ಕ್ಲಿಕ್.. ವಚನ ಸಂಚಯ

ವೆಬ್ ಸೈಟ್ ಓಪನ್ ಮಾಡಿದ ಕೂಡಲೇ ನಿಮಗೆ ಬೇಕಾದ ಎಲ್ಲಾ ವಚನಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಿ ತೆಗೆಯಬಹುದು. ವಚನಕಾರರ ಹೆಸರು...
ವಚನ ಸಂಚಯ
ವಚನ ಸಂಚಯ
ಹನ್ನೆರಡು ಮತ್ತು ಹದಿಮೂರನೇ ಶತಮಾನದ ವಚನಗಳನ್ನೋದಬೇಕೆ? ಹಾಗಾದರೆ www.vachana.sanchaya.net ವೆಬ್ ಸೈಟಿನ ಒಳಹೊಕ್ಕು ನೋಡಿ.
ಇಲ್ಲಿ  ಸುಮಾರು 259 ವಚನಕಾರರ 20930ಕ್ಕೂ ಅಧಿಕ ವಚನಗಳು ಸಿಗುತ್ತವೆ. ಈ ವಚನ ಸಂಚಯದಲ್ಲಿ  2,09,876ಕ್ಕೂ ಅಧಿಕ ಪದಗಳಿವೆ.
ವೆಬ್ ಸೈಟ್  ಓಪನ್ ಮಾಡಿದ ಕೂಡಲೇ ನಿಮಗೆ ಬೇಕಾದ ಎಲ್ಲಾ ವಚನಗಳನ್ನು ಕ್ಷಣ ಮಾತ್ರದಲ್ಲಿ ಹುಡುಕಿ ತೆಗೆಯಬಹುದು. ವಚನಕಾರರ ಹೆಸರು ಮತ್ತು ವಚನಗಳ ಆರಂಭಿಕ ಪದಗಳನ್ನು ವರ್ಣಮಾಲೆಯ ಅಕ್ಷರಗಳನ್ನು ಕ್ಲಿಕ್ಕಿಸಿದರೆ ಹೊಸ ಲಿಂಕ್  ತೆರೆಯುತ್ತದೆ. ಈ  ಮೂಲಕ ನೇರವಾಗಿ ಅಲ್ಲಿ ವಚನವನ್ನು ಓದಬಹುದಾಗಿದೆ.
ವಚನ ಸಂಚಯದ ರೂವಾರಿಗಳು
ಓ.ಎಲ್‌. ನಾಗಭೂಷಣಸ್ವಾಮಿ ಮತ್ತು ವಸುಧೇಂದ್ರ ಅವರ ಮಾರ್ಗದರ್ಶನದಲ್ಲಿ ಓಂ ಶಿವಪ್ರಕಾಶ್‌ ಎಚ್‌.ಎಲ್(ಕಾರ್ಮಾಟೆಕ್‌ ಐಟಿ ಸಲ್ಯೂಷನ್ಸ್‌ ಕಂಪೆನಿಯಲ್ಲಿ ತಂತ್ರಜ್ಞಾನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ), ಅವರ ಪತ್ನಿ ಪವಿತ್ರಾ (ಟ್ರೆಂಡ್‌ ಮೈಕ್ರೊ ಕಂಪೆನಿಯ ಉದ್ಯೋಗಿ) ಮತ್ತು  ದೇವರಾಜ್‌  (ಕಾರ್ಮಾಟೆಕ್‌ ಕಂಪೆನಿಯಲ್ಲಿ ಡೆವಲಪಿಂಗ್‌ ವಿಭಾಗದ ಉದ್ಯೋಗಿ) ವಚನ ಸಂಚಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಚನ ಸಂಚಯದ ತರನೇ ಕನ್ನಡದ ಕೃತಿಗಳೂ ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ವಚನ ಸಂಚಯದಂತೆ ದಾಸ ಸಂಚಯವೂ ಇದೆ.  ಸರ್ವಜ್ಞ ಸಂಚಯದ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಎಲ್ಲ ವಚನಗಳು ಆನ್ ಲೈನ್ ನಲ್ಲಿ ಸಿಗಬೇಕೆಂಬುದು ನಮ್ಮ ಉದ್ದೇಶ.

- ಓಂಶಿವಪ್ರಕಾಶ್ .ಹೆಚ್.ಎಲ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com