ಇಷ್ಟೆಲ್ಲಾ ಅಲ್ಲೋಲ-ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ಕಾರಣ: ಮೊದಲು ಆಕೆಯನ್ನು ಧರ್ಮಸ್ಥಳದಲ್ಲಿ ನಿಲ್ಲಿಸಿ; ಎಸ್.ಟಿ ಸೋಮಶೇಖರ್

ಅವರಿಬ್ಬರು ಮೊದಲು ಧರ್ಮಸ್ಥಳದಲ್ಲಿ ಆಣೆ ಮಾಡಲಿ ಬೇರೆ ಯಾರೂ ಪ್ರಮಾಣ ಮಾಡೋದು ಬೇಕಿಲ್ಲ. ಅವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದರು.
ST Somashekhar
ಎಸ್ ಟಿ ಸೋಮಶೇಖರ್
Updated on

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನಕ್ಕೆ ಬಿಜೆಪಿಯ ಆಂತರಿಕ ಕಲಹವೇ ಪ್ರಮುಖ ಕಾರಣ ಎಂದು ಶಾಸಕ ಎಸ್.ಟಿ ಸೋಮಶೇಖರ್ ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ಟಿ ಸೋಮಶೇಖರ್, ಬಿಜೆಪಿಯವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ. ವಿಜಯೇಂದ್ರ ಕಡೆಯವರನ್ನ ಅಶೋಕ್ ಸೋಲಿಸಬೇಕು, ಅಶೋಕ್ ಕಡೆಯವರನ್ನ ವಿಜಯೇಂದ್ರ ಸೋಲಿಸಬೇಕು ಅಂತಾ ಅಡ್ಡ ಮತದಾನ ಮಾಡಿಸಿರಬೇಕು.

ಅವರಿಬ್ಬರು ಮೊದಲು ಧರ್ಮಸ್ಥಳದಲ್ಲಿ ಆಣೆ ಮಾಡಲಿ ಬೇರೆ ಯಾರೂ ಪ್ರಮಾಣ ಮಾಡೋದು ಬೇಕಿಲ್ಲ. ಅವರ ಆಂತರಿಕ ಕಲಹದಿಂದ ಅಡ್ಡ ಮತದಾನ ಆಗಿದೆ ಎಂದರು.

ಇಷ್ಟೆಲ್ಲಾ ಅವಾಂತರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರಣ. ಶೋಭಾ ಕರಂದ್ಲಾಜೆ ಅವರಿಗೆ ಅಶೋಕ್ ಕಂಡರೆ ಆಗಲ್ಲ. ವಿಜಯೇಂದ್ರ ಕಂಡರೂ ಆಗಲ್ಲ. ಬಿಜೆಪಿಯಲ್ಲಿ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇರ ಕಾರಣ. ಮೊದಲು ಈ ಕರಂದ್ಲಾಜೆಯನ್ನ ಧರ್ಮಸ್ಥಳದಲ್ಲಿ ಹೋಗಿ ನಿಲ್ಲಿಸಲಿ ಎಂದು ಹರಿಹಾಯ್ದರು.

ST Somashekhar
MLC ಚುನಾವಣೆ ಅಡ್ಡ ಮತದಾನ: ಪಕ್ಷ ದ್ರೋಹಿಗಳ ವಿರುದ್ಧ ಈಗಾಗಲೇ ಕ್ರಮ ಆರಂಭಿಸಲಾಗಿದೆ- ಆರ್ ಅಶೋಕ್; Video

ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದಾರೆ. ನಾವು ಅವರಿಗೆ ಮತ ಹಾಕಿದ್ದೇವೆ. ನಾವು ಓಪನ್ ಆಗಿಯೇ ಮತ ಹಾಕಿದ್ದೇವೆ ಎಂದು ಹೇಳಿದ್ದೇವೆ.ಬಿಜೆಪಿಯಲ್ಲಿ ಅಡ್ಡ ಮತದಾನ ಹಾಕಿದವರು ಯಾರು ಅಂತಾ ಪತ್ತೆ ಹಚ್ಚಲಿ. ನನ್ನ ಕೆಣಕೋದು ಬೇಡ. ಕೆಣಕಿದರೆ ನಾವೂ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com