ಸಮರ ವೀರ- ಭಾಷೆ ಬಳಕೆಯಲ್ಲಿ ಸಭ್ಯತನದ ಎಲ್ಲೆ ಮೀರದ ಚತುರ: ಖರ್ಗೆಗೆ ತಮ್ಮದೇ ದಾಟಿಯಲ್ಲಿ ಮಾರ್ಮಿಕ ಉತ್ತರ; ಮಾಗಿದ ದೇವೇಗೌಡರ 'ಸ್ಥಿತ ಪ್ರಜ್ಞೆ' ಅಪಾರ!

ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧವು ಬಹಳ ಹಿಂದಿನಿಂದಲೂ ಆಳವಾದ ರಾಜಕೀಯ ಪೈಪೋಟಿಯಿಂದ ಕೂಡಿದೆ. ಕರ್ನಾಟಕದಲ್ಲಿ ರಾಜಕೀಯದಲ್ಲಿ ಪ್ರತಿ ಬಾರಿಯೂ ಪ್ರಮುಖ ಪಾತ್ರ ವಹಿಸುತ್ತಿರುವ ಜೆಡಿಎಸ್ ನಿಂದ ಸಿದ್ದರಾಮಯ್ಯ ಅವರನ್ನು ದೇವೇಗೌಡರು ಹೊರದಬ್ಬಿದ್ದರು.
HD Devegowda
ಎಚ್.ಡಿ ದೇವೇಗೌಡ
Updated on

ಬೆಂಗಳೂರು: ಇಂದಿನ ಅನೇಕ ರಾಜಕಾರಣಿಗಳು ದಿನವಿಡೀ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅತಿಯಾಗಿ ಚಹಾ, ಕಾಫಿ ಅಥವಾ ಎನರ್ಜಿ ಡ್ರಿಂಕ್ಸ್ ತೆಗೆದುಕೊಳ್ಳುತ್ತಾರೆ, ಆದರೆ ಜೆಡಿಎಸ್ ಹಿರಿಯ ನಾಯಕ ಎಚ್.ಡಿ. ದೇವೇಗೌಡರು ಸದಾ ಪುಟಿಯುವ ಚಿಲುಮೆಯಂತೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾಕೆ.

94 ವರ್ಷ ವಯಸ್ಸಿನಲ್ಲೂ, ಮಾಜಿ ಪ್ರಧಾನಿ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದರು ಅಸಾಧಾರಣ ರಾಜಕೀಯ ಚುರುಕುತನ, ಉನ್ನತ ಮಟ್ಟದ ಶಕ್ತಿ ಮತ್ತು ಸಾರ್ವಜನಿಕ ಜೀವನದಲ್ಲಿ ಭಾಗವಹಿಸುವ ಮೂಲಕ ತಮ್ಮ ಬದ್ಧತೆ ಹಾಗೂ ಪ್ರಾಮಾಣಿಕತೆ ಪ್ರದರ್ಶಿಸುತ್ತಿದ್ದಾರೆ.

ಇತ್ತೀಚಿನ ರಾಜ್ಯಸಭೆಯಲ್ಲಿ ನಡೆದ ರಾಜಕೀಯ ವಿದ್ಯಮಾನಗಳು ದೇವೇಗೌಡರನ್ನು ಮತ್ತೆ ಬೆಳಕಿಗೆ ತಂದಿವೆ. ರಾಜಕೀಯವಾಗಿ ತುಂಬಿದ ಪತ್ರದಲ್ಲಿ, ಅವರು ಸೋನಿಯಾ ಗಾಂಧಿಯವರಿಗೆ ಅವರ ಮಗ ರಾಹುಲ್ ಗಾಂಧಿಯವರ ಬಗ್ಗೆ ಸಲಹೆ ನೀಡಿದ್ದಾರೆ, ಚಹಾ ಮತ್ತು ಬಿಸ್ಕತ್ತು ತಿನ್ನುತ್ತಾ ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳದಂತೆ ಬುದ್ದಿ ಹೇಳಿ ಎಂದು ಪತ್ರದಲ್ಲಿ ಬರೆದಿದ್ದರು,

1994 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೊದಲು ವಿಧಾನಸೌಧದಲ್ಲಿ ಅವರ ಬೆಂಬಲಿಗರು ಹಿರಿಯ ನಾಯಕ ರಾಮಕೃಷ್ಣ ಹೆಗಡೆ ಅವರನ್ನು ಕೆಣಕಿದರು, ಆದರೆ ದೇವೇಗೌಡರು ಆ ಪ್ರವೃತ್ತಿಯನ್ನು ಮುಂದುವರಿಸದೆ ಯಾವುದೇ ನಾಯಕರ ವಿರುದ್ಧ ಅಸಂಬದ್ಧ ಹೇಳಿಕೆ ನೀಡದಂತೆ ಗೌಡರು ತಮ್ಮ ಬೆಂಬಲಿಗರಿಗೆ ಬುದ್ಧಿ ಹೇಳಿ ತಮ್ಮ ಪ್ರಬುದ್ಧತೆ ಮೆರೆದರು.

HD Devegowda
ದೇವೇಗೌಡ-ಕುಮಾರಸ್ವಾಮಿ ಅವರಿಗೆ ವಿಶಾಲ ಹೃದಯ ಇರಲಿಲ್ಲ; ಅವರನ್ನು ಪಿಎಂ-ಸಿಎಂ ಮಾಡಿದ್ದು ನಮ್ಮ ಪಕ್ಷ: ಡಿ.ಕೆ‌ ಶಿವಕುಮಾರ್

ಅವರ ವಯಸ್ಸು ಹೆಚ್ಚಾಗುತ್ತಿದೆ ಜೊತೆಗೆ ಅವರ ರಾಜ್ಯಸಭಾ ಅವಧಿಯ ಅಂತ್ಯದ ವೇಳೆಯು ಸಮೀಪಿಸುತ್ತಿದೆ. ಹೀಗಾಗಿ ದೇವೇಗೌಡರ ರಾಜಕೀಯ ಭವಿಷ್ಯವು ಸಕ್ರಿಯ ಚರ್ಚೆಯ ವಿಷಯವಾಗಿ ಉಳಿದಿದೆ. ತಮ್ಮ ಪಕ್ಷದ ಸಂಸದೀಯ ಬಲ ಕಡಿಮೆ ಇದ್ದರೂ ಸಹ ಅವರು ಮೇಲ್ಮನೆಗೆ ಮರಳಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅನುಭವಿ ನಾಯಕ ಮೊದಲ ಬಾರಿಗೆ ರಾಜಕಾರಣಿಯಾಗುವಂತೆ ಉತ್ಸಾಹ ಹೊಂದಿದ್ದಾರೆ, ಕಠಿಣ ವೇಳಾಪಟ್ಟಿಯನ್ನು ಕಾಯ್ದುಕೊಳ್ಳುತ್ತಾರೆ ಮತ್ತು ರಾಜಕೀಯ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ದೇವೇಗೌಡರು ನಮ್ಮನ್ನು ಪ್ರೀತಿಸಿದರು. ನಂತರ ಏನಾಯಿತೋ ಗೊತ್ತಿಲ್ಲ. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಯಾದರು... ಹೀಗೆಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಅವರ ಕಾಲೆಳೆದ ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ದೇವೇಗೌಡರು ಪ್ರತಿಕ್ರಿಯಿಸಿದರು.

ನಾನು ಕಾಂಗ್ರೆಸ್ ಜೊತೆಗಿದ್ದದ್ದು ಪ್ರೀತಿಯಿಂದಲ್ಲ, ಅದು ಒಂದು ಬಲವಂತದ ಮದುವೆ. ಆ ಸಂಬಂಧದಲ್ಲಿ ದಬ್ಬಾಳಿಕೆ ಮತ್ತು ಶೋಷಣೆ ಹೆಚ್ಚಾದ ಕಾರಣಕ್ಕೆ ಅನಿವಾರ್ಯವಾಗಿ ನಾನು ವಿಚ್ಛೇದನ ಪಡೆಯಬೇಕಾಯಿತು, 17 ಶಾಸಕರ ಪಕ್ಷಾಂತರಕ್ಕೆ ಯಾರು ಹೊಣೆ ಎಂದು ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

HD Devegowda
GBA ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಪರ್ಧಿಸಿ: ಜೆಡಿಎಸ್ ಮಹಿಳಾ ಸದಸ್ಯರಿಗೆ ಎಚ್.ಡಿ ದೇವೇಗೌಡ ಕರೆ

ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧವು ಬಹಳ ಹಿಂದಿನಿಂದಲೂ ಆಳವಾದ ರಾಜಕೀಯ ಪೈಪೋಟಿಯಿಂದ ಕೂಡಿದೆ. ಕರ್ನಾಟಕದಲ್ಲಿ ರಾಜಕೀಯದಲ್ಲಿ ಪ್ರತಿ ಬಾರಿಯೂ ಪ್ರಮುಖ ಪಾತ್ರ ವಹಿಸುತ್ತಿರುವ ಜೆಡಿಎಸ್ ನಿಂದ ಸಿದ್ದರಾಮಯ್ಯ ಅವರನ್ನು ದೇವೇಗೌಡರು ಹೊರದಬ್ಬಿದ್ದರು.

ದೇವೇಗೌಡರ ಆರು ದಶಕಗಳ ವೃತ್ತಿಜೀವನ, ಕರ್ನಾಟಕದ ರಾಜಕೀಯ ಮನಸ್ಸಿನ ಆಳವಾದ ತಿಳುವಳಿಕೆ ಮತ್ತು ಶಿಸ್ತಿನ ಸಾರ್ವಜನಿಕ ನಡವಳಿಕೆ ಅವರನ್ನು ವಿಭಿನ್ನ ಸಾಲಿನಲ್ಲಿ ನಿಲ್ಲುವಂತೆ ಮಾಡಿತು. ಅವರು ನಿಂದನೀಯ ವಾಕ್ಚಾತುರ್ಯವನ್ನು ತಪ್ಪಿಸುತ್ತಾರೆ, ಕಾರ್ಯತಂತ್ರದ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ.

ಒಕ್ಕಲಿಗ ಬೆಂಬಲವನ್ನು ಹಾಗೂ ಒಕ್ಕಲಿಗರ ನೆಲೆಯನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಆದರೆ ಇಂದಿನ ಅನೇಕ ಕಿರಿಯ ರಾಜಕಾರಣಿಗಳು ಅವರ ಈ ಗುಣವನ್ನು ಅಳವಡಿಸಿಕೊಳ್ಳಲು ಹೆಣಗಾಡುತ್ತಾರೆ.

ಹೆಚ್ಚಿನವರು ರಾಜಕೀಯವಾಗಿ ಹಿಂದೆ ಸರಿದಿರುವ ಈ ವಯಸ್ಸಿನಲ್ಲಿ, ದೇವೇಗೌಡರು ಇನ್ನೂ ಮುಂದೆ ಹೆಜ್ಜೆ ಹಾಕುತ್ತಿದ್ದಾರೆ, ಸಹಿಷ್ಣುತೆ, ತಂತ್ರ ಮತ್ತು ತೀಕ್ಷ್ಣ ಪ್ರವೃತ್ತಿಗಳು ರಾಜಕೀಯ ಸಮಯವನ್ನು ಮೀರಬಹುದು ಎಂದು ಸಾಬೀತುಪಡಿಸುತ್ತಿದ್ದಾರೆ ಎಂದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com