'ಇದು ದೊಡ್ಡ ಸಂಚು, ಡಿ ಎನ್ ಜೀವರಾಜ್ ಪಿತೂರಿ ನಡೆಸಿದ್ದಾರೆ, ಕಾನೂನು ಹೋರಾಟ ಮಾಡುತ್ತೇವೆ': ಡಿ ಕೆ ಶಿವಕುಮಾರ್-Video

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ನಡೆದ ಬೆಳವಣಿಗೆ ಬಗ್ಗೆ ನನಗೆ ವರದಿ ಬಂದಿದೆ, ನಾನು ಪರಿಶೀಲನೆ ಮಾಡುತ್ತಿದ್ದೇನೆ ಎಂದರು.
D K Shivakumar
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಶೃಂಗೇರಿ ಕ್ಷೇತ್ರದ ಮತ ಎಣಿಕೆ ದೊಡ್ಡ ಪಿತೂರಿ, ಇಡೀ ದೇಶಕ್ಕೆ ಇಂತಹ ಕ್ರಿಮಿನಲ್ ಚಟುವಟಿಕೆ ಮಾಡುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ. ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರು ಯಾವ ರೀತಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಶೃಂಗೇರಿ ಕ್ಷೇತ್ರದ ಅಂಚೆ ಮತ ಎಣಿಕೆ ದೊಡ್ಡ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ನಡೆದ ಬೆಳವಣಿಗೆ ಬಗ್ಗೆ ನನಗೆ ವರದಿ ಬಂದಿದೆ, ನಾನು ಪರಿಶೀಲನೆ ಮಾಡುತ್ತಿದ್ದೇನೆ, ಬ್ಯಾಲೆಟ್ ಬಾಕ್ಸ್ ನ್ನು ತೆರೆಸಿ ಏನೆಲ್ಲಾ ಅಕ್ರಮ ಮಾಡಬಹುದು, ಕೋರ್ಟ್ ಗೆ ಹೋಗಿ ಬರೀ ಅಂಚೆ ಮತಎಣಿಕೆಯನ್ನು ಮಾತ್ರ ಮತ್ತೆ ಎಣಿಕೆ ಮಾಡಿಸಿರುವುದು, ಅವರ ಏಜೆಂಟ್ ಸಹಿ ಮಾಡಿದ್ದನ್ನು ತಿರುಚಿದ್ದು ಇಡೀ ದೇಶಕ್ಕೆ ವ್ಯವಸ್ಥಿತ ಅಪರಾಧವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಬಂದಿರುವ ವರದಿ ನೋಡಿಕೊಂಡು ಕಾನೂನುಪ್ರಕಾರ ಹೋರಾಟ ಮಾಡುತ್ತೇವೆ, ಸರ್ಕಾರದ ಮಟ್ಟದಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮುಂದುವರಿಯುತ್ತೇವೆ ಎಂದರು.

D K Shivakumar
3 ವರ್ಷಗಳ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ, ನನಗೆ ಸ್ಪಷ್ಟ ಬಹುಮತ ಬಂದಿದೆ, ಚುನಾವಣಾ ಆಯೋಗ ಘೋಷಿಸಲಿ: ಡಿ ಎನ್ ಜೀವರಾಜ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com