

ಬೆಂಗಳೂರು: ಇತ್ತೀಚಿಗೆ ಬಿಹಾರದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು "ಮೋದಿ ಕಾ ಬಾಪ್ ಭೀ ಜಾಯೇಗಾ"(ಮೋದಿ ಏನ್ ಅವರ ಅಪ್ಪನ ಹೋಗುತ್ತಾರೆ) ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ, `ಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ’ ಎಂಬ ಹಾಡಿನ AI ವಿಡಿಯೋ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.
ಎಐ ವಿಡಿಯೋವನ್ನು ಎಕ್ಸ್‌ನಲ್ಲಿ ಬಿಜೆಪಿ ಹಂಚಿಕೊಂಡಿದ್ದು, ಅದರಲ್ಲಿ ʻಎಲ್ಲೂ ಹೋಗಲ್ಲ ಮೋದಿ ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಎಂದಿಗೂ ಮೋದಿ ಎಲ್ಲೂ ಹೋಗಲ್ಲʼ ಎಂಬ ಹಾಡನ್ನು ಹಾಕಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದೆ.
ಬಿಹಾರದ ಮೊದಲ ಮುಖ್ಯಮಂತ್ರಿ ಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
'ಮೋದಿ ಹೋಗುವುದಿಲ್ಲ' ಎಂದು ಸಭಿಕರಲ್ಲೊಬ್ಬರು ಕೂಗಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, "ಮೋದಿ ಕಾ ಬಾಪ್ ಭೀ ಜಾಯೇಗಾ" (ಮೋದಿ ಏನ್ ಅವರ ಅಪ್ಪನ ಹೋಗುತ್ತಾರೆ) ಎಂದು ತಿರುಗೇಟು ನೀಡಿದ್ದರು.