'ದೆಹಲಿಯ ಕುಟುಂಬ ಓಲೈಸಲು ದೇಶದ ಹೆಮ್ಮೆಯನ್ನೇ ಬಲಿಕೊಡುತ್ತಿದೆ': ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ- ಜೋಶಿ

ಡಿಕೆ ಶಿವಕುಮಾರ ಆಡಳಿತದಲ್ಲಿ ರಾಷ್ಟ್ರಗೀತೆಗೆ ಹೀಗೆ ಅಪಮಾನ ಎಸಗುವುದನ್ನು ಕನ್ನಡಿಗರು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿಯಲ್ಲಿರುವ ನಕಲಿ ಕುಟುಂಬವೊಂದನ್ನು ಓಲೈಸಲು ಕಾಂಗ್ರೆಸ್ ಈ ದೇಶದ ಹೆಮ್ಮೆಯನ್ನೇ ಬಲಿಕೊಡಲು ನಿಂತಿದೆ!
Prahlad Joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Updated on

ನವದೆಹಲಿ: 'ವಂದೇ ಮಾತರಂ’ ಗೀತೆಯನ್ನು ಎರಡೇ ಚರಣಕ್ಕೆ ಕತ್ತರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಿಸಲಿದ್ದೇವೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಎಚ್ಚರಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶವಿರೋಧಿ ಕ್ರೂರ ಮನಸ್ಥಿತಿ ಹೊಂದಿದ್ದು, ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ. ಸರ್ಕಾರ ಕಾನೂನು ಬಾಹಿರವಾಗಿ ಮನಸೋ ಇಚ್ಛೆ ಫರ್ಮಾನು ಹೊರಡಿಸುತ್ತಿದೆ. ವಿಧಾನಸೌಧದಲ್ಲಿ `ವಂದೇ ಮಾತರಂ’ ಗೀತೆಯನ್ನು ಕಾನೂನು ಬಾಹಿರವಾಗಿ ಕತ್ತರಿಸಿ, ಕೇವಲ ಎರಡೇ ಚರಣವನ್ನು ಹಾಡಿ ದೇಶವಿರೋಧಿ ನೀತಿ ಪ್ರದರ್ಶಿಸಿದ್ದು, ಇದರ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ತನ್ನ ನಕಲಿ ದೇಶಭಕ್ತಿಯ ಮುಖವಾಡವನ್ನು ಇಂದು ಸಂಪೂರ್ಣ ಕಳಚಿಟ್ಟಿದೆ. `ವಂದೇ ಮಾತರಂ’ ಅನ್ನು ಎರಡೇ ಚರಣಕ್ಕೆ ಸೀಮಿತಗೊಳಿಸಿ ಹಾಡಿದ್ದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ ಆಡಳಿತದಲ್ಲಿ ರಾಷ್ಟ್ರಗೀತೆಗೆ ಹೀಗೆ ಅಪಮಾನ ಎಸಗುವುದನ್ನು ಕನ್ನಡಿಗರು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿಯಲ್ಲಿರುವ ನಕಲಿ ಕುಟುಂಬವೊಂದನ್ನು ಓಲೈಸಲು ಕಾಂಗ್ರೆಸ್ ಈ ದೇಶದ ಹೆಮ್ಮೆಯನ್ನೇ ಬಲಿಕೊಡಲು ನಿಂತಿದೆ. ನಿಮ್ಮ ತುಘಲಕ್ ಆದೇಶಗಳಿಂದ ಭಾರತಾಂಬೆಯ ಅಸ್ಮಿತೆಯನ್ನು ಅಳಿಸಲು ಸಾಧ್ಯವಿಲ್ಲ! ಈ ದೇಶವಿರೋಧಿ ಕ್ರೂರ ಮನಸ್ಥಿತಿಯ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಿಸಲಿದ್ದೇವೆ. ಕರ್ನಾಟಕದ ಜಾಗೃತ ದೇಶಭಕ್ತ ಜನತೆ ನಿಮ್ಮ ಈ ನೀಚ ಕೃತ್ಯಕ್ಕೆ ತಕ್ಕ ರಾಜಕೀಯ ಪಾಠ ಕಲಿಸುವುದು ನಿಶ್ಚಿತ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Prahlad Joshi
'ವಂದೇ ಮಾತರಂ' ಕಾನೂನಾಗಿದೆ; ತಾಕತ್ತಿದ್ದರೆ ಅಧಿಕಾರಕ್ಕೆ ಬಂದು ಬದಲಾಯಿಸಿ, ನನ್ನ ಅಭ್ಯಂತರವಿಲ್ಲ: ಕಾಂಗ್ರೆಸ್‌ಗೆ ಒಮರ್ ಅಬ್ದುಲ್ಲಾ ತಿರುಗೇಟು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com