ಡಿಕೆಶಿ ಪದಗ್ರಹಣಕ್ಕೆ ಆಗಮಿಸಿದ ನಟಿ ರಮ್ಯಾ; ಸಕ್ರಿಯೆ ರಾಜಕಾರಣಕ್ಕೆ ಮರಳುವ ಬಗ್ಗೆ ಮಾಜಿ ಸಂಸದೆ ಹೇಳಿದ್ದೇನು?

ಇಂದು ಸಂಜೆ ಲೋಕಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
Former Congress MP and actress Ramya Participates DK Shivakumar swearing-in
ಮಾಜಿ ಸಂಸದೆ ಹಾಗೂ ನಟಿ ರಮ್ಯಾ
Updated on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ಸದ್ಯ ಸಕ್ರಿಯೆ ರಾಜಕಾರಣದಿಂದ ದೂರ ಉಳಿದಿರುವ ಮಂಡ್ಯ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಭಾಗವಹಿಸಿದ್ದರು.

ಇಂದು ಸಂಜೆ ಲೋಕಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ ಹಾಗೂ 12 ನಾಯಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನೂ ಡಿಕೆಶಿ ಪದಗ್ರಹಣ ವಿಚಾರ ಕುರಿತು ಮಾತನಾಡಿದ ನಟಿ ರಮ್ಯಾ, ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡ್ತಿರೋದು ಖುಷಿ ಆಗ್ತಿದೆ. ಬಹಳ ವರ್ಷದಿಂದ ಅವರು ಪಟ್ಟ ಕಷ್ಟಕ್ಕೆ ಫಲ ಸಿಕ್ಕಿದೆ ಎಂದರು.

Former Congress MP and actress Ramya Participates DK Shivakumar swearing-in
ಡಿಕೆಶಿ ಪದಗ್ರಹಣಕ್ಕೂ ಮುನ್ನವೇ ಸಿದ್ದರಾಮಯ್ಯಗೆ ಮಹತ್ವದ ಸ್ಥಾನ: ಕಾಂಗ್ರೆಸ್‌ ಪರಮೋಚ್ಚ ಸಮಿತಿಗೆ ನೇಮಕ

ನಾನೀಗ ಬಂದಿರೋದು ಡಿಕೆ ಶಿವಕುಮಾರ್‌ ಅವರ ಫ್ಯಾಮಿಲಿಗೋಸ್ಕರ. ಇಷ್ಟು ವರ್ಷ ಕಷ್ಟಪಟ್ಟಿರುವುದರ ಫಲ ಅವರಿಗೆ ಈಗ ಸಿಕ್ಕಿದೆ. ಅದನ್ನ ನೋಡಿ ಸೆಲಬ್ರೇಟ್‌ ಮಾಡೋಕೆ ಬಂದಿದ್ದೇನೆ. ನಾನು ಮತ್ತೆ ಸಕ್ರಿಯೆ ರಾಜಕಾರಣಕ್ಕೆ ಮರಳಲು ಕಾಲ ಕೂಡಿಬರಬೇಕು. ಎಲ್ಲದಕ್ಕೂ ಸಮಯ ಬೇಕಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com