ರೈತರ ಕಷ್ಟಗಳ ಆಲಿಸಿ ವಾಸ್ತವ ಅರಿಯುವ ಬದಲು, ವಿಧಾನಸೌಧ AC ರೂಮಿನಲ್ಲಿ ಕುಳಿತು ಬರಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸುತ್ತಿದ್ದೀರಾ..?

ರೈತರ ಕಷ್ಟಗಳನ್ನು ಆಲಿಸಿ ವಾಸ್ತವ ಅರಿಯುವ ಬದಲು, ವಿಧಾನಸೌಧದ ಎಸಿ ರೂಮಿನಲ್ಲಿ ಕುಳಿತುಕೊಂಡು ಬರಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸುತ್ತಿದ್ದೀರಾ? ಶೇ. 49% ರಷ್ಟು ಮಳೆ ಕೊರತೆಯಿದ್ದರೂ ಗದಗ ತಾಲೂಕನ್ನು ಕಡೆಗಣಿಸಿರುವುದು ಅನ್ನದಾತರಿಗೆ ಬಗೆದ ಘೋರ ದ್ರೋಹ.
Drought in Karnataka (file photo)
ಬರ (ಸಂಗ್ರಹ ಚಿತ್ರ)online desk
Updated on

ಬೆಂಗಳೂರು: ಉತ್ತರ ಕರ್ನಾಟಕದ ಬರ ಪರಿಸ್ಥಿತಿ ಹಾಗೂ ಬರಪೀಡಿತ ತಾಲೂಕುಗಳ ಪಟ್ಟಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸ್ವಪಕ್ಷದ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಅವರೇ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿರುವುದನ್ನು ಉಲ್ಲೇಖಿಸಿರುವ ಅಶೋಕ್, ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿಸಿಎಂ ಪರಮೇಶ್ವರ್ ಅವರೇ, ಗದಗ ಸೇರಿದಂತೆ ಉತ್ತರ ಕರ್ನಾಟಕದ 27 ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ನಿಮ್ಮದೇ ಪಕ್ಷದ ಹಿರಿಯ ಶಾಸಕ ಹೆಚ್.ಕೆ.ಪಾಟೀಲ್ ಅವರು ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದು ನಿಮ್ಮ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ.

ರೈತರ ಕಷ್ಟಗಳನ್ನು ಆಲಿಸಿ ವಾಸ್ತವ ಅರಿಯುವ ಬದಲು, ವಿಧಾನಸೌಧದ ಎಸಿ ರೂಮಿನಲ್ಲಿ ಕುಳಿತುಕೊಂಡು ಬರಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸುತ್ತಿದ್ದೀರಾ? ಶೇ. 49% ರಷ್ಟು ಮಳೆ ಕೊರತೆಯಿದ್ದರೂ ಗದಗ ತಾಲೂಕನ್ನು ಕಡೆಗಣಿಸಿರುವುದು ಅನ್ನದಾತರಿಗೆ ಬಗೆದ ಘೋರ ದ್ರೋಹ. ಉತ್ತರ ಕರ್ನಾಟಕದ ಬಗ್ಗೆ ಕಾಂಗ್ರೆಸ್‌ಗಿರುವ ತಾತ್ಸಾರ ಮನೋಭಾವ ಹಾಗೂ ನಿರ್ಲಕ್ಷ್ಯಕ್ಕೆ ಸ್ವತಃ ಕಾಂಗ್ರೆಸ್ ಶಾಸಕರೇ ಬೇಸತ್ತಿದ್ದಾರೆ.

ಇನ್ನಾದರೂ ಕಣ್ಣು ತೆರೆದು ಅನ್ಯಾಯಕ್ಕೊಳಗಾದ ತಾಲೂಕುಗಳನ್ನು ಕೂಡಲೇ ಬರಪೀಡಿತ ಎಂದು ಘೋಷಿಸಿ ರೈತರ ನೆರವಿಗೆ ಧಾವಿಸಿ. ಇಲ್ಲವಾದರೆ ರೈತರ ಶಾಪ ಈ ಸರ್ಕಾರಕ್ಕೆ ತಟ್ಟದೆ ಬಿಡದು ಎಂದು ಕಿಡಿಕಾರಿದ್ದಾರೆ.

Drought in Karnataka (file photo)
ಬರ: ರಾಜ್ಯದ 17 ಜಿಲ್ಲೆಗಳ 53 ತಾಲೂಕುಗಳಲ್ಲಿ ಬೆಳೆ ಹಾನಿ ಖುದ್ದು ಪರಿಶೀಲನೆಗೆ ಸರ್ಕಾರದ ಆದೇಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com