

ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತೀವ್ರ ಜಟಾಪಟಿ ನಡೆಯಿತು. ಹೈಕಮಾಂಡ್ ಕುರಿತಂತೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಮುಂದೆ ಯಾವ ಹೈಕಮಾಂಡ್ ಸರ್... 17 ಬಾರಿ ಬಜೆಟ್ ಮಂಡನೆ ಮಾಡಿದ್ದೀರೀ. ನೀವು ಯಾಕೆ ಹೈಕಮಾಂಡ್ ಮಾತು ಕೇಳಬೇಕು. ಥೂ ಅಂತ ಬಿಟ್ಟು ಬಿಡಿ ಎಂದು ಸುನಿಲ್ ಕುಮಾರ್ ಹೇಳಿದರು. ಇದಕ್ಕೆ ಸಿದ್ದರಾಮಯ್ಯ, ನೀವು ಮೋದಿಗೆ ಥೂ ಅನ್ನಯ್ಯ ನೋಡೋಣಾ... ಮೊದಲು ನೀನು ಹೈಕಮಾಂಡ್ ಗೆ ಥೂ ಅಂತ ಹೇಳು ನೋಡೋಣ ಎಂದು ಸವಾಲು ಹಾಕಿದರು. ಹೈಕಮಾಂಡ್ ಹೈಕಮಾಂಡೇ... ಯಾರೇ ಆಗಲಿ ಹೈಕಮಾಂಡ್ ಮಾತು ಕೇಳಬೇಕು ಎಂದು ಹೇಳಿದರು.
Advertisement