ನಮ್ಮ ತಂದೆ ಬಿಜೆಪಿಗೆ ಬಂದ ಮೇಲೆ ಯಡಿಯೂರಪ್ಪ- ಈಶ್ವರಪ್ಪಗೆ ರಾಜಕೀಯ ಪುನರ್ಜೀವನ: ತಾಕತ್ತಿದ್ದರೆ ಈಗ ಗೆದ್ದು ಬರಲಿ; ಮಧು ಬಂಗಾರಪ್ಪ

ಸೊರಬದಲ್ಲಿ ಗೆದ್ದು ಬನ್ನಿ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ತಾವು ಹೇಗೆ ಗೆದ್ದು ಬಂದಿದ್ದೀರಿ? 2009ರ ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ?
Madhu Bangarappa
ಮಧು ಬಂಗಾರಪ್ಪ
Updated on: 

ಶಿಕಾರಿಪುರ: ನಮ್ಮ ತಂದೆ ಎಸ್​ ಬಂಗಾರಪ್ಪರವರು 2004 ರಲ್ಲಿ ಬಿಜೆಪಿಗೆ ಬಂದ ಮೇಲೆ ಬಿ ಎಸ್​ ಯಡಿಯೂರಪ್ಪ ಹಾಗೂ ಕೆ,ಎಸ್​ ಈಶ್ವರಪ್ಪ ರಾಜಕೀಯವಾಗಿ ಬದುಕಿದ್ದು, ಅದಕ್ಕೂ ಮೊದಲು ಕಾಂಗ್ರೆಸ್​​ನಲ್ಲಿ ನಮ್ಮ ತಂದೆಯವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರನ್ನೂ ಹೊರಗೆ ಕಳುಹಿಸಿದ್ದರು ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2004ರಲ್ಲಿ ನಮ್ಮ ತಂದೆ (ದಿ. ಬಂಗಾರಪ್ಪ) ಅವರು ಬಿಜೆಪಿಗೆ ಬಂದ ಮೇಲೆ ಬಿಎಸ್‌ವೈ, ಕೆಎಸ್‌ಇ ರಾಜಕೀಯವಾಗಿ ಬದುಕಿದ್ದು, 2009ರಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತು ಎಂದರು.

ಸೊರಬದಲ್ಲಿ ಗೆದ್ದು ಬನ್ನಿ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ತಾವು ಹೇಗೆ ಗೆದ್ದು ಬಂದಿದ್ದೀರಿ? 2009ರ ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.

ಅನೇಕ ಚುನಾವಣೆಗಳಲ್ಲಿ ಸಂಸದರು ಅವರ ಅಪ್ಪನಿಗಾಗಿ ವೋಟು ಕೇಳಲಿಲ್ಲ. ಆದರೆ, ನಾನು ಬಂದು ಯಡಿಯೂರಪ್ಪರಿಗಾಗಿ ವೋಟ್ ಕೇಳಿದ್ದೆ. ನಾನು ಜಾತಿ ರಾಜಕಾರಣ ಮಾಡುವುದಿಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ನಾನು ಸಂವಿಧಾನವನ್ನು ಮತ್ತು ಮಕ್ಕಳನ್ನು ಮೊದಲ ಸ್ಥಾನದಲ್ಲಿ ಮತ್ತು ದೇವರನ್ನು ಎರಡನೇ ಸ್ಥಾನದಲ್ಲಿ ಇಟ್ಟಿದ್ದೇನೆ, ಅವರು ಏನೇನು ಮಾತನಾಡುತ್ತಾರೋ ಮಾತನಾಡಿಕೊಳ್ಳಲಿ ಎಂದರು.

Madhu Bangarappa
ಮಧು ಬಂಗಾರಪ್ಪ, MLCಗಳ ಬಣ್ಣ ಬಯಲು ಮಾಡುತ್ತೇನೆ; Video ಕ್ಲಿಪ್‌ಗಳಿವೆ, CMಗೆ ಕೊಡುತ್ತೇನೆ: ಹೆಚ್.ಎಸ್ ಸುಂದರೇಶ್ ಹೊಸ ಬಾಂಬ್

ಚುನಾವಣೆ ಆಯೋಗ 13 ಕೋಟಿ ಮತದಾರರನ್ನು ಕೈಬಿಡುವುದು ಎಂದರೆ ಏನು..? ದೇಶದ ಚುನಾವಣಾ ವ್ಯವಸ್ಥೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿ, ಒಂದು ದೇಶದಲ್ಲಿ ಎಂತಹ ದೊಡ್ಡ ಆತಂಕ ಎದುರಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಬೆಲೆಯೇ ಇಲ್ಲವೇ? ಎಂದು ಪ್ರಶ್ನಿಸಿದರು.

ಝನ್ ಜಿ ಯುವಕರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಕೇಳುತ್ತಿದ್ದಾರೆ. ಮೊದಲು ಅವರು ರಾಜೀನಾಮೆ ನೀಡಬೇಕು. ಭಾರತದ ಚುನಾವಣಾ ವ್ಯವಸ್ಥೆಯ ಮೇಲೆ ಮುಂದೆ ಎಲ್ಲರೂ ನಂಬಿಕೆ ಕಳೆದುಕೊಳ್ಳುವ ದಿನಗಳು ಬರಬಹುದು ಎಂಬ ಆತಂಕ ನಮಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com