ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ?: RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ; ಛಲವಾದಿ ನಾರಾಯಣ ಸ್ವಾಮಿ

ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣ ಹೋಮ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರು ಒಂದೇ ಒಂದು ಸ್ಟೇಟ್​ಮೆಂಟ್ ಕೊಟ್ಟಿಲ್ಲ, ಇಂತಹ ಗೃಹ ಸಚಿವರು ನಮಗೆ ಬೇಕಾ? ಎಂದು ಪ್ರಶ್ನಿಸಿರುವ ಅವರು, ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ್ದಾರೆ.
chalavadi Narayanaswamy and Priyank Kharge
ಛಲವಾದಿ ನಾರಾಯಣಸ್ವಾಮಿ, ಪ್ರಿಯಾಂಕ್ ಖರ್ಗೆ
Updated on: 

ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್ ಪರಿಷತ್​ ವಿಪಕ್ಷ ನಾಯಕ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣ ಹೋಮ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರು ಒಂದೇ ಒಂದು ಸ್ಟೇಟ್​ಮೆಂಟ್ ಕೊಟ್ಟಿಲ್ಲ, ಇಂತಹ ಗೃಹ ಸಚಿವರು ನಮಗೆ ಬೇಕಾ? ಎಂದು ಪ್ರಶ್ನಿಸಿರುವ ಅವರು, ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ್ದಾರೆ.

ಸೋಲಿನ ಭಯದಿಂದ ಲೂಟಿ ಮಾಡುವುದಕ್ಕೆ ಕಾಂಗ್ರೆಸ್ ಇಳಿದಿದ್ದು, ಈ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. SCSP-TSP ಹಣ ದುರ್ಬಳಕೆ ಮಾಡಲಾಗಿದೆ ಎಂದು ದೂರಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮನೆ ಬಿಟ್ಟು ಆಚೆ ಬರುತ್ತಿಲ್ಲ. ಬರೀ ಆರ್​ಎಸ್​ಎಸ್​​ ಬಗ್ಗೆ ಅವರು ಮಾತಾಡ್ತಿದ್ದಾರೆ. ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ, ನಿಮ್ದು ನೋಡ್ಕೊಳ್ಳಿ. RSSನವರು ಯಾರನ್ನಾದ್ದರೂ ಥಳಿಸಲಿಕ್ಕೆ ಲಾಠಿ ಬಳಸಿದ್ದಾರಾ? RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

chalavadi Narayanaswamy and Priyank Kharge
RSS 'ಗುರು ದಕ್ಷಿಣೆ' ರೂಪದಲ್ಲಿ ಏಕೆ ಹಣ ಸಂಗ್ರಹಿಸುತ್ತಿದೆ: ಆರ್ಥಿಕ ಪಾರದರ್ಶಕತೆ ವಿಷಯದಲ್ಲಿ ಹಿಂಜರಿಕೆ ಏಕೆ? ಪ್ರಿಯಾಂಕ್ ಖರ್ಗೆ

RSS ಮೇಲೆ ಕ್ರಿಮಿನಲ್ ಕೇಸ್​ ಇಲ್ಲ ಎಂದು ನೀವೇ ಹೇಳಿದ್ದೀರಿ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನೀವೆಲ್ಲೂ ಮಾತಾಡಿಲ್ಲ. ಆದರೆ ರಾಜ್ಯದ ಗೃಹ ಸಚಿವರಿಗೆ ಬರೀ ಆರ್​ಎಸ್​ಎಸ್​ ಚಿಂತೆ. ದಲಿತರ ಉದ್ಧಾರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಲಿತರ ಹೆಸರು ಬಳಸಿಕೊಂಡು ಆಸ್ತಿ ಮಾಡಿದ್ದಾರೆ ಅಷ್ಟೇ. ಗೃಹ ಸಚಿವರ ಭಾಗದಲ್ಲೇ 13 ಅಟ್ರಾಸಿಟಿ ಕೇಸ್ ದಾಖಲಾಗಿವೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com