ತವರಿನಲ್ಲಿ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ: ಕಾಂಗ್ರೆಸ್ ನಾಯಕರೊಂದಿಗೆ ಮಾಜಿ ಸಿಎಂ ಭರ್ಜರಿ ಬಾಡೂಟ-Video

ನಿನ್ನೆ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಇಂದು ಎಸ್‌ಐಆರ್ ಕುರಿತ ಕಾಂಗ್ರೆಸ್ ಪಕ್ಷದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
Ex CM Siddaramaiah welcome by fans
ಮೈಸೂರಿಗೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ
Updated on

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದ ನಂತರ ಮೊದಲ ಬಾರಿ ತಮ್ಮ ತವರು ಮೈಸೂರಿನ ನಿವಾಸಕ್ಕೆ ತೆರಳಿದ್ದರು. ಅವರ ಮೈಸೂರಿನ ನಿವಾಸದಲ್ಲಿ ಇಂದು ಭಾನುವಾರ ಕಾಂಗ್ರೆಸ್ ನಾಯಕರಿಗೆ ಭರ್ದರಿ ಬಾಡೂಟ ಏರ್ಪಡಿಸಲಾಗಿತ್ತು.

ನಿನ್ನೆ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಇಂದು ಎಸ್‌ಐಆರ್ ಕುರಿತ ಕಾಂಗ್ರೆಸ್ ಪಕ್ಷದ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬಳಿಕ ಕಾಂಗ್ರೆಸ್‌ನ ನಾಯಕರಿಗೆ ತಮ್ಮ ಮನೆಯಲ್ಲೇ ಬಾಡೂಟದ ವ್ಯವಸ್ಥೆ ಮಾಡಿದ್ದರು. ನಾಟಿಕೋಳಿ ಸಾರು, ಮುದ್ದೆ, ಚಿಕನ್‌ ಚಾಪ್ಸ್‌, ಪಲಾವ್‌ ಜೊತೆಗೆ ಸಸ್ಯಾಹಾರದ ಊಟ ವ್ಯವಸ್ಥೆಯನ್ನೂ ಮಾಡಿದ್ದರು.

ಮೈಸೂರಿನ ಟಿ.ಕೆ ಬಡಾವಣೆಯಲ್ಲಿರುವ ಸಿದ್ದರಾಮಯ್ಯ ನಿವಾಸ ಮುಂದೆ ಜರ್ಮನ್ ಟೆಂಟ್ ಹಾಕಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೈಸೂರಿನ ಪ್ರಮುಖ ನಾಯಕರಿಗಷ್ಟೇ ಆಹ್ವಾನ ನೀಡಲಾಗಿತ್ತು, ಊಟದ ವ್ಯವಸ್ಥೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮನೆ ಬಳಿ ಜನ ಸಾಮಾನ್ಯರಿಗೆ ಪ್ರವೇಶ ಇರಲಿಲ್ಲ. ಸಿದ್ದರಾಮಯ್ಯ ತಾವು ಕೂಡ ಕಾಂಗ್ರೆಸ್‌ ಶಾಸಕರು ಹಾಗೂ ಸಂಸದರೊಟ್ಟಿಗೆ ಕುಳಿತು ಊಟ ಸವಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com