ನನಗೆ ಹಿರಿಯೂರು ಕೂಡ ಕನಕಪುರವಿದ್ದಂತೆ: ಗೆಲುವಿಗೆ ಮಾಸ್ಟರ್ ಪ್ಲ್ಯಾನ್; ₹2,000 ಕೋಟಿಗೂ ಅಧಿಕ ಅನುದಾನದ ದಾಳ ಉರುಳಿಸಿದ ಡಿಕೆಶಿ..!

ಇದೇ ವೇಳೆ ಜನರ ಅಹವಾಲುಗಳನ್ನು ಆಲಿಸುವ ಕಾರ್ಯಕ್ರಮವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಂಡ ಅವರು, "ನಿಮಗೆ ಭೂಮಿ ಗ್ಯಾರಂಟಿ, ನೀರಿನ ಗ್ಯಾರಂಟಿ ಹಾಗೂ ನಿವೇಶನ ನೀಡಿದ್ದೇವೆ. ಈಗ ನಿಮ್ಮ ಬೆಂಬಲ ಕೇಳಲು ನಿಮ್ಮ ಮುಂದೆ ಬಂದಿದ್ದೇನೆ" ಎಂದು ಹೇಳಿದರು.
Chief Minister DK Shivakumar receives a petition from a woman during the Praja Seva Abhiyan in Hiriyur on Saturday
ಹಿರಿಯೂರಿನಲ್ಲಿ ಶನಿವಾರ ನಡೆದ ಪ್ರಜಾ ಸೇವಾ ಅಭಿಯಾನದ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹಿಳೆಯಿಂದ ಅರ್ಜಿಯನ್ನು ಸ್ವೀಕರಿಸಿದರು.
Updated on: 

ಹಿರಿಯೂರು (ಚಿತ್ರದುರ್ಗ): ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ಏರುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮತ್ತು ಬೃಹತ್ ಅನುದಾನಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.

ಶನಿವಾರ ಹಿರಿಯೂರಿನಲ್ಲಿ ಆಯೋಜಿಸಲಾಗಿದ್ದ 'ಪ್ರಜಾ ಸೇವಾ ಅಭಿಯಾನ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹2,000 ಕೋಟಿಗೂ ಅಧಿಕ ಅನುದಾನ ನೀಡಿದೆ ಎಂದು ತಿಳಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದ್ದಾರೆ.

ಮಾಜಿ ಸಚಿವ ಹಾಗೂ ಶಾಸಕ ಡಿ. ಸುಧಾಕರ್ ಅವರ ನಿಧನದಿಂದ ತೆರವಾಗಿರುವ ಹಿರಿಯೂರು ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ಹಿರಿಯೂರು ನನಗೆ ನನ್ನ ತವರು ಕ್ಷೇತ್ರ ಕನಕಪುರದಷ್ಟೇ ಮುಖ್ಯ. ದಿವಂಗತ ಡಿ. ಸುಧಾಕರ್ ಅವರ ಅಭಿವೃದ್ಧಿ ಕನಸುಗಳನ್ನು ನನಸು ಮಾಡಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾಸೇವಾ ಅಭಿಯಾನದ ಬೃಹತ್ ಸಮಾವೇಶದಲ್ಲಿ ಮಾತನಾಡಿರುವ ಅವರು, ಹಿರಿಯೂರು ಕ್ಷೇತ್ರದ ಅಭಿವೃದ್ಧಿಗಾಗಿ 3,000 ಮನೆಗಳು ಹಾಗೂ 17,434 ನಿವೇಶನಗಳೂ ಸೇರಿದಂತೆ 2,000 ಕೋಟಿ ರೂಪಾಯಿಗೂ ಅಧಿಕ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ ಎಂದು ತಿಳಿಸಿದರು. ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು 1,087 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದರು.

ಇದೇ ವೇಳೆ ಜನರ ಅಹವಾಲುಗಳನ್ನು ಆಲಿಸುವ ಕಾರ್ಯಕ್ರಮವನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಂಡ ಅವರು, "ನಿಮಗೆ ಭೂಮಿ ಗ್ಯಾರಂಟಿ, ನೀರಿನ ಗ್ಯಾರಂಟಿ ಹಾಗೂ ನಿವೇಶನ ನೀಡಿದ್ದೇವೆ. ಈಗ ನಿಮ್ಮ ಬೆಂಬಲ ಕೇಳಲು ನಿಮ್ಮ ಮುಂದೆ ಬಂದಿದ್ದೇನೆ" ಎಂದು ಹೇಳಿದರು.

ಈ ವೇಳೆ ಜನರ ಪ್ರತಿಕ್ರಿಯೆಯನ್ನು ಚಿತ್ರೀಕರಿಸುವಂತೆ ಛಾಯಾಗ್ರಾಹಕರಿಗೆ ಸೂಚಿಸಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದನ್ನು ನೋಡಬೇಕು ಎಂದರು.

ಪರೋಕ್ಷವಾಗಿ ಮತದಾರರಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ ಮುಖ್ಯಮಂತ್ರಿ, ಹಿರಿಯೂರು ಕ್ಷೇತ್ರ ತನಗೆ ಕನಕಪುರದಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು. ದಿವಂಗತ ಶಾಸಕ ಡಿ. ಸುಧಾಕರ್ ಅವರ ಅಭಿವೃದ್ಧಿಯ ಕನಸನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು

ಹಿರಿಯೂರಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವ ಮೂಲಕ ಬರ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಐದು ಗ್ಯಾರಂಟಿ ಯೋಜನೆಗಳ ಜತೆಗೆ ಭೂಮಿ, ನೀರು ಮತ್ತು ಬದುಕಿನ ಭರವಸೆಗಳು ಜನರ ಜೀವನಮಟ್ಟ ಸುಧಾರಿಸುವ ಉದ್ದೇಶ ಹೊಂದಿವೆ ಎಂದು ಹೇಳಿದರು.

Chief Minister DK Shivakumar receives a petition from a woman during the Praja Seva Abhiyan in Hiriyur on Saturday
ಹಿರಿಯೂರು ಉಪಚುನಾವಣೆಗೆ ರಣಕಹಳೆ: ದಿನಾಂಕ ಘೋಷಣೆಗೂ ಮುನ್ನವೇ ರಂಗೇರಿದ ಅಖಾಡ ರಂಗು; ಅನುಕಂಪದ ಅಲೆ v/s ಮೈತ್ರಿ ಬಲ, ಯಾರ ಪಾಲಾಗಲಿದೆ ಕ್ಷೇತ್ರ..?

ಅರ್ಹ ಕುಟುಂಬಗಳ ಮಹಿಳೆಯರ ಹೆಸರಿನಲ್ಲಿ 30x40 ಅಡಿ ನಿವೇಶನಗಳನ್ನು ನೋಂದಣಿ ಮಾಡಿಸುವ ಮೂಲಕ ಅವರ ಆರ್ಥಿಕ ಭದ್ರತೆಯನ್ನು ಬಲಪಡಿಸಲಾಗುವುದು ಎಂದು ಭರವಸೆ ನೀಡಿದರು.

ಸೆಪ್ಟೆಂಬರ್‌ನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಜಾಸೇವಾ ಕಾರ್ಯಕ್ರಮದಡಿ 3,737 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 2,900 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು. ಪ್ರಾಮಾಣಿಕತೆ, ಶಿಸ್ತು ಮತ್ತು ನೈತಿಕತೆಯ ನೆಲೆಗಟ್ಟಿನಲ್ಲಿ ಜನಸೇವೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ನೀರಾವರಿ ಯೋಜನೆಗಳ ಕುರಿತು ಮಾತನಾಡಿದ ಶಿವಕುಮಾರ್, ಮೇಲ್ಭದ್ರಾ ಯೋಜನೆಯಡಿ ಕೆರೆಗಳನ್ನು ತುಂಬಿಸಲು ವಿಶ್ವೇಶ್ವರಯ್ಯ ಜಲ ನಿಗಮದ ಮೂಲಕ 1,742 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 16 ಕೆರೆಗಳನ್ನು ತುಂಬಿಸಲು 244 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಐತಿಹಾಸಿಕ ಗೊಂಡೂರು ಕೆರೆಯನ್ನು ಕಳೆದ ತಿಂಗಳು ತುಂಬಿಸಲಾಗಿದೆ. ಮೇಲ್ಭದ್ರಾ ಯೋಜನೆಯಡಿ ನಾಲ್ಕು ಜಿಲ್ಲೆಗಳ 13 ತಾಲೂಕುಗಳ 367 ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ಇದರಿಂದ ಅಂದಾಜು 74.26 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದರು.

ಹಿರಿಯೂರು ದಕ್ಷಿಣ ಭಾಗದಲ್ಲಿ ಮೊದಲ ಹಂತದ ಭೂಗತ ಒಳಚರಂಡಿ ಯೋಜನೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿಯ ಕಾಲೋನಿಗಳ ಮೂಲಸೌಕರ್ಯ ಅಭಿವೃದ್ಧಿಗೆ 50 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಿರಿಯೂರಿನಲ್ಲಿ ಡಾ. ಬಾಬು ಜಗಜೀವನ ರಾಮ್, ಛಲವಾದಿ ಹಾಗೂ ಭೋವಿ ಸಮುದಾಯಗಳ ಭವನಗಳನ್ನು 12.65 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.

ಇದರ ಜತೆಗೆ 5 ಕೋಟಿ ರೂಪಾಯಿ ವೆಚ್ಚದಲ್ಲಿ ಒಕ್ಕಲಿಗರ ಭವನ ನಿರ್ಮಿಸಲಾಗುವುದು. ಹಿರಿಯೂರಿನಲ್ಲಿ ಹೆಚ್ಚುವರಿ ಭೂಗತ ಒಳಚರಂಡಿ ಕಾಮಗಾರಿಗಳನ್ನೂ ಕೈಗೊಳ್ಳಲಾಗುವುದು ಎಂದು ಹೇಳಿದರು.

ಧರ್ಮಪುರದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. 2026-27ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 20 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X