2028ರ ಚುನಾವಣೆಗೆ ರಾಜ್ಯ ರಾಜಕಾರಣಕ್ಕೆ ವಾಪಸ್‌: ಯಾರ ಗೂಟ ಇರುತ್ತೆ? ಜನ ಯಾರ ಗೂಟ ಕಿತ್ತಾಕ್ತಾರೆ ನೋಡೋಣ; HDK

ಈ ಹಿಂದೆ ಇದ್ದ ಕೆಪಿಎಸ್ ಸಿ ಅಧ್ಯಕ್ಷರನ್ನು 53 ದಿನಗಳ ಕಾಲ ಜೈಲಿಗೆ ಕಳುಹಿಸಿದಿರಿ, ಆದರೆ ಕೋರ್ಟ್ ಏನು ಹೇಳ್ತು, ನಿಮ್ಮ ಯೊಗ್ಯತೆಗೆ ಒಂದೇ ಒಂದು ದಾಖಲೆ ನೀಡಿಲ್ಲ ಎಂದು ಲೇವಡಿ ಮಾಡಿದರು.
DK Shivakumar-HD Kumaraswamy
ಡಿಕೆ ಶಿವಕುಮಾರ್-ಎಚ್ ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಏನೋ ನಾನೇ ಮುಂದಿನ ಏಳೂವರೆ ವರ್ಷ ಗೂಟ ಹೊಡೆದುಕೊಂಡು ಇರುತ್ತೇನೆ ಅಂತಾರಲ್ಲ. ಆಗ ನೋಡೋಣ ಯಾರ ಗೂಟ ಇರುತ್ತದೆ? ಜನ ಗೂಟ ಕಿತ್ತಾಕುತ್ತಾರೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಪರೋಕ್ಷವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಟಾಂಗ್‌ ನೀಡಿದರು.

ರಾಜ್ಯ ರಾಜಕಾರಣಕ್ಕೆ ಮರಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ. ಅದು ಈಗಲ್ಲ, 2028ರ ಸಾರ್ವತ್ರಿಕ ಚುನಾವಣೆಗೆ ಬರುತ್ತೇನೆ ಎಂದು ಸ್ಪಷ್ಟಪಡಿಸಿದರು. ದೇವೇಗೌಡರ ಕುಟುಂಬದ ಹೆಸರು ಹಾಳು ಮಾಡ್ಬೇಕು ಅಂತ ಯಾವ್ಯಾವ ತರ ಹೇಳಿಕೆ ಕೊಟ್ಟಿದ್ದೀರಾ, ನೀವು ಮಾಡಿರೋದನ್ನೆಲ್ಲಾ ನಾವು ಸಹಿಸಿಕೊಂಡಿದ್ದೀವಿ. ಆದರೆ ನಾವು ಯಾರಿಗೂ ಧಮ್ಕಿ ಹಾಕಿಲ್ಲ ಎಂದರು. ರಾಜ್ಯದ ಆಸ್ತಿ ಉಳಿಸಲು ಹೋರಾಟ ಮಾಡಿದ್ದೇವೆ, ರಾಜಿಯಾಗಿಲ್ಲ, ಅದನ್ನು ಧಮ್ಕಿ ಎಂದಿರಿ ಎಂದು ಕುಮಾರಸ್ವಾಮಿ ಹೇಳಿದರು.

ಇನ್ನೂ ಕೆಪಿಎಸ್ ಸಿ ಜಾತಕದ ಕುಂಡಲಿ ನಕ್ಷತ್ರದಲ್ಲಿ ಕುಮಾರಸ್ವಾಮಿ ಹೆಸರಿದೆ ಎಂಬ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನೀವು ಮಾಡಿರುವ ಅಕ್ರಮಗಳನ್ನು ತೋರಿಸಲು ನಾನು ಕುಂಡಲಿ ನಕ್ಷತ್ರವನ್ನು ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.

ಈ ಹಿಂದೆ ಇದ್ದ ಕೆಪಿಎಸ್ ಸಿ ಅಧ್ಯಕ್ಷರನ್ನು 53 ದಿನಗಳ ಕಾಲ ಜೈಲಿಗೆ ಕಳುಹಿಸಿದಿರಿ, ಆದರೆ ಕೋರ್ಟ್ ಏನು ಹೇಳ್ತು, ನಿಮ್ಮ ಯೊಗ್ಯತೆಗೆ ಒಂದೇ ಒಂದು ದಾಖಲೆ ನೀಡಿಲ್ಲ ಎಂದು ಲೇವಡಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com