ವಿರೋಧ ಪಕ್ಷದ ನಾಯಕರಾದ ಮಾತ್ರಕ್ಕೆ ಅರ್ಥಶಾಸ್ತ್ರದ ಜ್ಞಾನವಿದೆ ಎಂದಲ್ಲ: ರಾಹುಲ್ ಗಾಂಧಿ ಕಾಲೆಳೆದ ನಡ್ಡಾ!

ಕೆಲವರಿಗೆ ಅರ್ಥಶಾಸ್ತ್ರ (Economics) ಎಂಬ ಪದದ ಮೊದಲ ಅಕ್ಷರವಾದ 'E' ಕೂಡ ತಿಳಿದಿರುವುದಿಲ್ಲ. ರಾಹುಲ್ ಅಂತಹವರಲ್ಲಿ ಒಬ್ಬರು ಎಂದು ನಡ್ಡಾ ಹೇಳಿದರು. ದೇಶವು ಶೇ. 7.8 ರಷ್ಟು ಜಿಡಿಪಿ (GDP) ಬೆಳವಣಿಗೆಯನ್ನು ಸಾಧಿಸಿದೆ.
JP Nadda
ಜೆ.ಪಿ. ನಡ್ಡಾ
Updated on

ಬೆಂಗಳೂರು: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಮಾತ್ರಕ್ಕೆ ಅವರಿಗೆ ಅರ್ಥಶಾಸ್ತ್ರದ ಜ್ಞಾನವಿದೆ ಎಂದು ಅರ್ಥವಲ್ಲ ಎಂದು ಹೇಳುವ ಮೂಲಕ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದರು.

ಕೆಲವರಿಗೆ ಅರ್ಥಶಾಸ್ತ್ರ (Economics) ಎಂಬ ಪದದ ಮೊದಲ ಅಕ್ಷರವಾದ 'E' ಕೂಡ ತಿಳಿದಿರುವುದಿಲ್ಲ. ರಾಹುಲ್ ಅಂತಹವರಲ್ಲಿ ಒಬ್ಬರು ಎಂದು ನಡ್ಡಾ ಹೇಳಿದರು. ದೇಶವು ಶೇ. 7.8 ರಷ್ಟು ಜಿಡಿಪಿ (GDP) ಬೆಳವಣಿಗೆಯನ್ನು ಸಾಧಿಸಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಕುರಿತು ರಾಹುಲ್ ನೀಡಿದ ಪ್ರತಿಕ್ರಿಯೆಗೆ ನಡ್ಡಾ ಉತ್ತರಿಸಿದ್ದಾರೆ.

ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಲಿರುವ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರಗಳಂತಹ ಬಿಜೆಪಿ ಪಕ್ಷದ ಒಂದು ತಿಂಗಳ ಅವಧಿಯ ಸಮಾಜ ಸೇವಾ ಕಾರ್ಯಕ್ರಮಗಳನ್ನು ಘೋಷಿಸಲು ಬೆಂಗಳೂರಿಗೆ ಆಗಮಿಸಿದ್ದರು.

ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, "12 ವರ್ಷಗಳ ಹಿಂದೆ, ಭಾರತವು ವಿಶ್ವದ ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿತ್ತು. ಈಗ ನಾವು ಆ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ನಾವು ಈಗ ಅಗ್ರ ಮೂರು ಸ್ಥಾನಗಳಿಗಾಗಿ ಸ್ಪರ್ಧಿಸುತ್ತಿದ್ದೇವೆ. ನಾವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದ್ದು, ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ. 7.8 ರಷ್ಟಿತ್ತು ಎಂದು ಹೇಳಿದರು.

JP Nadda
ಮೋದಿಗೆ 'ಭಾರತ ರತ್ನ'?: Modi ಹೆಸರಲ್ಲಿ ಒಂದು ತಿಂಗಳು ಸೇವಾ ಸಂಕಲ್ಪ ಅಭಿಯಾನ: ಕೇಂದ್ರ ಸಚಿವ ಜೆ.ಪಿ ನಡ್ಡಾ

ಸೆಪ್ಟೆಂಬರ್ 17 ರಿಂದ ನಡೆಯಲಿರುವ ಒಂದು ತಿಂಗಳ 'ಸೇವಾ ಸಂಕಲ್ಪ ಅಭಿಯಾನ'ದ ಕುರಿತು ಮಾತನಾಡಿದ ಅವರು, ಪ್ರತಿ ವರ್ಷ ಬಿಜೆಪಿ 'ಸೇವಾ ಪಾಕ್ಷಿಕ'ವನ್ನು ಆಯೋಜಿಸುತ್ತದೆ. ಈ ವರ್ಷ ಅದು ಹಲವು ದೃಷ್ಟಿಕೋನಗಳಿಂದ ವಿಶೇಷವಾಗಿದೆ. ಅಕ್ಟೋಬರ್ 7, 2001 ರಂದು ಮೋದಿ ಮೊದಲ ಬಾರಿಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದಿನಿಂದ ಅವರು ರಾಜ್ಯ ಅಥವಾ ದೇಶದ ಮುಖ್ಯಸ್ಥರಾಗಿದ್ದಾರೆ ಮತ್ತು ಈ ವರ್ಷ ಅವರು 25 ವರ್ಷಗಳನ್ನು ಪೂರೈಸಲಿದ್ದಾರೆ.

ಈ ಜೂನ್‌ನಲ್ಲಿ, ಅವರು ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಳೆದ 25 ವರ್ಷಗಳಲ್ಲಿ ಅವರು ಒಂದೇ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂಬುದು ಹೆಮ್ಮೆಯ ವಿಷಯ ಎಂದು ನಡ್ಡಾ ಹೇಳಿದರು.

'ಸೇವಾ ಸಂಕಲ್ಪ ಅಭಿಯಾನ'ವು ಚುನಾವಣಾ ಪ್ರಚಾರವಲ್ಲ ಎಂದು ಅವರು ಹೇಳಿದರು. "ನಾವು 2029 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿಲ್ಲ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿರುವ 2047 ರತ್ತ ನಮ್ಮ ಗಮನವಿದೆ," ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com