ಕೂತು-ಕೂತು ಸೋಮಾರಿಗಳಾಗಿದ್ರು, ಪಾದಯಾತ್ರೆ ಮಾಡಿ ಕ್ರಿಯಾಶೀಲರಾಗಲಿ: ಸಮಾವೇಶಕ್ಕೆ ಕರೆಯೋದು ಆಯೋಜಕರಿಗೆ ಬಿಟ್ಟದ್ದು; ಯತೀಂದ್ರ

ಬೆಂಗಳೂರಿನಲ್ಲಿ ನಡೆದಿರೋದು ಅಹಿಂದ ಸಭೆ ಅಲ್ಲ. ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಗಿದೆ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ ಎಂದು ಸ್ಫಷ್ಟನೆ ನೀಡಿದ್ದಾರೆ.
yathindra siddaramaiah
ಯತೀಂದ್ರ ಸಿದ್ದರಾಮಯ್ಯ
Updated on

ರಾಯಚೂರು: ಬಿಜೆಪಿಯವರು ಕೂತು ಕೂತು ಸೋಮಾರಿಗಳಾಗಿದ್ದರು. ಸ್ವತಃ ಕ್ರಿಯಾಶೀಲರಾಗಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ಪಾದಯಾತ್ರೆಯಿಂದ ಏನೂ ಪ್ರಯೋಜನ ಇಲ್ಲ. ಯಾವ ಉದ್ದೇಶದಿಂದ ಪಾದಯಾತ್ರೆ ಮಾಡಬೇಕು ಅನ್ಕೊಂಡಿದ್ರೊ ಆ ಉದ್ದೇಶ ಈಡೇರಿದೆ. ಆದ್ರೂ ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ನಡೆದಿರೋದು ಅಹಿಂದ ಸಭೆ ಅಲ್ಲ. ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಗಿದೆ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ ಎಂದು ಸ್ಫಷ್ಟನೆ ನೀಡಿದ್ದಾರೆ.

ಹಿಂದುಳಿದ ಒಕ್ಕೂಟ ಸಮಾವೇಶಕ್ಕೆ ಸಚಿವ ಸತೀಶ್ ಜಾರಕಿಹೊಳಿಗೆ ಆಹ್ವಾನ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಹಿಂದ ಯಾರ ಸ್ವತ್ತು ಅಲ್ಲ ನಿಜ, ಅದರಲ್ಲಿ ತಪ್ಪೇನಿಲ್ಲ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ, ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ. ಕರೆಯೋದು, ಬಿಡೋದು ಆಯೋಜಕರಿಗೆ, ಒಕ್ಕೂಟದವರಿಗೆ ಬಿಟ್ಟಿದ್ದು. ಇಂತವರನ್ನೇ ಕರೆಯಿರಿ, ಇವರನ್ನೇ ಬಿಡ್ರಿ ಎಂದು ಹೇಳೋಕೆ ಬರಲ್ಲ ಎಂದರು.

yathindra siddaramaiah
ಅಹಿಂದ ಸಮಾವೇಶಕ್ಕೆ ಆಪ್ತರು ಗೈರು: ಛಿದ್ರವಾಗುತ್ತಿದೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಬಣ?

25 ವರ್ಷದ ಮಹೋತ್ಸವ ಅವರು ಮಾಡಿದ್ದಾರೆ. ಆ ಕಾರ್ಯಕ್ರಮಕ್ಕೆ ತಂದೆಯವರನ್ನು ಸಹ ಕರೆದಿದ್ದರು. ದೊಡ್ಡ ಮಟ್ಟದ ಯಶಸ್ವಿ ಕಾರ್ಯಕ್ರಮ ಮಾಡಿದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ವಿಚಾರಕ್ಕೆ ನನಗೆ ಗೊತ್ತಿರುವಂತೆ ಅಂತಹದ್ದೇನು ಇಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com