂಪಿಸುತ್ತದೆ ಎಂದು ಪಾಟೀಲ್ ಹೇಳಿದರು. ದಕ್ಷಿಣ ಮತ್ತು ಉತ್ತರ ಭಾರತದ ರಾಜ್ಯಗಳ ನಡುವಿನ ಜನಸಂಖ್ಯೆಯಲ್ಲಿನ ಅಸಮಾನತೆಯೊಂದಿಗೆ, ದಕ್ಷಿಣ ಭಾರತದಲ್ಲಿ ಸಂಸದರ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ಉತ್ತರ ಭಾರತದ ಜನಪ್ರತಿನಿಧಿಗಳು ಹೆಚ್ಚಾದರೆ ದಕ್ಷಿಣ ಭಾರತ ಕಡೆ ಯಾರೂ ತಿರುಗಿಯೂ ನೋಡುವುದಿಲ್ಲ. ಇಲ್ಲಿಯ ವಿಚಾರಗಳಿಗೆ ಮನ್ನಣೆ ನೀಡುವುದಿಲ್ಲ. ರಾಜ್ಯ ಸರ್ಕಾರದ ಒಮ್ಮತ ಪಡೆದು ಕೇಂದ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಬೇಕು. ದಕ್ಷಿಣ ಭಾರತದ ತೆರಿಗೆ ಉತ್ತರ ಭಾರತದ ಪಾಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳು ಸುಭಿಕ್ಷವಾಗಿವೆ. ಮಹಾರಾಷ್ಟ್ರದಲ್ಲಿ ಹಣಕಾಸಿನ ಪರಿಸ್ಥಿತಿ ಭಯಾನಕವಾಗಿದೆ ಎಂದರು.
ಬಿಜೆಪಿ ನಾಯಕರು ಪ್ರಾದೇಶಿಕ ಪಕ್ಷಗಳನ್ನು ಮುಗಿಸಿಬಿಡ್ತಾರೆ. ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಉಳಿಸುವುದಿಲ್ಲ. ಇದರ ಅರಿವು ಕುಮಾರಸ್ವಾಮಿಗೆ ಗೊತ್ತಿದೆಯೋ ಇಲ್ವೋ ಎಂದು ಕೇಳಿದ್ದಾರೆ. ಬಿಜೆಪಿ ಜೊತೆಗೆ ಹೋದ ಕುಮಾರಸ್ವಾಮಿಗೆ ಭ್ರಮ ನಿರಸನ ಆಗಿದೆ.
ಬಿಜೆಪಿ, ಕಾಂಗ್ರೆಸ್ ಏನೇನೋ ಕನಸು ಕಂಡಿದ್ದರು. ಆದರೆ ಅವರಿಗೆ ಭ್ರಮ ನಿರಸನ ಆಗಿದೆ. ಈಗ ನೋಡಿದರೆ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಗೆ ಪಾಪ ಕೇಂದ್ರದಲ್ಲಿ ಏನು ತೊಂದರೆ ಆಗ್ತಿದೆಯೋ, ಇಲ್ಲ ಅವರ ಮಾತು ನಡೆಯುತ್ತಿಲ್ವೋ? ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ. ಇದೇ ಸಂದರ್ಭದಲ್ಲಿ ಮೈತ್ರಿಗೆ ತಿರುಗೇಟು ನೀಡಿದ ಅವರು, ಮುಂದೆ ಜೆಡಿಎಸ್ ಪಕ್ಷ ಇರುತ್ತದೆಯೋ ಇಲ್ವೋ ಎಂಬುದನ್ನು ದೇವೇಗೌಡರಿಗೇ ಕೇಳಬೇಕು. ಜೆಡಿಎಸ್ ಪಕ್ಷದ ಜನಕ ಅವರೇ ಎಂದು ತಿರುಗೇಟು ನೀಡಿದರು.
Advertisement