ರಾಜ್ಯಸಭೆ ಅಭ್ಯರ್ಥಿ ನಾಮಪತ್ರ ತಿರಸ್ಕೃತ: ಕಾಂಗ್ರೆಸ್ ಗೆ ಕೈಕೊಟ್ಟ ರೆಸಾರ್ಟ್ ಪೊಲಿಟಿಕ್ಸ್ ಪ್ಲಾನ್

ಈ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ವಹಿಸಿಕೊಂಡಿದ್ದರು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬಹಳ ಪ್ರಚಾರ ಪಡೆದಿದ್ದ ಕಾಂಗ್ರೆಸ್‌ನ ‘ರೆಸಾರ್ಟ್ ರಾಜಕೀಯ’ ಕಾರ್ಯಾಚರಣೆ ಆರಂಭವಾಗುವ ಮುನ್ನವೇ ಅಸ್ತವ್ಯಸ್ತಗೊಂಡಿದೆ. ಜೂನ್ 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಅಡ್ಡ ಮತದಾನ ಅಥವಾ ಶಾಸಕರನ್ನು ಸೆಳೆಯುವ ಪ್ರಯತ್ನಗಳನ್ನು ತಡೆಯುವ ಉದ್ದೇಶದಿಂದ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಕರ್ನಾಟಕಕ್ಕೆ ವಿಮಾನದಲ್ಲಿ ಕರೆತಂದು ಬಿಡದಿ ಸಮೀಪದ ವಂಡರ್‌ಲಾ ರೆಸಾರ್ಟ್‌ನಲ್ಲಿ ಇರಿಸಲು ಪಕ್ಷ ಯೋಜಿಸಿತ್ತು.

ಈ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ವಹಿಸಿಕೊಂಡಿದ್ದರು. 2017ರಲ್ಲಿ ದಿವಂಗತ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಗೆಲ್ಲಿಸಲು ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇರಿಸಿದ್ದ ತಂತ್ರವನ್ನೇ ಅವರು ಪುನರಾವರ್ತಿಸಲು ಮುಂದಾಗಿದ್ದರು.

ಆದರೆ ಈ ಬಾರಿ ದೊಡ್ಡ ಹಿನ್ನಡೆ ಕಂಡುಬಂದಿದೆ. ಚುನಾವಣಾ ಆಯೋಗವು ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿತು. ಇದರ ಪರಿಣಾಮವಾಗಿ ನಿನ್ನೆ ಮಂಗಳವಾರ ಸಂಜೆ ಬೆಂಗಳೂರಿಗೆ ಬರಬೇಕಿದ್ದ 63 ಮಂದಿ ಕಾಂಗ್ರೆಸ್ ಶಾಸಕರು ಭೋಪಾಲ್‌ನಲ್ಲೇ ಉಳಿದಿದ್ದಾರೆ. ಸ್ವಂತವಾಗಿ ಪ್ರಯಾಣಿಸುತ್ತಿದ್ದ ಒಬ್ಬ ಶಾಸಕರು ಮಾತ್ರ ಬೆಂಗಳೂರಿಗೆ ತಲುಪಿದ್ದಾರೆ.

Representational image
ರಾಜ್ಯಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಹೊಡೆತ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದು!

ಹಿರಿಯ ಕಾಂಗ್ರೆಸ್ ನಾಯಕರು ಈ ಸಾಮೂಹಿಕ ಸ್ಥಳಾಂತರ ಯೋಜನೆಯನ್ನು ಈಗಾಗಲೇ ದೃಢಪಡಿಸಿದ್ದರು. ಮೂಲಗಳ ಪ್ರಕಾರ, ಪ್ರತಿಯೊಬ್ಬ ಶಾಸಕರೊಂದಿಗೆ ಒಬ್ಬ ಸಹಾಯಕ ಹಾಗೂ ವೈಯಕ್ತಿಕ ಭದ್ರತಾ ಸಿಬ್ಬಂದಿ ಇರಲಿದ್ದು, ಒಂಬತ್ತು ದಿನಗಳ ಕಾಲ 24 ಗಂಟೆಗಳ ನಿಗಾ, ಮೊಬೈಲ್ ಬಳಕೆಯ ಮೇಲಿನ ನಿರ್ಬಂಧ ಮತ್ತು ಸ್ಥಳದಲ್ಲೇ ನಿಯೋಜಿತ ಮೇಲ್ವಿಚಾರಕರೊಂದಿಗೆ ರಿಸಾರ್ಟ್ ನ್ನು ಸಂಪೂರ್ಣ ಭದ್ರತಾ ಶಿಬಿರವನ್ನಾಗಿ ರೂಪಿಸಲು ಸಿದ್ಧತೆ ನಡೆಸಲಾಗಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನಾಯಕರು ಕೂಡ ಚುನಾವಣೆ ನಡೆಯುವವರೆಗೆ ಶಾಸಕರನ್ನು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಇರಿಸಲಾಗುವುದು ಎಂದು ಸಾರ್ವಜನಿಕವಾಗಿ ಭರವಸೆ ನೀಡಿದ್ದರು.

ಬಿಜೆಪಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ಕೇಸರಿ ಪಕ್ಷವು ಶಾಸಕರನ್ನು ಸೆಳೆಯಲು ಆಕ್ರಮಣಕಾರಿ ಪ್ರಯತ್ನ ನಡೆಸಬಹುದು ಎಂಬ ಆತಂಕ ಕಾಂಗ್ರೆಸ್‌ನಲ್ಲಿ ಮೂಡಿತ್ತು. ಹೆಚ್ಚುವರಿ ಮತಗಳನ್ನು ಪಡೆಯಲು ಬಿಜೆಪಿ ಹತಾಶ ಪ್ರಯತ್ನ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದೇ ಕಾರಣಕ್ಕೆ ರಿಸಾರ್ಟ್ ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು.

ಆದರೆ ಈ ರೆಸಾರ್ಟ್ ರಾಜಕೀಯದ ಸೋಲನ್ನು ಪಕ್ಷದ ಒಳವಲಯದವರೇ ಒಪ್ಪಿಕೊಳ್ಳುತ್ತಿದ್ದಾರೆ. 2017ರಲ್ಲಿ ಬೆಂಗಳೂರಿನಲ್ಲಿ ಆಶ್ರಯ ಪಡೆದಿದ್ದ ಹಲವು ಗುಜರಾತ್ ಕಾಂಗ್ರೆಸ್ ಶಾಸಕರು ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಳೆದ 12 ವರ್ಷಗಳಲ್ಲಿ ಕಾಂಗ್ರೆಸ್‌ನ 2,000ಕ್ಕೂ ಹೆಚ್ಚು ಜನಪ್ರತಿನಿಧಿಗಳು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಅಭ್ಯರ್ಥಿಯ ಅನರ್ಹತೆಯಿಂದ ಕಾಂಗ್ರೆಸ್‌ನ ಈ ತಂತ್ರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಇದು ಇತ್ತೀಚಿನ ದಶಕಗಳಲ್ಲಿ ಬೆಳೆದು ಬಂದಿರುವ ದುರದೃಷ್ಟಕರ ರಾಜಕೀಯ ಪದ್ಧತಿ. ‘ರೆಸಾರ್ಟ್ ರಾಜಕೀಯ’ ಕಾಂಗ್ರೆಸ್‌ಗೆ ಮಾತ್ರ ಸೀಮಿತವಲ್ಲ; ಬಿಜೆಪಿ ಕೂಡ ಇದನ್ನು ಅನುಸರಿಸುತ್ತದೆ. ಈ ಪ್ರವೃತ್ತಿಯು ಪಕ್ಷದ ನಾಯಕತ್ವಕ್ಕೆ ತಮ್ಮದೇ ಸದಸ್ಯರ ಮೇಲೆ ಇರುವ ವಿಶ್ವಾಸದ ಕೊರತೆಯನ್ನು ತೋರಿಸುತ್ತದೆ ಎಂದು ರಾಜಕೀಯ ವಿಶ್ಲೇಷಕ ಪ್ರೊ. ಪಿ.ಎಸ್. ಜಯರಾಂ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com