ಹಳ್ಳಿ ಗುಗ್ಗು v/s ಬಲಿತ ದಲಿತ ಸಮರ: ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಜೆಡಿಎಸ್ ಕಚೇರಿ ಮುಂದೆ ಪ್ರಿಯಾಂಕ್ ಖರ್ಗೆ ಪರ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ರಾಜಕೀಯ ವಾಗ್ಯುದ್ಧ ತೀವ್ರಗೊಂಡಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿ ಮುಂಭಾಗ ಹಾಗೂ ನಗರದ ಹಲವೆಡೆ ಪ್ರಿಯಾಂಕ್ ಖರ್ಗೆ ಪರವಾಗಿ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Priyank Kharge Posters Surface Outside JDS Office In Bengaluru Amid War Of Words With HD Kumaraswamy
ಜೆಡಿಎಸ್ ಕಚೇರಿ ಮುಂದೆ ಪ್ರಿಯಾಂಕ್ ಖರ್ಗೆ ಪರ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನOnline Desk
Updated on: 

ಬೆಂಗಳೂರು: ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ರಾಜಕೀಯ ವಾಗ್ಯುದ್ಧ ತೀವ್ರಗೊಂಡಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿ ಮುಂಭಾಗ ಹಾಗೂ ನಗರದ ಹಲವೆಡೆ ಪ್ರಿಯಾಂಕ್ ಖರ್ಗೆ ಪರವಾಗಿ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ. ಈ ಪೋಸ್ಟರ್‌ಗಳಲ್ಲಿ "ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ.. ನಾನು ಬೆಳೆದಿದ್ದು ನಮ್ಮ ಸಂವಿಧಾನ ಮತ್ತು ಕಾಂಗ್ರೆಸ್‌ನಿಂದಲೇ ಹೊರತು ನಿಮ್ಮ ಮನೆಯ ಆಲೂಗಡ್ಡೆಯಿಂದಲ್ಲ" ಎಂಬ ಸಂದೇಶವನ್ನು ಮುದ್ರಿಸುವ ಮೂಲಕ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನಾವು ಹಳ್ಳಿಯವರೇ ಏನಿವಾಗ?

ಇತ್ತೀಚೆಗೆ ಸಿಡಿ ಹಾಗೂ ಸ್ಟಿಂಗ್ ಆಪರೇಷನ್‌ಗಳಿಗೆ ಸಂಬಂಧಿಸಿದ ತನಿಖೆಯ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು "ವಿಲೇಜ್ ಇಡಿಯಟ್" (ಹಳ್ಳಿ ಗುಗ್ಗು) ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ತೀವ್ರವಾಗಿ ಆಕ್ರೋಶ ಹೊರಹಾಕಿದ್ದ ಹೆಚ್.ಡಿ. ಕುಮಾರಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಅವರನ್ನು 'ಬಲಿತ ದಲಿತ' ಎಂದು ಕರೆದರು. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಕ್ಕೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು ಎಂದು ಪ್ರಶ್ನಿಸಿ, ಅವರ ರಾಜಕೀಯ ಬೆಳವಣಿಗೆಯನ್ನು ಟೀಕಿಸಿದ್ದರು. ಇದರ ನಡುವೆಯೇ, ಪ್ರಿಯಾಂಕ್ ಖರ್ಗೆ ಅವರ ಹಳ್ಳಿ ಗುಗ್ಗು ಹೇಳಿಕೆಯ ವಿರುದ್ಧ ಬೀದಿಗಿಳಿದ ಜೆಡಿಎಸ್, ರಾಮನಗರ ಜಿಲ್ಲೆಯ ಬಿಡದಿ ಸೇರಿದಂತೆ ಹಲವೆಡೆ "ಗೃಹ ಸಚಿವರೇ (ಪ್ರಿಯಾಂಕ್ ಖರ್ಗೆ), ನಾವು ಹಳ್ಳಿಯವರೇ ಏನಿವಾಗ?" ಎಂಬ ಒಕ್ಕಣೆಯ ಬೃಹತ್ ಪೋಸ್ಟರ್‌ಗಳನ್ನು ಹಾಕಿ ಗ್ರಾಮೀಣ ಜನರನ್ನು ಅವಮಾನಿಸಲಾಗಿದೆ ಎಂದು ಪ್ರತಿಭಟಿಸಿತ್ತು.

Priyank Kharge Posters Surface Outside JDS Office In Bengaluru Amid War Of Words With HD Kumaraswamy
'ಚಿತ್ತಾಪುರನ ಏನ್ ಚಿಕಾಗೋ ಮಾಡಿದ್ದೀರಾ? PUC ಫೇಲ್ ಆದ ನೀವು ರಾಜ್ಯದ ಗೃಹಮಂತ್ರಿ': ಪ್ರತಾಪ್ ಸಿಂಹ ವಾಗ್ದಾಳಿ

ಯುವ ಕಾಂಗ್ರೆಸ್ ತಿರುಗೇಟು

ಈ ಬೆನ್ನಲ್ಲೇ, ಕುಮಾರಸ್ವಾಮಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಯುವ ಕಾಂಗ್ರೆಸ್, ಪೋಸ್ಟರ್‌ಗಳ ಮೂಲಕ ವ್ಯಂಗ್ಯವಾಗಿ ಪ್ರತ್ಯುತ್ತರ ನೀಡಿದೆ. ಆ ಪೋಸ್ಟರ್‌ಗಳಲ್ಲಿ, "ಹೌದು, ನಾನು ಬಲಿತ ದಲಿತನೇ ಸುಮಾರಣ್ಣ... ನಾನು ಬೆಳೆದಿದ್ದು ನಮ್ಮ ಸಂವಿಧಾನ ಮತ್ತು ಕಾಂಗ್ರೆಸ್‌ನಿಂದಲೇ ಹೊರತು ನಿಮ್ಮ ಮನೆಯ ಆಲೂಗಡ್ಡೆಯಿಂದಲ್ಲ" ಎಂಬ ಖಡಕ್ ಸಂದೇಶವನ್ನು ಮುದ್ರಿಸಿ ತಿರುಗೇಟು ನೀಡಲಾಗಿದೆ.

ಪೋಸ್ಟರ್ ಎಲ್ಲೆಲ್ಲಿ ರಾರಾಜಿಸುತ್ತಿವೆ?

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ಪಕ್ಷದ ಪ್ರಧಾನ ಕಚೇರಿಯ ಮುಂಭಾಗದಲ್ಲೇ ಈ ಪೋಸ್ಟರ್‌ಗಳನ್ನು ಪ್ರಮುಖವಾಗಿ ಅಂಟಿಸಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಜಂಕ್ಷನ್‌ಗಳಾದ ಮೆಜೆಸ್ಟಿಕ್, ಓಕಾಲಿಪುರಂ ಮತ್ತು ಸುತ್ತಮುತ್ತಲಿನ ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆ ವೃತ್ತಗಳಲ್ಲಿ ಈ ಬ್ಯಾನರ್‌ಗಳು ರಾರಾಜಿಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X