ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಆರೋಪ: ಪ್ರಧಾನಿ ಮೋದಿಯದ್ದು ಫ್ಯಾಸಿಸ್ಟ್ ಮನಸ್ಥಿತಿ; ಕಾಂಗ್ರೆಸ್ ನಾಯಕರ ಆಕ್ರೋಶ

ಏಕೆಂದರೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಅನೇಕ ಪ್ರಮುಖ ವ್ಯಕ್ತಿಗಳ ಫೋನ್‌ಗಳನ್ನು ಕದ್ದಾಲಿಕೆ ಮಾಡಿಸಿದ್ದರು ಎಂಬ ಆರೋಪವಿತ್ತು," ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
Congress leader Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿPhoto | Express
Updated on: 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ತನ್ನ ಫೋನ್ ಅನ್ನು ಕದ್ದಾಲಿಕೆ (ಟ್ಯಾಪಿಂಗ್) ಮಾಡುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತ ಪಡಿಸಿದ್ದಾರೆ.

"ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರು ಮತ್ತು ರಾಷ್ಟ್ರಕ್ಕೆ ಬೆದರಿಕೆಯಾಗಿರುವ ವ್ಯಕ್ತಿಗಳ ಮೇಲೆ ಕಣ್ಗಾವಲು ಇಡುವುದರ ಬಗ್ಗೆ ನಾನು ಕೇಳಿದ್ದೇನೆ. ಆದರೆ, ಈ ಫ್ಯಾಸಿಸ್ಟ್ ಮನಸ್ಥಿತಿಯು ಸಂವಿಧಾನದಲ್ಲಿ ಪ್ರತಿಪಾದಿಸಲಾದ 'ಗೌಪ್ಯತೆಯ ಹಕ್ಕು' ಸೇರಿದಂತೆ ಪ್ರಜಾಪ್ರಭುತ್ವದ ತತ್ವಗಳನ್ನೇ ಅಲ್ಲಗಳೆಯುತ್ತದೆ, ನರೇಂದ್ರ ಮೋದಿಯವರಿಗೆ ಇದೇನು ಹೊಸದಲ್ಲ.

ಏಕೆಂದರೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಅನೇಕ ಪ್ರಮುಖ ವ್ಯಕ್ತಿಗಳ ಫೋನ್‌ಗಳನ್ನು ಕದ್ದಾಲಿಕೆ ಮಾಡಿಸಿದ್ದರು ಎಂಬ ಆರೋಪವಿತ್ತು," ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಪ್ರಧಾನ ಮಂತ್ರಿಗಳ ಕಚೇರಿ (PMO) ಇಂತಹ ಕೆಳಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ವಿರೋಧ ಪಕ್ಷದ ನಾಯಕರೊಬ್ಬರ ಫೋನ್ ಕದ್ದಾಲಿಕೆ ಮಾಡಲಾಗುತ್ತದೆ ಎಂದರೆ, ಅದು ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗುತ್ತದೆ.

Congress leader Rahul Gandhi
ಕೇವಲ 7ಕಿ.ಮೀ. ಉದ್ದದ ಮೆಟ್ರೋ ಉದ್ಘಾಟನೆಗೆ ಪ್ರಧಾನಿ ಮೋದಿ ಬರಬೇಕಿತ್ತಾ, ಹತಾಶೆಯಿಂದ ಅವರು ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ: ಸಚಿವ ಎಂಬಿ ಪಾಟೀಲ್; Video

ಪ್ರಜಾಪ್ರಭುತ್ವದ ಕಲ್ಪನೆಯನ್ನು ನಂಬುವ ಮತ್ತು ಗೌರವಿಸುವ ಯಾರೂ ಕೂಡ ವಿರೋಧ ಪಕ್ಷದ ನಾಯಕರು ಮಾಡಿರುವ ಈ ಆರೋಪವನ್ನು ಲಘುವಾಗಿ ಪರಿಗಣಿಸಬಾರದು... ಪ್ರಜಾಪ್ರಭುತ್ವದ ಮೇಲೆ ಜನರಿಗಿರುವ ನಂಬಿಕೆಯನ್ನು ಮರುಸ್ಥಾಪಿಸಲು ಪ್ರಧಾನಿಯವರು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು," ಎಂದು ಪಾಟೀಲ್ ಆಗ್ರಹಿಸಿದರು.

ನರೇಂದ್ರ ಮೋದಿ ಸರ್ಕಾರವು ತನ್ನ ರಾಜಕೀಯ ಎದುರಾಳಿಗಳ ಮೇಲೆ ಕಣ್ಗಾವಲು ಇಡಲು ಕಾನೂನುಬದ್ಧ, ಕಾನೂನುಬಾಹಿರ, ನೈತಿಕ ಅಥವಾ ಅನೈತಿಕ - ಹೀಗೆ ಎಲ್ಲಾ ಮಾರ್ಗಗಳನ್ನು ಬಳಸಿಕೊಳ್ಳುವುದಕ್ಕೆ ಕುಖ್ಯಾತವಾಗಿದೆ. 'ಪೆಗಾಸಸ್' ಹಗರಣದ ಸಂದರ್ಭದಲ್ಲಿ ಇದನ್ನು ನಾವು ನೋಡಿದ್ದೇವೆ.

ಮೋದಿ ಸರ್ಕಾರಕ್ಕೆ ಕೆಲವು ದೇಶಗಳೊಂದಿಗೆ ಇರುವ ನಿಕಟ ಸಂಬಂಧವು, ಈ ತಂತ್ರಜ್ಞಾನವನ್ನು (ಸಾಫ್ಟ್‌ವೇರ್) ಪಡೆದುಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ. ಇದನ್ನು ಬಳಸಿ ಅವರು ಪ್ರಮುಖ ವ್ಯಕ್ತಿಗಳನ್ನು ತಮ್ಮ ರಾಜಕೀಯ ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಾರೆ," ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಶದ್ ಹೇಳಿದರು.

ಫೋನ್ ಕದ್ದಾಲಿಕೆ ಎಂಬುದು ಗಂಭೀರ ವಿಷಯವಾಗಿದ್ದು, ಇದು ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು. ಕೇಂದ್ರ ಸರ್ಕಾರಿ ಸಂಸ್ಥೆಗಳು ಪ್ರಾದೇಶಿಕ ನಾಯಕರ ಮೇಲೆ ಒತ್ತಡ ಹೇರಲು ಮತ್ತು ರಾಜಕೀಯ ವಿರೋಧಿಗಳನ್ನು ಮೂಲೆಗುಂಪು ಮಾಡಲು ಕಣ್ಗಾವಲು ತಂತ್ರಗಳನ್ನು ಬಳಸಿದಾಗ, ಭಾರತದ ಒಕ್ಕೂಟ ವ್ಯವಸ್ಥೆಯ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಹೇಳಿದರು.

ವಿರೋಧ ಪಕ್ಷದ ನಾಯಕರು 'ಶ್ಯಾಡೋ ಪ್ರಧಾನಿ' ಇದ್ದಂತೆ, ಅಂತಹವರ ಫೋನ್ ಕದ್ದಾಲಿಕೆ ಮಾಡುವುದು ಪ್ರಜಾಪ್ರಭುತ್ವದ ಆಶಯಗಳ ಅತ್ಯಂತ ಕೆಟ್ಟ ಉಲ್ಲಂಘನೆಯಾಗಿದೆ ಎಂದು ಬಿಡಿಎ ಅಧ್ಯಕ್ಷರು ಹಾಗೂ ಶಾಂತಿನಗರ ಕ್ಷೇತ್ರದ ಶಾಸಕರಾದ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ. ಮತ ಕಳ್ಳತನದ ಆರೋಪಗಳ ನಂತರ, ಈಗ ಈ ಗಂಭೀರ ಆರೋಪ ಕೇಳಿಬರುತ್ತಿದೆ. ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ, ತನಿಖಾ ಆಯೋಗವೊಂದನ್ನು ರಚಿಸಬೇಕಿತ್ತು. ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಲುಕಿ, ಅಂತಿಮವಾಗಿ ರಾಜೀನಾಮೆ ನೀಡಬೇಕಾಗಿ ಬಂದಿದ್ದನ್ನು ನೆನಪಿಸಿಕೊಳ್ಳಿ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X