ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನಕ್ಕೊಂದು ವೇದಿಕೆ- ಪುಸ್ತಕ ಸಂಚಯ

ಅಂತರ್ಜಾಲದ ಮೂಲಕ ಪುಸ್ತಕಗಳನ್ನು ಹುಡುಕಲು ಸಾಧ್ಯವಾಗಿಸುವ ಸರ್ಚ್ ಇಂಜಿನ್ ಈ ಪುಸ್ತಕ ಸಂಚಯ. ಒಸ್ಮಾನಿಯ ಯುನಿವರ್ಸಿಟಿಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಂತರ್ಜಾಲದ ಮೂಲಕ ಪುಸ್ತಕಗಳನ್ನು ಹುಡುಕಲು ಸಾಧ್ಯವಾಗಿಸುವ ಸರ್ಚ್ ಇಂಜಿನ್ ಈ ಪುಸ್ತಕ ಸಂಚಯ. ಒಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿ ಮತ್ತು  ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಬಹಳಷ್ಟು ಕನ್ನಡ ಪುಸ್ತಕಗಳಿವೆ. ಅವುಗಳನ್ನು ಓದಬೇಕಾದರೆ ಹುಡುಕುವುದೂ ಕಷ್ಟ. ಇಷ್ಟೇ ಅಲ್ಲ ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಯಲ್ಲಿರುವ ೨೦೦೦ಕ್ಕೂ ಹೆಚ್ಚು ಪುಸ್ತಕಗಳ ಹೆಸರು ಇಂಗ್ಲೀಷ್ ನಲ್ಲಿದ್ದು, ಇವುಗಳನ್ನು ಕನ್ನಡೀಕರಿಸುವುದರ ಜೊತೆಗೆ ಯುನಿಕೋಡ್ ಸರ್ಚ್ ಸೌಲಭ್ಯದ ಮೂಲಕ ಈ ಪುಸ್ತಕಗಳನ್ನು ಕನ್ನಡಿಗರಿಗೆ ಸುಲಭವಾಗಿ ಸಿಗುವಂತೆ ಮಾಡುವ ಯೋಜನೆ ಇದಾಗಿದೆ. ಈ ಮೂಲಕ ವಚನ ಸಂಚಯ ಓದುಗನಿಗೆ ಡಿಜಿಟಲ್ ಲೈಬ್ರರಿಯಲ್ಲಿರುವ ಪುಸ್ತಕಗಳನ್ನು ಸುಲಭವಾಗಿ ಓದಲು ನೆರವಾಗುತ್ತದೆ.
 ಭಾಷಾ ಸಂಶೋಧಕರಿಗೆ ಸಂಶೋಧನಾ ವೇದಿಕೆಯೊಂದನ್ನು ನಿರ್ಮಿಸುವುದರ ಜತೆಗೆ ಶಾಸ್ತ್ರೀಯ ಕನ್ನಡ ಸಾಹಿತ್ಯದ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸುವುದು ಪುಸ್ತಕ ಸಂಚಯದ ಪ್ರಮುಖ ಉದ್ದೇಶ.   ಸಮೂಹ ಸಂಚಯದ ಮೂಲಕ ಕೇವಲ ಸರ್ಚ್ ಸೌಲಭ್ಯ ಕೊಡುವುದಷ್ಟೇ ಅಲ್ಲದೇ ಈ ಎಲ್ಲ ಪುಸ್ತಕಗಳಿಗೆ ಅವುಗಳದ್ದೇ ಆದ ವಿಕಿ ಪುಟಗಳನ್ನು ಕೂಡ ಕನ್ನಡ ವಿಕಿಪೀಡಿಯದಲ್ಲಿ ಲಭ್ಯವಾಗುವಂತೆ ಮಾಡುವುದು ಒಂದೆಡೆಯಾದರೆ ವಿಕಿಪೀಡಿಯದಲ್ಲಿ ಈಗಾಗಲೇ ಲಭ್ಯವಿಲ್ಲದ ಲೇಖಕ/ಲೇಖಕಿಯರ ಪುಟಗಳು, ಕನ್ನಡ ಪುಸ್ತಕ ಪ್ರಕಾಶಕರ ಪುಟಗಳನ್ನೂ ಸೃಷ್ಟಿ ಮಾಡುವುದು ಇದರಿಂದ ಸಾಧ್ಯವಾಗಲಿದೆ.
ಇಲ್ಲಿ ಕ್ರೂಡೀಕರಿಸಲಾಗುವ ಎಲ್ಲ ಮಾಹಿತಿಯನ್ನು ಮುಕ್ತವಾಗಿರುವಂತೆ ಕ್ರಿಯೇಟೀವ್ ಕಾಮನ್ಸ್ ಪರವಾನಗಿಯಡಿ ಇಟ್ಟು, ಕಾಲಕಾಲಕ್ಕೆ ವಿಕಿಪೀಡಿಯದಲ್ಲಿ ಎಲ್ಲ ಪುಸ್ತಕ, ಲೇಖಕ ಹಾಗೂ ಪ್ರಕಾಶಕರ ಪುಟಗಳನ್ನು ಉಲ್ಲೇಖಗಳೊಂದಿಗೆ ಹೆಣೆಯಲು ಪುಸ್ತಕ ಸಂಚಯದ ತಂಡ ನಿರತವಾಗಿದೆ. ಇದಲ್ಲದೆ ಕನ್ನಡದ ಹುಡುಕು ಪದಗಳನ್ನು standardize ಮಾಡುವ ಕ್ರಿಯೆಗಳೂ ನಡೆಯುತ್ತಿವೆ.  
ಕರ್ನಾಟಕದ ಟೆಕಿಗಳಾದ ಓಂ ಶಿವಪ್ರಕಾಶ್ ಹೆಚ್ಎಲ್,  ಪವಿತ್ರಾ ಹೆಚ್ ಮತ್ತು ದೇವರಾಜ್ ಇವರು ಪುಸ್ತಕ ಸಂಚಯದ ರೂವಾರಿಗಳು. 
http://pustaka.sanchaya.net/ ಗೆ ಭೇಟಿ ನೀಡಿದರೆ ಅಲ್ಲಿ ವಿವಿಧ ವಿಭಾಗಗಳಲ್ಲಿ ಲಭ್ಯವಾಗಿರುವ ಪುಸ್ತಕಗಳ ಪಟ್ಟಿ ಸಿಗುತ್ತದೆ.ಪಿಡಿಎಫ್ ಫಾರ್ಮಾಟ್ ನಲ್ಲಿರುವ ಪುಸ್ತಕಗಳನ್ನು ಸುಲಭವಾಗಿ ಡೌನ್ ಲೋಡ್ ಮಾಡಿ ಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com