ನೀನು ಹುಟ್ಟಿದ ತಕ್ಷಣ ಸೂಟು-ಬೂಟು ಹಾಕಿ ಕಾನ್ವೆಂಟ್ ಗೆ ಕಳ್ಸಿದ್ದು ನಿಮ್ಮಪ್ಪ: ಹರಿದ ಚಡ್ಡಿಯಲ್ಲೇ ಶಾಲೆಗೆ ಹೋಗುತ್ತಿದ್ದ ನನ್ನಂಥ ಬಡವನನ್ನ ಎಂಎಲ್ಎ ಮಾಡಿದ್ದು HDK!

ಸ್ಟಿಂಗ್ ಆಪರೇಷನ್ ನಡೆಸಿದ್ದಾಗಿ ಮಾಧ್ಯಮ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ಸರ್ಕಾರವು ಸ್ವಯಂಪ್ರೇರಿತವಾಗಿ (suo motu) ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
Annadani
ಮಾಜಿ ಶಾಸಕ ಅನ್ನದಾನಿ
Updated on: 

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಲ್ಲಿ ಒಎಂಆರ್ ಹಾಳೆಗಳನ್ನು ತಿರುಚಲಾಗಿದೆ ಎಂಬ ಆರೋಪದ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೌನ ವಹಿಸಿರುವುದನ್ನು ಮಾಜಿ ಜೆಡಿಎಸ್ ಶಾಸಕ ಹಾಗೂ ದಲಿತ ನಾಯಕ ಕೆ. ಅನ್ನದಾನಿ ಗುರುವಾರ ಟೀಕಿಸಿದ್ದಾರೆ.

ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನ್ನದಾನಿ, ಈ 'ಸ್ಟಿಂಗ್ ಆಪರೇಷನ್' (ರಹಸ್ಯ ಕಾರ್ಯಾಚರಣೆ) ಆರೋಪವು ಕರ್ನಾಟಕಕ್ಕೆ ಕೆಟ್ಟ ಹೆಸರು ತಂದಿದೆ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್ ನಡೆಸಿದ್ದಾಗಿ ಮಾಧ್ಯಮ ವ್ಯಕ್ತಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ ಸರ್ಕಾರವು ಸ್ವಯಂಪ್ರೇರಿತವಾಗಿ (suo motu) ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. "ಕೆಪಿಎಸ್‌ಸಿ ಪರೀಕ್ಷೆಗಳ ಒಎಂಆರ್ ಹಾಳೆಗಳನ್ನು ತಿರುಚಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಏಕೆ ಪ್ರತಿಕ್ರಿಯಿಸಿಲ್ಲ? ಅವರು ಮೊದಲು ಈ ಆರೋಪಕ್ಕೆ ಪ್ರತಿಕ್ರಿಯಿಸಬೇಕು," ಎಂದು ಅನ್ನದಾನಿ ಆಗ್ರಹಿಸಿದರು.

ಪ್ರಿಯಾಂಕ್ ಖರ್ಗೆ, ನೀನು ಹುಟ್ಟಿದ ತಕ್ಷಣ ಸೂಟು-ಬೂಟು ಟೈ ಕಟ್ಟಿ ಕಾನ್ವೆಂಟ್ ಗೆ ಕಳ್ಸಿರೋದು ನಿಮ್ಮಪ್ಪ ಮಲ್ಲಿಕಾರ್ಜುನ ಖರ್ಗೆ ಅವರು, ಆದರೆ ನನ್ನಂಥ ಬಡವನನ್ನ MLA ಮಾಡಿರೋ ಮಾಜಿ ಸಿಎಂ ಎಚ್.ಡಿ ಕುಮಾಪರಸ್ವಾಮಿ, ಹೀಗಾಗಿ ಅವರು ಗ್ರೇಟ್ ಎಂದು ಅನ್ನದಾನಿ ಹೇಳಿದ್ದಾರೆ.

Annadani
ಮೈಸೂರು ದಸರಾದಲ್ಲಿ ಪ್ರೋಟೋಕಾಲ್ ಎಡವಟ್ಟು: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಜೆಡಿಎಸ್ ಮಾಜಿ ಶಾಸಕ ಆಗ್ರಹ

"ನಾನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಓದಿದ್ದು. ಶಾಲೆಗೆ ಹೋಗುವಾಗ ಹರಿದ ಚಡ್ಡಿಯನ್ನೇ ಧರಿಸಬೇಕಿತ್ತು. ಕುಮಾರಸ್ವಾಮಿ ಅವರು ನನ್ನಂತಹವರನ್ನು ವಿಧಾನಸಭೆಗೆ ಕರೆತಂದರು. ರಾಜಕೀಯ ನಾಯಕರು ಸರಳತೆಯನ್ನು ಪ್ರದರ್ಶಿಸಬೇಕು ಮತ್ತು ಸಾಮಾನ್ಯ ಜನರೊಂದಿಗೆ ಸಂಪರ್ಕದಲ್ಲಿರಬೇಕು," ಎಂದು ಅವರು ಹೇಳಿದರು.

ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಅನ್ನದಾನಿ, ತಮ್ಮ ವಿರುದ್ಧ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದರು. "ನೀವು ಸಚಿವರಾಗಿದ್ದೀರಿ, ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ (AICC) ಅಧ್ಯಕ್ಷರಾಗಿದ್ದಾರೆ ಮತ್ತು ನಿಮ್ಮ ಭಾವ ರಾಧಾಕೃಷ್ಣ ಅವರು ಸಂಸದರಾಗಿದ್ದಾರೆ. ನೀವು ಈಗಾಗಲೇ ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದೀರಿ. ಹೀಗಿರುವಾಗ, ಇತರ ದಲಿತ ನಾಯಕರಿಗೆ ನೀವು ಏಕೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿಲ್ಲ?" ಎಂದು ಅವರು ಪ್ರಶ್ನಿಸಿದರು.

ಅಧಿಕಾರದಲ್ಲಿರುವವರು ಸೃಷ್ಟಿಸುವ ವಿವಾದಗಳಿಂದ ದಲಿತ ಸಮುದಾಯದ ಘನತೆಗೆ ಧಕ್ಕೆಯಾಗದಂತೆ ಪ್ರಿಯಾಂಕ್ ಖರ್ಗೆ ನೋಡಿಕೊಳ್ಳಬೇಕು ಎಂದು ಅನ್ನದಾನಿ ಹೇಳಿದರು. ಅನೇಕಲ್ ಶಿವಣ್ಣ ಮತ್ತು ಬಂಗಾರಪೇಟೆ ನಾರಾಯಣಸ್ವಾಮಿ ಅವರಂತಹ ನಾಯಕರು ಸಚಿವ ಸಂಪುಟದಲ್ಲಿ ಏಕೆ ಇಲ್ಲ ಎಂದು ಅವರು ಕೇಳಿದರು. "ನಿಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ದಲಿತ ಸಮುದಾಯವನ್ನು ಬಳಸಿಕೊಳ್ಳಬೇಡಿ. ಅಧಿಕಾರದಲ್ಲಿರುವವರು, ತಮ್ಮ ಸಮುದಾಯದ ಇತರರಿಗೂ ಅವಕಾಶಗಳು ಸಿಗುವಂತೆ ನೋಡಿಕೊಳ್ಳಬೇಕು," ಎಂದು ಅವರು ಹೇಳಿದರು.

ಪ್ರಿಯಾಂಕ್ ಖರ್ಗೆ ಸಚಿವರಾಗಿ ಉದ್ಧಟತನವನ್ನು ಪ್ರದರ್ಶಿಸುತ್ತಿರುವರೇ ಹೊರತು ಹಗರಣಗಳ ಕುರಿತ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಅಧಿಕಾರಿಗಳ ಮೂಲಕ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ. ಎಲ್ಲವನ್ನೂ ಮುಚ್ಚಿಹಾಕುವ ಕೆಲಸವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುತ್ತಿದ್ದಾರೆ. ಕೆಪಿಎಸ್ಸಿ ಹಗರಣದ ಬಗ್ಗೆ ಕುಮಾರಸ್ವಾಮಿ ನೀಡಿರುವ ದಾಖಲೆಗಳನ್ನೇ ಪರಿಗಣಿಸದೆ ವಿನಾಕಾರಣ ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂಷಿಸಿದರು.

ದಲಿತ ಮತ್ತು ಪ್ರಗತಿಪರ ಸಂಘಟನೆಯವರು ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿರುವುದಕ್ಕೆ ಕಾರಣವಾದರೂ ಏನು. ಅವರೇನು ದಲಿತ ಸಮುದಾಯದ ಬಗ್ಗೆ ಮಾತನಾಡಿದ್ದಾರೆಯೇ. ಹಣ ಲೂಟಿ ಮಾಡಿದ್ದಾರೆಯೇ. ಅವರು ಹಗರಣಗಳಿಗೆ ಸಂಬಂಧಿಸಿದಂತೆ ಸಚಿವರು, ಸರ್ಕಾರದ ಮುಂದೆ ಪ್ರಶ್ನೆಗಳನ್ನೆತ್ತಿದ್ದಾರೆ. ಅದು ತಪ್ಪೇ ಎಂದು ಮುಖಂಡರನ್ನು ಪ್ರಶ್ನಿಸಿದರು.

ಇದಲ್ಲದೆ, 'ಸಿದ್ಧಾರ್ಥ ವಿಹಾರ ಟ್ರಸ್ಟ್'ಗೆ ಸಂಬಂಧಿಸಿದ ಭೂ ವಿವಾದದಲ್ಲಿ ಸರ್ಕಾರಿ ಜಮೀನನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು. "ನಿಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಅನುಕೂಲವಾದಾಗ ಮಾತ್ರ ದಲಿತ ಸಮುದಾಯವನ್ನು ಬಳಸಿಕೊಳ್ಳಬೇಡಿ. ಅಧಿಕಾರದಲ್ಲಿರುವವರು, ತಮ್ಮ ಸಮುದಾಯದ ಇತರ ಸದಸ್ಯರಿಗೂ ಅವಕಾಶಗಳು ಸಿಗುವಂತೆ ನೋಡಿಕೊಳ್ಳಬೇಕು," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com