ಅಕ್ಷರ ಜಾತ್ರೆಗೆ ವೈಭವಯುತ ತೆರೆ

ಶ್ರವಣಬೆಳಗೊಳದ ಗೊಮ್ಮಟನ ಸಮ್ಮುಖದಲ್ಲಿ 3 ದಿನಗಳ ಕಾಲ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ವೈಭವಯುತ ತೆರೆ ಎಳೆಯಲಾಯಿತು.
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ (ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: ಶ್ರವಣಬೆಳಗೊಳದ ಗೊಮ್ಮಟನ ಸಮ್ಮುಖದಲ್ಲಿ 3 ದಿನಗಳ ಕಾಲ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ವೈಭವಯುತ ತೆರೆ ಎಳೆಯಲಾಯಿತು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಸೇರಿದಂತೆ ನಾಡಿನ ಎಲ್ಲ ಕಡೆಯಿಂದಲೂ ಕನ್ನಡ ಮನಸುಗಳು ಬಂದಿದ್ದರಿಂದ ಶ್ರವಣಬೆಳಗೊಳದಲ್ಲಿ ಇಡೀ ಕರ್ನಾಟಕ ಇತ್ತು. ಹರಿದು ಬಂದ ಜನಸಾಗರಕ್ಕೆ ಯಾವುದೇ ಆಡಚಣೆಯಾಗದಂತೆ ಊಟ ಮತ್ತಿತರ ವ್ಯವಸ್ಥೆಯನ್ನು ಮಾಡಿದ್ದು ಮೆಚ್ಚುಗೆಯಾಗಿತ್ತು.

ಕೇವಲ 45 ದಿನಗಳಲ್ಲಿ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡ ಆಯೋಜಕರ ನಿಷ್ಠೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕನ್ನಡ ಪ್ರೀತಿ, ಕನ್ನಡ ಬದ್ಧತೆ ಬೇಕು. ಆ ಬದ್ಥತೆಯನ್ನು ಚಾರುಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ದುಡಿದ ಪರಿಣಾಮ ಸಮ್ಮೇಳನ ಯಶಸ್ವಿಯಾಗಲು ಸಾಧ್ಯವಾಯಿತು.

ಸಮ್ಮೇಳನಕ್ಕೆ ಬಂದಿದ್ದ ಹಿರಿಯ ಸಾಹಿತಿ ಡಾ.ಸಾ.ಶಿ. ಮರುಳಯ್ಯನವರು `ಇಂತಹ ಭವ್ಯ ವೇದಿಕೆ ಮತ್ತು ವೈಭವಯುತ ಸಮ್ಮೇಳನವನ್ನು ಇದೇ ಮೊದಲು ನೋಡಿದ್ದು' ಎಂಬ ಉದ್ಘಾರ ಸಮ್ಮೇಳನದ ವೈಭವ ಮತ್ತು ಯಶಸ್ವಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನಾಧ್ಯಕ್ಷ ಡಾ. ಸಿದ್ಧಲಿಂಗಯ್ಯ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮತ್ತಿತರರು ಪ್ರಸ್ತುತ ಕನ್ನಡ ಮತ್ತು ಕನ್ನಡಿಗರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬದ್ಧತೆ ತೋರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com