ಕೇಂದ್ರ ಚುನಾವಣಾ ಆಯುಕ್ತರಿಂದ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಗೆಲುವು; CEC ಜ್ಞಾನೇಶ್ ಕುಮಾರ್ 'ಮ್ಯಾನ್ ಆಫ್ ದಿ ಮ್ಯಾಚ್: ಸಂತೋಷ್ ಲಾಡ್; Video

ಅಸ್ಸಾಂನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸಿರಿಸ್ ಜ್ಞಾನೇಶ್ ಕುಮಾರ್ ಇದ್ದಾರೆ. ಅದರ ಬಗ್ಗೆ ಮಾಹಿತಿ ಕೊಡುತ್ತೇವೆ. ಪಶ್ಚಿಮ ಬಂಗಾಳ 90 ಲಕ್ಷ ವೋಟ್ ಡಿಲೀಟ್ ಮಾಡಿ, ಬೇಕಾದ ಕಡೆ ವೋಟ್ ಡಿಲೀಟ್ ಮಾಡಿದ್ದಾರೆ.
Santosh Lad
ಸಂತೋಷ್ ಲಾಡ್
Updated on

ಬೆಂಗಳೂರು: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಕೇಂದ್ರ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್‌ರಿಂದ ಬಿಜೆಪಿಗೆ ಗೆಲುವಾಗಿದೆ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.

ಪಂಚರಾಜ್ಯ ಚುನಾವಣೆ ಮತ್ತು ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ 2 ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಸರ್ಕಾರದ ಕಾರ್ಯಕ್ರಮ ಅದರ ಜೊತೆ ಕಾರ್ಯಕರ್ತರು, ಮುಖಂಡರ ಕೆಲಸದಿಂದ ಜನ ವೋಟ್ ಹಾಕಿ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

ಅಸ್ಸಾಂನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸಿರಿಸ್ ಜ್ಞಾನೇಶ್ ಕುಮಾರ್ ಇದ್ದಾರೆ. ಅದರ ಬಗ್ಗೆ ಮಾಹಿತಿ ಕೊಡುತ್ತೇವೆ. ಪಶ್ಚಿಮ ಬಂಗಾಳ 90 ಲಕ್ಷ ವೋಟ್ ಡಿಲೀಟ್ ಮಾಡಿ, ಬೇಕಾದ ಕಡೆ ವೋಟ್ ಡಿಲೀಟ್ ಮಾಡಿದ್ದಾರೆ. ಟಿಎಂಸಿ ಸೋಲಿಸೋ ವ್ಯವಸ್ಥೆ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆ ಕೂಡಾ ಇತ್ತು. ಚುನಾವಣೆ ಆಯೋಗಕ್ಕೆ ಜ್ಞಾನೇಶ್ ಕುಮಾರ್ ಬಂದ ಮೇಲೆ ಬಿಜೆಪಿ ಗೆಲುವಿನ ಮಾರ್ಜಿನ್‌ಗಳನ್ನ ದಾಟಿಸುವ ಮುಂದಾಳತ್ವ ತೆಗೆದುಕೊಂಡಿದ್ದಾರೆ.

ಕೆಲಸದ ಮೇಲೆ ವೋಟ್ ಕೇಳದೇ ಜ್ಞಾನೇಶ್ ಕುಮಾರ್ ಮೂಲಕ ಫ್ರಾಡ್ ಮಾಡಿ ಗೆದ್ದಿದ್ದಾರೆ. ಅವರಿಗೆ ಶುಭವಾಗಲಿ. ಎಲ್ಲರಿಗೂ ಒಂದು ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Santosh Lad
ತಮಿಳುನಾಡು ಫಲಿತಾಂಶ ನಮಗೆ ಅಚ್ಚರಿ ತಂದಿದೆ, ಅಲ್ಲಿನ ಜನತೆ ಬದಲಾವಣೆ ಬಯಸಿದ್ದರು ಅನಿಸುತ್ತದೆ: ಸಿದ್ದರಾಮಯ್ಯ; Video

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com