HDK ಹೊಳೇನರಸಿಪುರದಲ್ಲಿ ಆಲೂಗಡ್ಡೆ ಬೆಳೆದಿದ್ರಾ? ನಮ್ಮ ಗುರುಗಳು ಅಜ್ಜಯ್ಯ ಹತ್ರ ಪ್ರಮಾಣ ಮಾಡ್ತೀವಿ ನೀವು ಮಾಡ್ತೀರಾ..?

ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡಲು 2018 ರಲ್ಲಿ ಅವರು ಒಪ್ಪಿದ್ದ ಬಗ್ಗೆ ಪ್ರಮಾಣ ಮಾಡಲಿ. ನಾವು ಅಜ್ಜಯ್ಯನ ಭಕ್ತರು, ನಾವು ಅಜ್ಜಯ್ಯ ಅವರ ಮೇಲೆ ಪ್ರಮಾಣ ಮಾಡುತ್ತೇವೆ, ಅವರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ.
HC halakrishna and hd kumaraswamy
ಎಚ್.ಸಿ ಬಾಲಕೃಷ್ಣ ಮತ್ತು ಎಚ್.ಡಿ ಕುಮಮಾರಸ್ವಾಮಿ
Updated on

ಬೆಂಗಳೂರು: ‘ಬಿಡದಿ ಟೌನ್‌ಶಿಪ್ ಯೋಜನೆಯನ್ನು ನಾನು ರೈತರ ಪರವಾಗಿ ಕೈಬಿಡಲು ಒಪ್ಪಿದ್ದೆ ಎಂದು ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಲಿ’ ಎಂದು ಕಾಂಗ್ರೆಸ್ ಶಾಸಕ ಎಚ್‌.ಸಿ.ಬಾಲಕೃಷ್ಣ ಸವಾಲು ಹಾಕಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡಲು 2018 ರಲ್ಲಿ ಅವರು ಒಪ್ಪಿದ್ದ ಬಗ್ಗೆ ಪ್ರಮಾಣ ಮಾಡಲಿ. ನಾವು ಅಜ್ಜಯ್ಯನ ಭಕ್ತರು, ನಾವು ಅಜ್ಜಯ್ಯ ಅವರ ಮೇಲೆ ಪ್ರಮಾಣ ಮಾಡುತ್ತೇವೆ, ಅವರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

‘ಕೇಂದ್ರ ಸಚಿವರಾದ ಮೇಲೆ ಅವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸಮಸ್ಯೆ ಹುಟ್ಟು ಹಾಕಿದವರೇ ಹೋರಾಟ ಮಾಡುತ್ತಿದ್ದಾರೆ. ಈ ರೀತಿ ಗೋಸುಂಬೆ ರಾಜಕಾರಣ ಮಾಡುವುದು ಬಿಟ್ಟು, ಒಂದು ನಿಲುವು ತೆಗೆದುಕೊಳ್ಳಬೇಕು’ ಎಂದರು.

‘ಕುಮಾರಸ್ವಾಮಿ ತಮ್ಮ ವಿಡಿಯೊ ಸಂದೇಶದಲ್ಲಿ ಅಭಿವೃದ್ಧಿ ಹೊಂದಿದ ಟೌನ್‌ಶಿಪ್‌ನಲ್ಲಿ ರೈತರಿಗೆ ಶೇ 40ರಷ್ಟನ್ನು ಕೊಡಬೇಕೆಂದು ತೀರ್ಮಾನ ಮಾಡಿದ್ದೆ ಅಂದಿದ್ದಾರೆ. ನಾವು ಜನವಾಸದ ಪ್ರದೇಶದಲ್ಲೇ ಶೇ 50 ರಷ್ಟು, ವಾಣಿಜ್ಯ ಪ್ರದೇಶದಲ್ಲಿ ಶೇ 45 ಪಾಲು ಕೊಡುತ್ತೇವೆ’ ಎಂದು ಬಾಲಕೃಷ್ಣ ತಿಳಿಸಿದರು. ಇದೇ ವೇಳೆ ಅವರು ಕುಮಾರಸ್ವಾಮಿ ಈ ಹಿಂದೆ ನೀಡಿದ್ದ ವಿಡಿಯೊ ಸಂದೇಶದ ಹೇಳಿಕೆ ಬಿಡುಗಡೆ ಮಾಡಿದರು.

HC halakrishna and hd kumaraswamy
ಪ್ರಧಾನಿ ಮೋದಿ ಬೆಂಬಲದಿಂದ ಉತ್ಪಾದನೆಯಲ್ಲಿ ಭಾರೀ ಏರಿಕೆ; HMT ಗೆ ಶೀಘ್ರವೇ ಮರುಜೀವ: ಕುಮಾರಸ್ವಾಮಿ

ಕುಮಾರಸ್ವಾಮಿ ಅಷ್ಟೊಂದು ಆಸ್ತಿ ಹೇಗೆ ಸಂಪಾದನೆ ಮಾಡಿದರು? ಹೊಳೆನರಸೀಪುರದಲ್ಲಿ ಆಲೂಗಡ್ಡೆ ಬೆಳೆದು ಸಂಪಾದನೆ ಮಾಡಿದ್ರಾ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಣ್ಣ ಬಾಲಕೃಷ್ಣ ಹೆಸರಲ್ಲಿ ಕೋಟ್ಯಂತರ ರುಪಾಯಿ ಆಸ್ತಿ ಸಂಪಾದನೆ ಮಾಡಿಕೊಂಡರು ಬಾಲಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com