ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿಕೆ ಹರಿಪ್ರಸಾದರಿಂದ ದಾಖಲೆ ಬಿಡುಗಡೆ!

ಬಿಜೆಪಿ ಶಾಸಕರು ನೀಡಿರುವ ಎಲ್ಲಾ ಹೆಸರುಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಎಂದು ಕರೆದಿದ್ದಾರೆ ಎಂದ ಹರಿಪ್ರಸಾದ್ ಹೇಳಿದ್ದಾರೆ.
Karnataka Congress alleges BJP MLA wrote to EC to remove 2,500 voter names from electoral roll
ಬಿಕೆ ಹರಿಪ್ರಸಾದರಿಂದ ದಾಖಲೆ ಬಿಡುಗಡೆ
Updated on

ಬೆಂಗಳೂರು: ದೇಶಾದ್ಯಂತ ಜಾರಿಯಲ್ಲಿರುವ ವಿಶೇಷ ಸಮಗ್ರ ಮತದಾರರ ಪಟ್ಟಿಯ ಪರಿಷ್ಕರಣೆ(SIR) ಸೇರಿದಂತೆ ಹಲವು ವಿಷಯಗಳಲ್ಲಿ ಭಾರತ ಚುನಾವಣಾ ಆಯೋಗದ(ECI) ಮುಖ್ಯಸ್ಥರು ಹಾಗೂ ಸದಸ್ಯರ ನಡುವೆ ಆಂತರಿಕ ಭಿನ್ನಾಭಿಪ್ರಾಯ ಬಹಿರಂಗವಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಬಿಜೆಪಿ ಶಾಸಕರ ವಿರುದ್ಧ ಗುರುವಾರ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ 2,500 ಮತದಾರರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಬಿಜೆಪಿ ಶಾಸಕರು ನೀಡಿರುವ ಎಲ್ಲಾ ಹೆಸರುಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರನ್ನು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಎಂದು ಕರೆದಿದ್ದಾರೆ ಎಂದ ಹರಿಪ್ರಸಾದ್ ಹೇಳಿದ್ದಾರೆ.

Karnataka Congress alleges BJP MLA wrote to EC to remove 2,500 voter names from electoral roll
'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!

"ಮತದಾರರ ಪಟ್ಟಿಯಿಂದ 2,500 ಜನರ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಶಾಸಕರೊಬ್ಬರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆ ಮತದಾರರು ಅಲ್ಪಸಂಖ್ಯಾತರು. ಹೀಗಾಗಿ ಶಾಸಕರು ಅವರನ್ನು ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಎಂದು ಕರೆಯುತ್ತಿದ್ದಾರೆ" ಎಂದು ಹರಿಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ಶಾಸಕರು ಚುನಾವಣಾ ಆಯೋಗಕ್ಕೆ ಬರೆದ ಪತ್ರದ ಪ್ರತಿಯನ್ನೂ ಈ ಸಂದರ್ಭದಲ್ಲಿ ಹರಿಪ್ರಸಾದ್ ಅವರು ತೋರಿಸಿದರು.

ಆ ರೀತಿಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಪ್ರತಿಕ್ರಿಯಿಸಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.

ಕೇವಲ ಒಂದು ಮತಗಟ್ಟೆಯಲ್ಲಿ, ಒಂದೇ ಕುಟುಂಬದ 50 ಜನರ ಹೆಸರುಗಳನ್ನು ತೆಗೆದುಹಾಕಲು ಅರ್ಜಿ ನಮೂನೆಗಳನ್ನು ಸಲ್ಲಿಸಲಾಗಿದೆ.

ಈ ಪ್ರಕ್ರಿಯೆಯಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ ಅಥವಾ ನಕಲಿ ನಮೂನೆಯನ್ನು ಸಲ್ಲಿಸಿದರೆ, ಅವರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ನಮೂನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹರಿಪ್ರಸಾದ್ ಹೇಳಿದರು.

"ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು 'ಫಾರ್ಮ್-7' (Form-7) ಸಲ್ಲಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ. ಅವರನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು," ಎಂದು ಕಾಂಗ್ರೆಸ್ ನಾಯಕ ಆಗ್ರಹಿಸಿದರು.

"ಈ ಎಲ್ಲ ಜನರ ಹೆಸರುಗಳನ್ನು ತೆಗೆದುಹಾಕುವಂತೆ ಕೋರಿರುವ ಶಾಸಕ ಅಭಯ್ ಪಾಟೀಲ್ ಅವರ ಪತ್ರ ಇಲ್ಲಿದೆ. ಹೆಸರುಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗಕ್ಕೆ ಹೇಳಲು ಅವರು ಯಾರು? ಸಹಿ ಇಲ್ಲದೆಯೇ ಹೆಸರು ತೆಗೆದುಹಾಕುವ ನಮೂನೆಗಳನ್ನು ಸಲ್ಲಿಸಿರುವುದನ್ನು ನಾವು ಗಮನಿಸಿದ್ದೇವೆ. ಸುಮಾರು 7,000 ಮತದಾರರ ಹೆಸರುಗಳನ್ನು ತೆಗೆದುಹಾಕುವ ನಮೂನೆಗಳಲ್ಲಿ ಸೇರಿಸಲಾಗಿದೆ, ಆದರೆ ಅವುಗಳಲ್ಲಿ ಒಂದರಲ್ಲೂ ಸಹಿ ಇಲ್ಲ," ಎಂದು ಹರಿಪ್ರಸಾದ್ ಆರೋಪಿಸಿದರು.

ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಚುನಾವಣಾ ಆಯುಕ್ತರು ಕ್ರಮ ಕೈಗೊಳ್ಳಬೇಕು ಮತ್ತು ಮತದಾರರ ಹೆಸರುಗಳನ್ನು ತೆಗೆದುಹಾಕಲು 'ಫಾರ್ಮ್-7' ಸಲ್ಲಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹರಿಪ್ರಸಾದ್ ಹೇಳಿದರು.

ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ಹರಿಪ್ರಸಾದ್ ತಿಳಿಸಿದರು. "ಆ ಕುಟುಂಬದ ಒಬ್ಬ ಸದಸ್ಯರು ಬೆಳಗಾವಿಯಿಂದ ಬರಬೇಕಿರುವುದರಿಂದ ನಾವು ನಾಳೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com