ನನಗೆ ಹಳ್ಳ ತೋಡಲು ಪ್ರತಿಕ್ಷಣ ಕಾಯುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ

ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಶ್ರೀನಿವಾಸ ಪುರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ರೈತರು ಸಂವಾದದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
Nikhil Kumaraswamy
ನಿಖಿಲ್ ಕುಮಾರಸ್ವಾಮಿ
Updated on: 

ಕೋಲಾರ: ಸರ್ಕಾರದ ವಿರುದ್ಧ ಗುಡುಗುತ್ತಿದ್ದಾನೆ ಎಂದು ನನಗೆ ಹಳ್ಳ ತೋಡಲು ಪ್ರತಿಕ್ಷಣ ಕಾಯುತ್ತಿದ್ದಾರೆ. ನನ್ನ ಲೋಪ ಏನಾದರೂ ಇದ್ದಿದ್ದರೆ, ಇಷ್ಟರಲ್ಲಿ ನನ್ನ ಬಾಯಿ ಮುಚ್ಚಿಸಿಬಿಡುತ್ತಿದ್ದರು. ಹಾಗಾಗಿ ಧೈರ್ಯವಾಗಿ ರೈತರ ಪರವಾಗಿ ನಿಂತು ಹೋರಾಟ ಮಾಡಲು ಬಂದಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಬಂಗಾರಪೇಟೆ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಶ್ರೀನಿವಾಸ ಪುರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ರೈತರು ಸಂವಾದದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ನನಗೆ ನಿಮ್ಮ ಪರವಾಗಿ ವಿಧಾನಸೌಧಕ್ಕೆ ಹೋಗಿ ಮಾತನಾಡಲು ಇನ್ನೂ ಅವಕಾಶ ಸಿಕ್ಕಿಲ್ಲ, ಆದರೆ ಈ ಪ್ರಜಾಪ್ರಭುತ್ವದಲ್ಲಿ ಬೀದಿಯಲ್ಲಿ ನಿಂತು ಹೋರಾಟ ಮಾಡಲು ಅವಕಾಶವಿದೆ. ನಾನು ಸತತವಾಗಿ ಚುನಾವಣೆ ಸೋತಿರಬಹುದು, ಆದರೆ ಎದೆಗುಂದಿಲ್ಲ ಎಂದು ಹೇಳಿದರು.

ಬೋರ್‌ವೆಲ್ ಕೊರೆಸಲು ೨ ಲಕ್ಷ ರು. ಖರ್ಚು ಮಾಡಿ ೧೬೦೦ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಬೆಳೆಗೆ ಕನಿಷ್ಠ ೮ ಗಂಟೆಯಾದರೂ ೩ ಫೇಸ್ ಕರೆಂಟ್ ಕೊಡಬೇಕು. ಲೋಡ್ ಶೆಡ್ಡಿಂಗ್‌ನಿಂದ ರೈತ ಕಂಗಾಲಾಗಿದ್ದಾನೆ. ಅದೆಲ್ಲೋ ಗೃಹಜ್ಯೋತಿ, ಗೃಹಲಕ್ಷ್ಮೀ ಅಂತೀರಾ, ಎಲ್ಲಿದೆ ಜ್ಯೋತಿ? ರೈತರ ಜೀವನವೇ ಕತ್ತಲೆಯಾಗಿದೆ. ಬರೀ ಭಾಷಣದಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಕಿಡಿಕಾರಿದರು.

Nikhil Kumaraswamy
ಪರಿಷತ್ ಚುನಾವಣೆಯಲ್ಲಿ ತಂತ್ರಕ್ಕೆ ರಣತಂತ್ರ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ HDK ಗರಡಿಯಲ್ಲಿ ಪಳಗಿದವರು; ಎಲ್ಲೆಲ್ಲಿ ಸೋತಿದ್ದಾರೋ ಅಲ್ಲೆಲ್ಲಾ SIR ಖ್ಯಾತೆ- ನಿಖಿಲ್

ಕೋಲಾರ ಜಿಲ್ಲೆ ನೀರಿಲ್ಲದೆ ಬರಡಾಗುತ್ತಿದೆ ಎಂಬ ರೈತರ ಅಳಲಿಗೆ ಪ್ರತಿಕ್ರಿಯಿಸಿದ ನಿಖಿಲ್ ಅವರು, ಕೋಲಾರ ಜಿಲ್ಲೆಗೆ ಕೃಷ್ಣಾ ನದಿಯಿಂದ ನೀರು ತರುವುದಕ್ಕೆ ಅವಕಾಶ ಇದೆ. ಈಗಾಗಲೇ ಕುಮಾರಣ್ಣನವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಈ ಬಗ್ಗೆ ಮನವಿ ನೀಡಿ ಗಮನ ಸೆಳೆದಿದ್ದಾರೆ. ನೂರಕ್ಕೆ ನೂರು ಇದಕ್ಕೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದರು.

ಕೆ.ಸಿ. ವ್ಯಾಲಿ ಯೋಜನೆಯ ನೀರು ಕನಿಷ್ಠ ಮೂರನೇ ಹಂತದ ಶುದ್ಧೀಕರಣವಾಗಬೇಕು, ಅದು ಆಗಿಲ್ಲ. ಇದರಿಂದ ಬೆಳೆದ ಬೆಳೆ ತಿನ್ನಲು ಯೋಗ್ಯವಿಲ್ಲ, ಯಾರೂ ಖರೀದಿಸುವುದೂ ಇಲ್ಲ. ಇದು ಕೇವಲ ಬೆಂಗಳೂರಿನ ಕೊಳಚೆ ನೀರು, ಇದರಿಂದ ನಮ್ಮ ಅಂತರ್ಜಲ ಮಲಿನವಾಗುತ್ತಿದೆ. ಕೋಲಾರದ ಕೆರೆಗಳಿಗೆ ಕೃಷ್ಣೆಯ ಶುದ್ಧ ನೀರು ಹರಿಸಿದರೆ ಮಾತ್ರ ಜಿಲ್ಲೆ ಉಳಿಯುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com