ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜಿನಾಮೆ: 2028 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ- ಯತ್ನಾಳ್

ಇದರಿಂದ ಕುರುಬ ಸಮಾಜ ಕೋಪಗೊಂಡಿದೆ. ಹಾಲುಮತ ಕುರುಬ ಸಮಾಜಕ್ಕೆ ಮಾಡಿದ ಅನ್ಯಾಯ ಇದಾಗಿದೆ. ಇದರ ಎಫೆಕ್ಟ್ ಮುಂದಿನ ವಿಧಾನಸಭೆ ಚುನಾವಣೆಯ ವೇಳೆ ವಿರೋಧ ಪಕ್ಷಗಳಿಗೆ ಲಾಭ ಅಗಲಿದೆ ಎಂದಿದ್ದಾರೆ.
basanagouda patil yatnal
ಬಸನಗೌಡ ಪಾಟೀಲ್ ಯತ್ನಾಳ್
Updated on

ವಿಜಯಪುರ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ಕೊಟ್ಟಿದ್ದರಿಂದ ಕಾಂಗ್ರೆಸ್‌ಗೆ 2028ಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದ ಅವರು ,ಸಿದ್ದರಾಮಯ್ಯ ಅವರನ್ನ ಯಾವುದೆ ಕಾರಣ ಇಲ್ಲದೆ ಇಳಿಸಿದ್ದಾರೆ. ಇದರಿಂದ ಕುರುಬ ಸಮಾಜ ಕೋಪಗೊಂಡಿದೆ. ಹಾಲುಮತ ಕುರುಬ ಸಮಾಜಕ್ಕೆ ಮಾಡಿದ ಅನ್ಯಾಯ ಇದಾಗಿದೆ. ಇದರ ಎಫೆಕ್ಟ್ ಮುಂದಿನ ವಿಧಾನಸಭೆ ಚುನಾವಣೆಯ ವೇಳೆ ವಿರೋಧ ಪಕ್ಷಗಳಿಗೆ ಲಾಭ ಅಗಲಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಯಾವಾಗಲೂ ಹಿಂದುಳಿದ ವರ್ಗ ಎನ್ನುತ್ತಿದ್ದರು. ಈಗ ಹಿಂದುಳಿದ ವರ್ಗ ಎಲ್ಲಿದೆ? ಸಿದ್ದರಾಮಯ್ಯ ರಾಜೀನಾಮೆಯಿಂದ ದಲಿತರಿಗೂ ಅನ್ಯಾಯ ಆಗಿದೆ. ಸಿದ್ದರಾಮಯ್ಯ ಅವರದ್ದು ಮುಸ್ಲಿಮರ ಓಲೈಕೆ ಅತಿಯಾಗಿತ್ತು. ಆದರೆ ಇವತ್ತು ಯಾವೊಬ್ಬ ಮುಸ್ಲಿಂ ನಾಯಕನು ರಾಜ್ಯದಲ್ಲಿ ಒಂದು ವಿರೋಧ ವ್ಯಕ್ತಪಡಿಸಿಲ್ಲ. ಅವರ ವಿದಾಯದ ವೇಳೆ ಬಹಳ ಟೀಕೆ ಮಾಡಲ್ಲ, ಅವರಿಗೆ ಒಳ್ಳೆಯದಾಗಲಿಎಂದರು.

basanagouda patil yatnal
ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮತ್ತೆ ದೆಹಲಿಗೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com