81ನೇ ಕನ್ನಡ ಸಾಹಿತ್ಯ ಸಮ್ಮೇಳನ (ಸಂಗ್ರಹ ಚಿತ್ರ)
ಸುದ್ದಿ-ಸಮಾಚಾರ
ವೇತನ ನೀಡಿದ ಡಿಸಿಸಿ ಬ್ಯಾಂಕ್ ನೌಕರರು
ಶ್ರವಣಬೆಳಗೊಳ: ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ನೌಕರರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮ್ಮ ಒಂದು ದಿನದ ವೇತನ ನೀಡುವ ಮೂಲಕ ಕನ್ನಡತನ ಮೆರೆದರು.
ನೌಕರರ ಒಂದು ದಿನದ ವೇತನ ಮೊತ್ತ 1.50 ಲಕ್ಷ ರು.ಗಳ ಚೆಕ್ ಅನ್ನು ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅವರು ಜಿಲ್ಲಾಧಿಕಾರಿಗಳಿಗೆ ನೀಡಿದರು. ಸೋಮವಾರ ನಡೆದ ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಹಾಸನ ಜಿಲ್ಲೆಯ ನೌಕರರು ಅರ್ಧ ದಿನದ ವೇತನ ಎಂದೆಲ್ಲ ಮಾತನಾಡದೆ, ಒಂದು ದಿನದ ವೇತನ ನೀಡಿದರೆ ಮಾತ್ರ ಸ್ವೀಕರಿಸಲಾಗುವುದು ಎಂದು ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ಸತೀಶ್ ತಿಳಿಸಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ನೌಕರರ ಒಂದು ದಿನದ ವೇತನದಲ್ಲಿ ಶೇ.50ರಷ್ಟನ್ನು ಕೊಡಿಸಲಾಗದ, ಚನ್ನರಾಯಪಟ್ಟಣ ತಾಲೂಕಿನವರೆ ಆದ ರಾಜ್ಯ ನೌಕರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡರು, ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದು ಸಾಹಿತ್ಯಾಸಕ್ತರಲ್ಲಿ ಅಸಮಾಧಾನ ಮೂಡಿಸಿತು.

