

ಬೆಂಗಳೂರು: ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ 2019 ರ ಲೋಕಸಭೆ ಚುನಾವಣೆ ವೇಳೆ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದ ಹಳೇಯ ವಿಡಿಯೋವೊಂದು ವೈರಲ್ ಆಗಿದೆ.
ಕೆಪಿಎಸ್ ಸಿ ಹಗರಣ ಸಂಬಂಧ ಚಲುವರಾಯಸ್ವಾಮಿ ಮತ್ತು ಕುಮಾರಸ್ವಾಮಿ ನಡುವಿನ ವಯಕ್ತಿಕ ಕೆಸರೆರೆಚಾಟ ಮುಂದುವರಿದ ನಂತರ ಈ ವಿಡಿಯೋ ವೈರಲ್ ಆಗಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ವಿಧಾನಸಭೆಯಲ್ಲಿ ಸಭಾ ನಾಯಕರಿಲ್ಲದೇ ಏಕೆ ಅಧಿವೇಶನವನ್ನು ಕರೆದಿರಿ ಎಂದು ಅಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದೆ. ಆದರೆ ಅವರು ಕುಮಾರಸ್ವಾಮಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಿದ್ದರು. ಆದರೆ ಆ ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ನಂಬರ್ ಇಲ್ಲದ ಹೊಸ ಅಂಬಾಸಿಡರ್ ಕಾರಿನಲ್ಲಿ ಮಂಗಳೂರಿನಲ್ಲಿ ಓಡಾಡುತ್ತಿದ್ದರು. ಏಕೆಂದರೆ ಶಾಸ್ತ್ರ ಕೇಳಿ ರಾಧಿಕಾಗೆ ಅಬಾರ್ಷನ್ ಮಾಡಿಸಲು ಮುಂದಾಗಿದ್ದರು. ಆದರೆ ಆಕೆ ಒಪ್ಪಲಿಲ್ಲ. ಹೀಗಾಗಿ ಆಕೆಯ ಮನವೊಲಿಸಲು ಯಾರ್ಯಾರ ಮನೆ ಬಾಗಿಲಿಗೆ ಹೋಗಿದ್ದಾರೆ ಎಂಬುದು ನನಗೆ ಗೊತ್ತು, ನಾನು ಸುಳ್ಳು ಹೇಳುತ್ತಿಲ್ಲ. ನನ್ನ ಬಳಿ ಅಧಿಕೃತ ಮಾಹಿತಿ ಇದೆ. ನನಗೆ ಯಾವುದೇ ಭಯ ಇಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಮೊದಲನೆ ಹೆಂಡತಿಗೆ ಹೇಳದೆ ಎರಡನೇ ಮದುವೆಯಾಗಿರುವ ಇವರಿಗೆ ನೈತಿಕತೆ ಇದ್ಯಾ? ನನಗೆ ನೈತಿಕತೆ ಪಾಠ ಹೇಳಲು ಬರುತ್ತಾರಾ ಎಂದು ಕುಮಾರಸ್ವಾಮಿ ವಿರುದ್ಧ ಮಾಧುಸ್ವಾಮಿ ಮಾತನಾಡಿರುವ ಹಳೇಯ ವಿಡಿಯೋವೊಂದು ಈಗ ವೈರಲ್ ಆಗಿದೆ.
ಚಿಕ್ಕನಾಯಕನಹಳ್ಳಿ ಶಾಸಕರನ್ನು ಕುಮಾರಸ್ವಾಮಿ ತಮ್ಮ ಜೊತೆ ಏಕೆ ಇಟ್ಟುಕೊಂಡಿದ್ದರು ಎಂಬುದು ನನಗೆ ಗೊತ್ತು ಎಂದು ಹೇಳಿರುವ ಅವರು, ಯಾವ್ಯಾವ ಗೆಸ್ಟ್ ಹೌಸ್ ನಲ್ಲಿ ಏನೇನು ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯಿದೆ. ನನ್ನ ಜೊತೆ ಚಾಲೆಂಜ್ ಮಾಡಲಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಮದುವೆಯಾಗಿರುವ ವಿಷಯದ ಬಗ್ಗೆ ಕುಮಾರಸ್ವಾಮಿ ಎಲ್ಲಿಯೂ ಏನನ್ನೂ ಹೇಳಲಿಲ್ಲ. ಆದರೆ ಆಕೆ ಮಾತ್ರ ರಾಧಿಕಾ ಕುಮಾರಸ್ವಾಮಿ ಅಂತಾ ಹೇಳಿದ್ದಾಳೆ. ರಾಧಿಕಾ ಕುಮಾರಸ್ವಾಮಿ ಪ್ರೊಡಕ್ಷನ್ ಹೆಸರಲ್ಲಿ ಸಿನಿಮಾ ತೆಗಿತಾಳೆ ಎಂದಿದ್ದಾರೆ.