Karnataka bypolls: ಕ್ಲೈಮ್ಯಾಕ್ಸ್ ತಲುಪಿದ ಕಾಂಗ್ರೆಸ್ ಟಿಕೆಟ್ ಹಂಚಿಕೆ; ಅಂತಿಮ ಘೋಷಣೆಯೊಂದೇ ಬಾಕಿ, ಒಗ್ಗಟ್ಟಿನ ಮಂತ್ರ ಜಪಿಸಿದ ನಾಯಕರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಿದ್ದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮರ್ಥ್ ಅವರ ಅಭ್ಯರ್ಥಿತ್ವವನ್ನು ಬೆಂಬಲಿಸಿದ್ದರು ಎಂಬ ಮಾತುಗಳ ನಡುವೆ ಇಬ್ಬರಲ್ಲೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬ ಸಂದೇಶವನ್ನೂ ಪಕ್ಷ ನೀಡಿದೆ.
Chief Minister Siddaramaiah, his deputy D K Shivakumar, AICC general secretary Randeep Singh Surjewala, ministers Zameer Ahmed Khan and other leaders
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ-ಡಿಸಿಎಂ ಹಾಗೂ ಇತರರು
Updated on

ಬೆಂಗಳೂರು: ಏಪ್ರಿಲ್ 9 ರಂದು ನಡೆಯಲಿರುವ ಉಪ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದ ಸಂಕಷ್ಟವನ್ನು ಕಾಂಗ್ರೆಸ್ ನಾಯಕತ್ವ ನಿವಾರಿಸಿಕೊಂಡಿದೆ. ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ವಿಚಾರದಲ್ಲಿ, ತೋಟಗಾರಿಕೆ ಇಲಾಖೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಮತ್ತು ವಸತಿ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನೇತೃತ್ವದ ಕೆಲ ಮುಸ್ಲಿಂ ನಾಯಕರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಿದ್ದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮರ್ಥ್ ಅವರ ಅಭ್ಯರ್ಥಿತ್ವವನ್ನು ಬೆಂಬಲಿಸಿದ್ದರು ಎಂಬ ಮಾತುಗಳ ನಡುವೆ ಇಬ್ಬರಲ್ಲೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬ ಸಂದೇಶವನ್ನೂ ಪಕ್ಷ ನೀಡಿದೆ. ಸಮರ್ಥ್ ಅವರು ಸಚಿವ ಮಲ್ಲಿಕಾರ್ಜುನ್ ಹಾಗೂ ದಾವಣಗೆರೆ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರರಾಗಿದ್ದಾರೆ. ಅವರ ತಾತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಉಪ ಚುನಾವಣೆ ಅನಿವಾರ್ಯವಾಯಿತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರಭಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸಚಿವರಾದ ಮಲ್ಲಿಕಾರ್ಜುನ ಹಾಗೂ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಸಭೆ ನಡೆಸಿದರು. ಈ ವೇಳೆ ಸಿಎಂ ಮತ್ತು ಡಿಸಿಎಂ ಪಕ್ಕಪಕ್ಕದಲ್ಲೇ ಕುಳಿತುಕೊಂಡು, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಿನ ಸಂದೇಶವನ್ನು ನೀಡಿದ್ದಾರೆ.

Chief Minister Siddaramaiah, his deputy D K Shivakumar, AICC general secretary Randeep Singh Surjewala, ministers Zameer Ahmed Khan and other leaders
ದಾವಣಗೆರೆ ದಕ್ಷಿಣ ಉಪ ಚುನಾವಣೆ: 'ಮುಸ್ಲಿಮರು ಹೆಚ್ಚಿದ್ದೇವೆ, ನಮಗೇ ಟಿಕೆಟ್ ನೀಡಬೇಕು'; Zameer Ahmed ರಾಜಿನಾಮೆ ಬಾಂಬ್?

ಮುಸ್ಲಿಂ ಸಮುದಾಯದ ನಾಯಕರು ವಿಧಾನಸಭಾ ಸದಸ್ಯರಾದ ರಿಜ್ವಾನ್ ಅರ್ಶದ್, ಎನ್‌.ಎ.ಹ್ಯಾರಿಸ್, ನಸೀರ್ ಅಹ್ಮದ್ ಹಾಗೂ ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್—ಇವರೊಂದಿಗೆ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಪಕ್ಷದ ಅಭ್ಯರ್ಥಿಯಾಗಿ ಸಮರ್ಥ್ ಅವರನ್ನು ಕಣಕ್ಕಿಳಿಸುವುದಾಗಿ ನಿರ್ಧರಿಸಲಾಗಿದೆ. ಜೊತೆಗೆ, ನಿಗಮ-ಮಂಡಳಿಗಳ ನೇಮಕಾತಿ ಮಾಡುವ ಮೂಲಕ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ (MLC) ನಾಮನಿರ್ದೇಶನ ಮಾಡುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಲು ತೀರ್ಮಾನಿಸಲಾಗಿದೆ.

Chief Minister Siddaramaiah, his deputy D K Shivakumar, AICC general secretary Randeep Singh Surjewala, ministers Zameer Ahmed Khan and other leaders
ಉಪ ಚುನಾವಣೆ: ಕಾಂಗ್ರೆಸ್ ಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು; ನಾಳೆಯೊಳಗೆ ಹೆಸರು ಅಂತಿಮ- ಸುರ್ಜೇವಾಲಾ

ಜೂನ್‌ ತಿಂಗಳಲ್ಲಿ ಸುಮಾರು 12 ಎಂಎಲ್‌ಸಿಗಳು ನಿವೃತ್ತಿಯಾಗಲಿದ್ದು, ಸಚಿವ ಸಂಪುಟ ಪುನಾರಚನೆಯಲ್ಲಿಯೂ ಅವರಿಗೆ ಹೆಚ್ಚು ಸ್ಥಾನಗಳು ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ನಿರ್ಧಾರಕ್ಕೂ ಮುನ್ನವೇ ಸಮರ್ಥ್ ನಾಮಪತ್ರ ಸಲ್ಲಿಸಿದ್ದ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂತು.

ಈಗ ಕಾಂಗ್ರೆಸ್ ರಾಜ್ಯ ನಾಯಕತ್ವ ತೋರಿಸಿರುವ ಏಕತೆಯ ಪ್ರದರ್ಶನ ತಳಮಟ್ಟದಲ್ಲಿ ಪ್ರತಿಫಲಿಸುವುದೇ ಎಂಬುದು ಗಮನಿಸಬೇಕಿದೆ. ದಾವಣಗೆರೆಯಲ್ಲಿನ ಮುಸ್ಲಿಂ ನಾಯಕರು, ವಿಶೇಷವಾಗಿ ಯುವಕರು, ಈ ನಿರ್ಧಾರವನ್ನು ಇನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳದಿರುವುದಾಗಿ ಮೂಲಗಳು ಹೇಳಿವೆ.

ಈ ಕ್ಷೇತ್ರದಲ್ಲಿ ಗಮನಾರ್ಹ ಮುಸ್ಲಿಂ ಜನಸಂಖ್ಯೆ ಇರುವುದರಿಂದ, ಸಮರ್ಥ್ ಅವರಿಗೆ ಟಿಕೆಟ್ ನೀಡುವುದರಿಂದ ಈ ಕ್ಷೇತ್ರವು ಶಿವಶಂಕರಪ್ಪ ಕುಟುಂಬದ ಬಲವಾದ ಆಧಾರವಾಗಿಬಿಡುತ್ತದೆ ಎಂಬ ಭಾವನೆ ಯುವಕರಲ್ಲಿ ಮೂಡಿದೆ. ಇದರಿಂದ ಅವರ ರಾಜಕೀಯ ಆಶಯಗಳು ಅಂತ್ಯವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

Chief Minister Siddaramaiah, his deputy D K Shivakumar, AICC general secretary Randeep Singh Surjewala, ministers Zameer Ahmed Khan and other leaders
'ಒಂದು ಕಾಲದಲ್ಲಿ ಮನೆಗೆ ಬಿ ಫಾರಂ ಬರುತ್ತೆ ಅಂತಿದ್ರು, ಈಗ ಅಲೆಯುತ್ತಿದ್ದಾರೆ..': ಶಾಮನೂರು ಕುಟುಂಬದ ವಿರುದ್ಧ JDS ಮಾಜಿ ಶಾಸಕ ವ್ಯಂಗ್ಯ

ಬಾಗಲಕೋಟೆಗೆ ಮೇಟಿ ಪುತ್ರ

ಇನ್ನೊಂದೆಡೆ, ಮಾಜಿ ಸಚಿವ ದಿವಂಗತ ಎಚ್‌.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರನ್ನು ಬಾಗಲಕೋಟೆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪದ ಬಳಿಕ, ಪರಸ್ಪರ ವಿರೋಧದಲ್ಲಿದ್ದ ಕುಟುಂಬ ಸದಸ್ಯರು ಒಮ್ಮತಕ್ಕೆ ಬಂದು, ಉಮೇಶ್ ಅವರೇ ಅಭ್ಯರ್ಥಿಯಾಗಿ ಹೊರಹೊಮ್ಮಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com